ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಿಂಧೂರತ್ನ’ ಅಪಘಾತ: ಅಧಿಕಾರಿಗಳ ವಿರುದ್ಧ ಕ್ರಮ

Last Updated 25 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್‌): ಜಲಾಂತ­ರ್ಗಾಮಿ ಐಎನ್‌ಎಸ್‌ ಸಿಂಧೂರತ್ನದಲ್ಲಿ ನಡೆದ ಅಪಘಾತ ಬಗ್ಗೆ ತನಿಖೆ ನಡೆಸು­ತ್ತಿ­ರುವ ತನಿಖಾ ಮಂಡಳಿ ಏಳು ಅಧಿ­ಕಾರಿ­ಗಳನ್ನು ತಪ್ಪಿತಸ್ಥರೆಂದು ಗುರು­ತಿ­ಸಿದ್ದು, ಇವರ ವಿರುದ್ಧ ಶಿಸ್ತು­ ಕ್ರಮ ಕೈಗೊ­ಳ್ಳ­ಲಾಗುತ್ತಿದೆ ಎಂದು ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ರಾಜ್ಯಸಭೆಗೆ ತಿಳಿಸಿದರು.

ಆದರೆ ಐಎನ್‌ಎಸ್‌ ಸಿಂಧೂರಕ್ಷಕ­ದಲ್ಲಿ ನಡೆದ ಅಪಘಾತ ಪ್ರಕರಣ­ದಲ್ಲಿ ತನಿಖಾ ಮಂಡಳಿಯ ವರದಿ­ ಪರಿಶೀಲನೆ ಇನ್ನೂ ಮುಗಿದಿಲ್ಲ ಎಂದು ಹೇಳಿದರು.

ಕಳೆದ ವರ್ಷದ ಆಗಸ್ಟ್‌ 14ರಂದು ಐಎನ್‌ಎಸ್‌ ಸಿಂಧೂರಕ್ಷಕದಲ್ಲಿ ನಡೆದ ಸ್ಫೋಟದಿಂದ ನೌಕೆ ಮುಳುಗಿ, 18 ಯೋಧರು ಮೃತ­ಪಟ್ಟಿದ್ದರು ಮತ್ತು ಈ ವರ್ಷದ ಫೆ. 26ರಂದು ನಡೆದ ಐಎನ್‌ಎಸ್‌ ಸಿಂಧೂರತ್ನ ಅಪಘಾತ­ದಲ್ಲಿ ನಾವಿಕ­ರಿಬ್ಬರು ಅಸುನೀಗಿದ್ದರು. ಇವೆ­ರೆಡು ಪ್ರಕರಣಗಳ ಕುರಿತ ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT