ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಜನಾ’ಗೆ ಅಳಿಕೆ ರಾಮಯ್ಯ ದತ್ತಿನಿಧಿ ಪ್ರಶಸ್ತಿ

Last Updated 17 ಫೆಬ್ರುವರಿ 2014, 8:14 IST
ಅಕ್ಷರ ಗಾತ್ರ

ಸುಳ್ಯ:ಬೆಂಗಳೂರಿನ ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ಕೊಡಮಾಡುವ ರಾಮಯ್ಯ ದತ್ತಿನಿಧಿ ಪ್ರಶಸ್ತಿಯನ್ನು ಸುಳ್ಯದ ಹಿರಿಯ ಯಕ್ಷಗಾನ ಕಲಾವಿದ ಸುಜನಾ ಸುಳ್ಯರವರಿಗೆ ಅವರ ಸ್ವಗೃಹ ಸುಳ್ಯದ ರಂಗಮನೆಯಲ್ಲಿ ಶುಕ್ರವಾರ ಪ್ರದಾನ ಮಾಡ­ಲಾಯಿತು.

ಕರಾವಳಿಯ ಅನೇಕ ಪ್ರಸಿದ್ಧ ಮೇಳಗಳಲ್ಲಿ 36 ವರ್ಷ ಯಕ್ಷಗಾನ ಸೇವೆಗೈದು ಯಕ್ಷಗಾನದ ಸವ್ಯ­ಸಾಚಿ ಎನಿಸಿಕೊಂಡ ಸುಜನಾ ಅವರಿಗೆ ಈ ಪ್ರಶಸ್ತಿಯನ್ನು ಅಳಿಕೆ ರಾಮಯ್ಯ ರೈ ಅವರ ಪುತ್ರರಾದ ಬಾಲಕೃಷ್ಣ ರೈ, ದುರ್ಗಾಪ್ರಸಾದ್ ರೈ, ಅಳಿಯ ಮಹಾಬಲ ರೈ, ರಶ್ಮಿ ದುರ್ಗಾಪ್ರಸಾದ್ ಮತ್ತು ಟ್ರಸ್ಟಿನ ಗೌರವ ಸದಸ್ಯರಾದ ಕಲಾವಿದ ಉಬರಡ್ಕ ಉಮೇಶ್ ಶೆಟ್ಟಿ ಇವರು ಫಲಪುಷ್ಪ, ಶಾಲು, ಸನ್ಮಾನ ಫಲಕ ಮತ್ತು ₨ 10,000ದೊಂದಿಗೆ ಸನ್ಮಾನಿಸಿದರು.

ಉಬರಡ್ಕ ಉಮೇಶ್ ಶೆಟ್ಟಿಯವರು ಸುಜನಾರ ಅವರೊಂದಿಗಿನ ಅವರ ಯಕ್ಷರಂಗದ ಒಡನಾಟವನ್ನು ಭಾವಪೂರ್ಣವಾಗಿ ನೆನಪಿಸಿಕೊಂಡರು. ಸಾಹಿತಿ­ಗಳಾದ ಪ್ರಭಾಕರ ಶಿಶಿಲ, ಸುಂದರ ಕೇನಾಜೆ, ಎಂ.ಜಿ.ಕೆ.ಆಚಾರ್ಯ, ಸುಜನಾ ಪುತ್ರ ಜೀವನ್‌­­ರಾಂ ಸುಳ್ಯ, ಸೊಸೆ ಮೌಲ್ಯ ಜೀವನ್ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT