ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘48 ಗಂಟೆಯಲ್ಲಿ ಕಮಿಷನರ್‌ ಮನೆಗೆ ಹೋಗ್ತಾರೆ’

ಎಸ್‌.ಆರ್‌.ವಿಶ್ವನಾಥ್‌ ಪ್ರಕರಣ: ಹೈಕೋರ್ಟ್‌ ಚಾಟಿ
Last Updated 23 ಜುಲೈ 2014, 20:17 IST
ಅಕ್ಷರ ಗಾತ್ರ

ಬೆಂಗಳೂರು: ಶಾಸಕ ಎಸ್‌.ಆರ್‌.­ವಿಶ್ವನಾಥ್‌ ವಿರುದ್ಧ ದೂರು ದಾಖ­ಲಿಸಿ­ಕೊಳ್ಳದ ಯಲ­ಹಂಕ ಠಾಣೆ ಪೊಲೀಸ್‌  ಇನ್‌ಸ್ಪೆಕ್ಟರ್‌ ವಿರುದ್ಧ ಹೈಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತು. ‘ದೂರು ಸ್ವೀಕರಿಸಿ ಎಫ್‌ಐಆರ್‌ ದಾಖ­ಲಿ­ಸದೇ ಹೋದರೆ 48 ಗಂಟೆ­ಯೊಳಗೆ ಬೆಂಗಳೂರು ಪೊಲೀಸ್‌ ಕಮಿಷ­ನರ್‌ ರಾಜೀ­ನಾಮೆ ನೀಡುವು­ದನ್ನು ನೋಡುವ ಸಮಯ ಬರಲಿದೆ’ ಎಂದು ಖಡಕ್‌ ಎಚ್ಚರಿಕೆ ನೀಡಿತು. ಶಶಿಧರ್‌ ಎಂಬವರು ಸಲ್ಲಿಸಿ­ರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ರಾಮಮೋಹನ ರೆಡ್ಡಿ ಅವರಿದ್ದ ಪೀಠವು ಬುಧವಾರ ವಿಚಾರಣೆ ನಡೆಸಿತು.

ಪ್ರಕರಣದ ವಿವರ: 2000–2005ರಲ್ಲಿ ಎಸ್.ಆರ್‌.­ವಿಶ್ವನಾಥ್‌ ಬೆಂಗಳೂರು ನಗರ ಜಿಲ್ಲಾ ಪಂಚಾ­ಯ್ತಿಯ ಹೆಸರ­ಘಟ್ಟ ಕ್ಷೇತ್ರದಿಂದ ಆರಿಸಿ ಬಂದಿದ್ದರು. ಚುನಾವಣೆಗೆ ಸ್ಪರ್ಧಿ­ಸುವ ಸಮಯದಲ್ಲಿ ಅವರು ಎಚ್‌ಎಎಲ್‌­ನಲ್ಲಿ ಉದ್ಯೋಗಿ­ಯಾ­ಗಿ­ದ್ದರು. ಚುನಾ­ವ­­­ಣೆ­ಯಲ್ಲಿ ಗೆದ್ದ ಬಳಿಕ ಅವರು ಕಾರ್ಖಾ­ನೆ­­ಯಲ್ಲಿ ಉದ್ಯೋಗಿಯಾ­ಗಿಯೇ ಮುಂದುವರಿದು ಮಾಸಿಕ  ವೇತನ ಪಡೆ­ದಿದ್ದರು. ಅಂತೆಯೇ ಜಿಲ್ಲಾ ಪಂಚಾಯ್ತಿ ಪ್ರತಿನಿಧಿ­ಯಾಗಿ ಸರ್ಕಾ­ರದ ಗೌರವಧನವನ್ನೂ ಪಡೆದಿದ್ದರು.

ಶಶಿಧರ್‌ ಅವರು ವಿಶ್ವನಾಥ್‌ ವಿರುದ್ಧ ಯಲಹಂಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖ­ಲಿಸಲು ಹೋಗಿದ್ದರು. ಆದರೆ ಪ್ರಕರಣ ದಾಖಲಿಸುವಲ್ಲಿ ಇನ್‌ಸ್ಪೆಕ್ಟರ್‌  ‘ಇದು ನನ್ನ ಠಾಣೆಯ ವ್ಯಾಪ್ತಿಗೆ ಬರು­ವುದಿಲ್ಲ’ ಎಂಬ ಉತ್ತರ ನೀಡಿ ನುಣುಚಿ­ಕೊಂಡಿದ್ದರು. ಇದನ್ನು ಪ್ರಶ್ನಿಸಿ ಶಶಿಧರ್‌ ಅವರು ಮೇಲಧಿ­ಕಾ­ರಿ­ಗ­ಳಿಗೆ ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನ­ವಾಗಿರಲಿಲ್ಲ. ಹೀಗಾಗಿ ಶಶಿಧರ್‌ ಹೈಕೋರ್ಟ್‌­ನಲ್ಲಿ ರಿಟ್ ಅರ್ಜಿ ಸಲ್ಲಿ­ಸುವ ಮೂಲಕ ಪರಿಹಾರ ಕೋರಿದ್ದರು.

ಅರ್ಜಿ ವಿಚಾರಣೆ ನಡೆ­ಸಿದ್ದ ನ್ಯಾ.ರಾಮಮೋಹನ ರೆಡ್ಡಿ ಅವ­ರಿದ್ದ ಪೀಠವು ಸೂಕ್ತ ವಿವರಣೆ ನೀಡಲು ಅಂದು ದೂರು ದಾಖ­ಲಿ­ಸಿ­ಕೊಳ್ಳುವಲ್ಲಿ ನುಣುಚಿಕೊಂಡ ಇನ್‌ಸ್ಪೆ­ಕ್ಟರ್‌ ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಿತ್ತು. ಆದರೆ ಇನ್‌ಸ್ಪೆಕ್ಟರ್‌ ಗೈರು ಹಾಜರಾಗಿದ್ದರು. ಹೀಗಾಗಿ ಪೀಠವು ಪೊಲೀಸ್‌ ಕಮಿಷನರ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.

ನಿತ್ಯಾನಂದ ಸ್ವಾಮಿ ಅರ್ಜಿ ವಜಾ: ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿಯ ಪುರುಷತ್ವ ಪರೀಕ್ಷೆಗೆ ಸಂಬಂಧಿ­ಸಿ­ದಂತೆ ಈ ಹಿಂದೆ ನೀಡಿದ್ದ ಆದೇಶವನ್ನು ಹೈಕೋರ್ಟ್‌ ಬುಧವಾರ ಕಾಯಂಗೊಳಿಸಿದೆ. ‘ಆದೇಶ ನೀಡಿದ ದಿನದಂದು ನನ್ನ ಪರ ವಕಾಲತ್ತು ವಹಿಸಿದ್ದ ವಕೀ­ಲರು ಹಾಜರಿರಲಿಲ್ಲ. ಆದ್ದರಿಂದ ಪುನರ್‌ ವಿಚಾ­ರಣೆಗೆ ಅವಕಾಶ ನೀಡ­ಬೇ­ಕೆಂದು’ ಕೋರಿ ನಿತ್ಯಾನಂದ ಮಧ್ಯಾಂ­­­ತರ ಅರ್ಜಿ ಸಲ್ಲಿಸಿದ್ದರು. ಆದರೆ ಹೈಕೋರ್ಟ್‌ ಅರ್ಜಿ ವಜಾ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT