ಶ್ರೀನಗರ(ಪಿಟಿಐ): ರಾಷ್ಟ್ರದಲ್ಲಿ ಭಯೋತ್ಪಾದನೆ ಕೃತ್ಯ ಎಸಗಲು ಸಂಚು ರೂಪಿಸಿ ಕಾರ್ಯಪ್ರವೃತ್ತರಾಗಿದ್ದ 10 ಉಗ್ರರನ್ನು ಹತ್ಯೆಗೈಯುವ ಮೂಲಕ ಶೌರ್ಯ ಮೆರೆದ ವಿಶೇಷ ದಳದ ಕಮಾಂಡೊ ಲ್ಯಾನ್ಸ್ ನಾಯಕ್ ಮೋಹನ್ನಾಥ್ ಗೋಸ್ವಾಮಿ ಉಗ್ರರ ವಿರುದ್ಧ ಹೋರಾಡುತ್ತಲೇ ಗುರುವಾರ ಅಮರರಾಗಿದ್ದಾರೆ.

ಗೋಸ್ವಾಮಿ ಅವರು ಕಾಶ್ಮೀರ ಕಣಿವೆಯಲ್ಲಿ ಕಳೆದ 11 ದಿನಗಳಲ್ಲಿ ಮೂರು ಬಾರಿ ನಡೆದ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಈ ಮೂರು ಕಾರ್ಯಾಚರಣೆಗಳು ಸೇರಿ ಅವರು ಒಟ್ಟು 10 ಮಂದಿ ಉಗ್ರರನ್ನು ಹೊಡೆದುರುಳಿಸಿದ್ದರು. ಗುರುವಾರ ಹಂದ್ವಾರದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹತ್ಯೆಗೈದ ಅವರು, ಹೋರಾಡುತ್ತಲೇ ವೀರ ಮರಣ ಅಪ್ಪಿದ್ದರು.

ಗೋಸ್ವಾಮಿ ಅವರು 2002ರಲ್ಲಿ ಸ್ವಯಂ ಸ್ಫೂರ್ತಿಯಿಂದ ಸೇನೆಗೆ ಸೇರಿದ್ದರು. ವಿಶೇಷ ಕಮಾಂಡೊ ಪಡೆಯಲ್ಲಿ ಸಾಮರ್ಥ್ಯ ತೋರಿ, ಬಹುಬೇಗನೆ ಅತ್ಯುತ್ತಮ ಕಮಾಂಡೊ ಎಂದು ಮೆಚ್ಚುಗೆ ಪಡೆದಿದ್ದರು.

ಗೋಸ್ವಾಮಿ ಅವರು ನೈನಿತಾಲ್ ಜಿಲ್ಲೆಯ ಹಲ್ಡ್ವಾನಿಯ ಇಂದಿರಾ ನಗರ ಗ್ರಾಮದ ನಿವಾಸಿ. ಇವರಿಗೆ ಪತ್ನಿ ಹಾಗೂ ಏಳು ವರ್ಷದ ಪುತ್ರಿ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.