ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಮಂದಿಗೆ ಸಾಹಿತ್ಯ ಅಕಾಡೆಮಿ ಗೌರವ

2010–11ರ ಸಾಲಿನ 4 ದತ್ತಿನಿಧಿ ಬಹುಮಾನ ಪ್ರಕಟ
Last Updated 17 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2011–12ನೇ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿ, 2010–11ರ ಸಾಲಿನ ಪುಸ್ತಕ ಬಹುಮಾನ ಹಾಗೂ 2010–11ರ ಸಾಲಿನ 4 ದತ್ತಿನಿಧಿ ಬಹುಮಾನ ಪ್ರಕಟವಾಗಿದೆ.

2011ರ ಸಾಲಿನ ಗೌರವ ಪ್ರಶಸ್ತಿಗೆ ಡಾ.ಮ.ಸು.ಕೃಷ್ಣಮೂರ್ತಿ (ಮೈಸೂರು), ಪ್ರೊ. ಬಿ.ವಿ. ವೀರಭದ್ರಪ್ಪ (ದಾವಣಗೆರೆ), ಡಾ. ವಿಜಯಾ  ಸುಬ್ಬರಾಜ್‌ (ಬೆಂಗ­ಳೂರು), ಡಾ. ಸತ್ಯಾನಂದ ಪಾತ್ರೋಟ (ಬೆಳಗಾವಿ), ಡಾ.ಕೆ.ಷರೀಫಾ (ಕಲಬುರ್ಗಿ) ಆಯ್ಕೆಯಾಗಿದ್ದಾರೆ.

2012ರ ವರ್ಷದ ಗೌರವ ಪ್ರಶಸ್ತಿ ಚಂದ್ರಪ್ಪ ಹೆಬ್ಬಾಳ್ಕರ್‌ (ಕಲಬುರ್ಗಿ), ಪ್ರೊ. ಎಂ.ಎಚ್.ಕೃಷ್ಣಯ್ಯ (ಮೈಸೂರು) ಪ್ರೊ.ಎಸ್‌.ಜಿ.ಸಿದ್ಧರಾಮಯ್ಯ (ಬೆಂಗಳೂರು), ಯಳನಾಡು ಆಂಜನಪ್ಪ (ಹಿರಿಯೂರು), ಡಾ. ಹನುಮಾಕ್ಷಿ ಗೋಗಿ (ಬೆಳಗಾವಿ) ಇವರಿಗೆ ಸಂದಿದೆ.
ಇದೇ ಮೊದಲ ಬಾರಿಗೆ  ಕಂದಾಯ ವಿಭಾಗವಾರು ಸಾಹಿತಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿಯ ಅಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರು ಬುಧವಾರ ಪತ್ರಿಕಾಗೋಷ್ಠಿ­ಯಲ್ಲಿ ತಿಳಿಸಿದರು.
ಗೌರವ ಪ್ರಶಸ್ತಿಗಳು ₨ 10 ಸಾವಿರ ಮತ್ತು ಪುಸ್ತಕ ಬಹುಮಾನ ₨ 5 ಸಾವಿರ ನಗದು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಜನವರಿ 22ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಪುಸ್ತಕ ಬಹುಮಾನ ವಿವರ-–2010ರ ಪುಸ್ತಕ ಬಹುಮಾನ
* ಕಾವ್ಯ : ನೆಲದ ಕರುಣೆಯ ದನಿ –ವೀರಣ್ಣ ಮಡಿವಾಳರ
* ಕಾದಂಬರಿ: ಹದ್ದು–ಕಮಲಾ ನರಸಿಂಹ
* ಸಣ್ಣಕತೆ: ಸಿಲೋನ್‌ ಸುಶೀಲಾ, ಹಾವಾಡಿಗ, ಮೀಸೆ ಹೆಂಗಸು ಮತ್ತು ಇತರರು– ಉಮಾರಾವ್‌
* ನಾಟಕ: ಇನ್ನೊಂದು ಸಭಾಪರ್ವ–ಲಲಿತಾ ಸಿದ್ಧಬಸವಯ್ಯ
* ಲಲಿತ ಪ್ರಬಂಧ: ಅಪರ ವಯಸಿನ ಪ್ರವಾಸ ಕಥನ– ಶರಣಗೌಡ ಎರಡೆತ್ತಿನ
* ಪ್ರವಾಸ ಸಾಹಿತ್ಯ: ಕೈಲಾಸ ಮಾನಸ– ವೆಂಕಟೇಶ ಮಾಚಕನೂರ
* ಜೀವನ ಚರಿತ್ರೆ: ಗಂಗಾವತರಣ (ಗಂಗೂಬಾಯಿ ಹಾನಗಲ್ ಜೀವನ ಚರಿತ್ರೆ)– ದಮಯಂತಿ ನರೇಗಲ್ಲ
* ಸಾಹಿತ್ಯ ವಿಮರ್ಶೆ: ನೆನೆವ ಪರಿ– ಡಾ. ಕೆ.ವೈ. ನಾರಾಯಣಸ್ವಾಮಿ
* ಗ್ರಂಥ ಸಂಪಾದನೆ: ಉದ್ಧರಣೆ ಸಾಹಿತ್ಯ– ಡಾ.ಕೆ. ರವೀಂದ್ರನಾಥ
* ಮಕ್ಕಳ ಸಾಹಿತ್ಯ: ‘ರಂಗಶಾಲೆ’ ಮಕ್ಕಳ ನಾಟಕಗಳು– ಡಾ. ಎಲ್‌.ಜಿ.ಮೀರಾ
* ವಿಜ್ಞಾನ ಸಾಹಿತ್ಯ: ಕಂಪ್ಯೂಟರ್‌ ಊಟ, ಹಳ್ಳಿ ಮಾರಾಟ– ಶಿವಾನಂದ ಕಳವೆ
* ಮಾನವಿಕ: ಮುಂಬೈ ಕರ್ನಾಟಕ­ದಲ್ಲಿ ಸವಿನಯ ಕಾನೂನುಭಂಗ ಚಳವಳಿ–ಡಾ. ಜಿ.ಎ.ಬಿರಾದಾರ
* ಸಂಶೋಧನೆ: ಪಳಯನ್ನರು ಮತ್ತು ದ್ರೌಪದಿ– ವೇಣುಗೋಪಾಲ
* ಅನುವಾದ –1(ಸೃಜನಶೀಲ): ದೇಶ ವಿಭಜನೆಯ ಕಥೆಗಳು– ಫಕೀರ್‌ ಮಹ್ಮದ್‌ ಕಟ್ಪಾಡಿ
* ಅನುವಾದ–2(ಸೃಜನೇತರ): ಸ್ಮೃತಿ–ವಿಸ್ಮೃತಿ ಭಾರತೀಯ ಸಂಸ್ಕೃತಿ–ಡಾ.ರಾಜಾರಾಮ ಹೆಗಡೆ
* ಸಂಕೀರ್ಣ: ಗಾಳಿಗಮಲು–ಮಂಜುನಾಥ ಅದ್ದೆ
* ಲೇಖಕರ ಮೊದಲ ಕೃತಿ: ಶುದ್ಧಗೆ–ಡಾ.ಎಸ್‌.ವಿ.ಕಶ್ಯಪ್‌

2011ರ ಪುಸ್ತಕ ಬಹುಮಾನ
* ಕಾವ್ಯ: ಭೂಮಿ ತಿರುಗುವ ಶಬ್ಧ–ಚನ್ನಪ್ಪ ಅಂಗಡಿ
* ಕಾದಂಬರಿ: ಬರೀ ಎರಡು ರೆಕ್ಕೆ–ಸುನಂದಾ ಪ್ರಕಾಶ ಕಡಮೆ
* ಸಣ್ಣಕತೆ: ಚೌಕಟ್ಟಿನಾಚೆಯವರು–ಗೀತಾ ವಸಂತ
* ನಾಟಕ: ನಮ್ಮೆಲ್ಲರ ಬುದ್ಧ– ಡಾ. ಲೋಕೇಶ್‌ ಅಗಸನಕಟ್ಟೆ
* ಲಲಿತ ಪ್ರಬಂಧ: ಕಳ್ಳೀ ಹಾಲು–ಈರಪ್ಪ ಎಂ. ಕಂಬಳಿ
* ಪ್ರವಾಸ ಸಾಹಿತ್ಯ: ಲೇಹ್‌ ಜಾಯೆಂಗೇ–ಸತ್ಯಮೂರ್ತಿ ಆನಂದೂರು
* ಜೀವನಚರಿತ್ರೆ: ಕಾಡ ತೊರೆಯ ಜಾಡು (ಕಡಿದಾಳು ಶಾಮಣ್ಣ ಜೀವನಚರಿತ್ರೆ)– ಕೆ. ಅಕ್ಷತಾ
* ಸಾಹಿತ್ಯ ವಿಮರ್ಶೆ: ಒಳಗೆ ಸತ್ತು ಹೊರಗೆ– ಡಾ. ಮಲ್ಲಿಕಾ ಘಂಟಿ
* ಗ್ರಂಥ ಸಂಪಾದನೆ: ಕನಕ ಕಾವ್ಯ ಸಂಪುಟ–ಪ್ರೊ.ಎ.ವಿ.ನಾವಡ
* ಮಕ್ಕಳ ಸಾಹಿತ್ಯ: ಒಂದು ಚಂದ್ರನ ತುಂಡು– ಮುದ್ದು ತೀರ್ಥಹಳ್ಳಿ (ವಿತಾಶಾರಿಯಾ)
* ವಿಜ್ಞಾನ ಸಾಹಿತ್ಯ: ವರ್ಣ ಮಾಯಾ ಜಾಲ– ಡಾ.ಎನ್‌.ಎಸ್‌. ಶೀಲಾ
* ಮಾನವಿಕ: ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ–2 (ಮಧ್ಯಕಾಲೀನ ಸಾಹಿತ್ಯ) –ಡಾ. ಸಿ. ವೀರಣ್ಣ
* ಸಂಶೋಧನೆ: ಹಾಲುಮತ ಸಂಸ್ಕೃತಿ–ಡಾ. ಎಫ್‌.ಟಿ. ಹಳ್ಳಿಕೇರಿ
* ಅನುವಾದ –1(ಸೃಜನಶೀಲ): ಕಡಲಾಚೆಯ ಚೆಲುವೆ– ಕೇಶವ ಮಳಗಿ
* ಅನುವಾದ–2(ಸೃಜನೇತರ): ಬೆಳಕು ನೆರಳು– ಶಾಂತಾ ನಾಗರಾಜ್‌ ಮತ್ತು ಪಿ.ಎಸ್‌.ಗೀತಾ
* ಸಂಕೀರ್ಣ: ಹರದೇಶಿ, ನಾಗೇಶಿ ಕಲೆ ಮತ್ತು ಕಲಾವಿದರು–ಡಾ. ಶೈಲಜಾ ಹಿರೇಮಠ
* ಲೇಖಕರ ಮೊದಲ ಕೃತಿ: ಕಾಡಿನ ಸಂತ–ತೇಜಸ್ವಿ ನೆನಪುಗಳು– ಧನಂಜಯ ಜೀವಾಳ ಬಿ.ಕೆ.

2010ರ ದತ್ತಿನಿಧಿ ಬಹುಮಾನ
* ಜೀವನಚರಿತ್ರೆ(ಸಿಂಪಿಲಿಂಗಣ್ಣ ದತ್ತಿ)
: ಬದುಕೇ ಜಾನಪದ–ಜಿ.ಬಿ. ಖಾಡೆ
* ಸಾಹಿತ್ಯ ವಿಮರ್ಶೆ (ಶ್ರೀನಿವಾಸರಾವ್‌ ದತ್ತಿ): ಮಾಧ್ಯಮ ಮಾರ್ಗ– ಪ್ರೊ. ಎನ್‌. ಮನು ಚಕ್ರವರ್ತಿ
* ಲೇಖಕರ ಮೊದಲ ಸ್ವತಂತ್ರ ಕೃತಿ (ಮಧುರಚೆನ್ನ ದತ್ತಿ): ಹಾವು ನಾವು–ಗುರುರಾಜ ಸನಿಲ್‌
* ಕನ್ನಡದಿಂದ ಇಂಗ್ಲಿಷಿಗೆ ಅನುವಾದ (ಅಮೇರಿಕನ್ನಡ ದತ್ತಿ): ನಳ ಚರಿತ್ರೆ– ಡಾ.ಡಿ.ಎ. ಶಂಕರ್‌

2011ರ ದತ್ತಿನಿಧಿ ಬಹುಮಾನ
* ಜೀವನಚರಿತ್ರೆ (ಸಿಂಪಿ ಲಿಂಗಣ್ಣ ದತ್ತಿ):
ಆಡು ಕಾಯೋ ಹುಡುಗನ ಡೈರಿ–ಟಿ.ಎಸ್‌. ಗೊರವರ
* ಸಾಹಿತ್ಯ ವಿಮರ್ಶೆ (ಶ್ರೀನಿವಾಸರಾವ್‌ ದತ್ತಿ): ಅಭಿವ್ಯಕ್ತಿ ಮತ್ತು ಅರ್ಥ ವಿನ್ಯಾಸ– ಡಾ.ಗುರುಪಾದ ಮರಿಗುದ್ದಿ
* ಲೇಖಕರ ಮೊದಲ ಸ್ವತಂತ್ರ ಕೃತಿ (ಮಧುರಚೆನ್ನ ದತ್ತಿ): ಜೋಡಾಟ–ಡಾ. ನಾಗವೇಣಿ ಮಂಚಿ
* ಕನ್ನಡದಿಂದ ಇಂಗ್ಲಿಷಿಗೆ ಅನುವಾದ (ಅಮೆರಿಕ ಕನ್ನಡ ದತ್ತಿ): ರಿ–ಕಗ್ನಿಷನ್‌– ಕೆ. ರಾಘವೇಂದ್ರ ರಾವ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT