ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20ರಂದು ಪ್ರತಿಭಟನೆ

ಹೆದ್ದಾರಿಯಲ್ಲಿ ಸುಂಕ ವಸೂಲು ವಿರುದ್ಧ ಹೋರಾಟ
Last Updated 16 ಸೆಪ್ಟೆಂಬರ್ 2014, 9:09 IST
ಅಕ್ಷರ ಗಾತ್ರ

ಕೋಲಾರ: ಬೆಂಗಳೂರು –ಚೆನ್ನೈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸದೆಯೇ ವಾಹನ ಸವಾರ­ರಿಂದ ಸುಂಕ ವಸೂಲು ಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ನಗರದಿಂದ ಮುಳಬಾಗಲು ತಾಲ್ಲೂಕಿನ ಹನುಮನಹಳ್ಳಿ ಸುಂಕ ವಸೂಲು ಕೇಂದ್ರದವರೆಗೆ ಪ್ರತಿ­ಭಟನಾ ಬೈಕ್‌ ರ್‌್ಯಾಲಿ ನಡೆಸಲು ಮುಖಂಡರ ಸಭೆಯಲ್ಲಿ ಸೋಮವಾರ ನಿರ್ಧರಿಸಲಾಗಿದೆ.

ನಗರದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಸಂಘ–ಸಂಸ್ಥೆಗಳ ಮುಖಂಡರು. ಹೆದ್ದಾರಿ ಪ್ರಾಧಿಕಾರದ ಅವೈಜ್ಞಾನಿಕ ಕಾಮಗಾರಿಗಳ ಪರಿಣಾಮವಾಗಿ ಸಂಭ­ವಿಸುತ್ತಿರುವ ಅಪಘಾತಗಳಲ್ಲಿ ನೂರಾರು ಮಂದಿ ಸಾವಿಗೀಡಾ­ಗುತ್ತಿ­ದ್ದಾರೆ. ಹಲವು ವರ್ಷಗಳಾದರೂ ಕಾಮಗಾರಿ ಪೂರ್ಣಗೊಳಿಸದೇ ಪ್ರಾಧಿ­ಕಾರ ಜನರ ಜೀವದೊಂದಿಗೆ ಚೆಲ್ಲಾಟ­ವಾಡುತ್ತಿದೆ ಎಂದು ಆಕ್ರೋಶ ವ್ಯಕ್ತ­ಪಡಿಸಿದರು.

ಪ್ರಾಧಿಕಾರದ ವಿರುದ್ಧ ಇದು­ವರೆಗೂ ಸೌಮ್ಯಧೋರಣೆಯ ಪ್ರತಿಭಟನೆಯನ್ನೇ ನಡೆಸುತ್ತಿ­ರುವು­ದರಿಂದ ಯಾವ ಪ್ರಯೋ­­­ಜನವೂ ಆಗಿಲ್ಲ. ಹೀಗಾಗಿ ಪ್ರತಿಭಟನಾ ಮೆರವಣಿಗೆ ಹಮ್ಮಿ­ಕೊಳ್ಳುವುದು ಲೇಸು ಎಂದು ಮುಖಂಡರು ಸಲಹೆ ನೀಡಿ­ದರು. ಬೆಂಗಳೂರಿನಿಂದ ಮುಳಬಾಲು ತಾಲ್ಲೂಕಿನ ನಂಗಲಿಯವರಗೆ ಹಲವು ಕಡೆ ಸಾರ್ವಜನಿಕರಿಗೆ ಮತ್ತು ರೈತರಿಗೆ ಅನುಕೂಲವಾಗು ರೀತಿಯಲ್ಲಿ ಮೇಲ್ಸೇ­ತುವೆ ಅಥವಾ ಕೆಳ ಸೇತುವೆ­ಗಳನ್ನು ನಿರ್ಮಾಣ ಮಾಡಬೇಕಾಗಿತ್ತು,
ಹೆದ್ದಾರಿ 4ರ ರಸ್ತೆಗೆ ಅನುಮೋದನೆ ದೊರೆತಿದ್ದು ಅದರ ಅಡಿಯಲ್ಲಿ ಅನು­ದಾನ ಬಿಡುಗಡೆಯಾಗುವುದಿಲ್ಲ ಎಂಬ ಉದ್ದೇಶದಿಂದ ರಾಷ್ಟ್ರೀಯ ಹೆದ್ದಾರಿ 75ಕ್ಕೆ ಅದನ್ನು ವಿಸ್ತರಿಸಿ ಕಳಪೆ ಕಾಮ­ಗಾರಿ ನಡೆಸಿ ಅನುದಾನವನ್ನು ದುರುಪ­ಯೋಗಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ವಾಹನಗಳ ಚಾಲಕರಿಗಾಗಿ ವಿಶ್ರಾಂತಿ ಗೃಹಗಳನ್ನು ನಿರ್ಮಿಸಿಲ್ಲ. ಕುಡಿಯುವ ನೀರಿನ ಸೌಲಭ್ಯ ನೀಡಿಲ್ಲ. ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿಲ್ಲ. ರಸ್ತೆ ನಿರ್ಮಾಣಕ್ಕೆಂದು ಕಡಿದ ಮರಗಳ ಬದಲಿಗೆ ನೆಟ್ಟಿರುವ ಗಿಡಗಳಿಗೆ ನೀರು ಹಾಕಿಲ್ಲ. ರಸ್ತೆಯ ಅಕ್ಕಪಕ್ಕ ಮಳೆ ನೀರು ಹರಿದು ಹೋಗಲು ಚರಂಡಿ ನಿರ್ಮಿಸಿಲ್ಲ. ಇವೆಲ್ಲವನ್ನೂ ಮಾಡದೇ ಗುತ್ತಿಗೆದಾರ ಲ್ಯಾಂಕೊ ಕಂಪನಿ ಭ್ರಷ್ಟಚಾರ ನಡೆಸಿದೆ ಎಂದು ಆರೋಪಿಸಿದರು. ಎಪಿಎಂಸಿ ಉಪಾಧ್ಯಕ್ಷ ವಿ. ರಾಮು, ನಿರ್ದೇಶಕ­ರಾದ ಹೊಳಲಿ ಪ್ರಕಾಶ್‌, ಜನ್ನ­ಘಟ್ಟ ಕೃಷ್ಣಪ್ಪ, ನಗರಸಭೆ ಸದಸ್ಯರಾದ ಎಸ್.­ಆರ್.­ ಮುರಳೀ ಗೌಡ , ಸಿ.ವಿ.ರಾಧಾ­ಕೃಷ್ಣ, ರವೀಂದ್ರ ಮಾತ­ನಾಡಿದರು.

ಎ.ಪಿ.ಎಂ.ಸಿ ಅಧ್ಯಕ್ಷ ಗೋಪಾಲಪ್ಪ, ನಿರ್ದೇಶಕ ಈರಪ್ಪ, ನಾಗರಾಜ್, ಸುಬ್ರಮಣಿ, ರಮೇಶ್, ಸುಗಟೂರು ರವಿ, ವೆಂಕಟೇಶಪ್ಪ, ನಗರಸಭೆ ಸದಸ್ಯ­ರಾದ ಸಿ. ಸೋಮಶೇಖರ್, ಅನ್ವರ್ ಪಾಷ, ಹಾರೋ­ಹಳ್ಳಿ ಸುರೇಶ್, ರಾಧ­ಕೃಷ್ಣ, ವೆಂಕ­ಟೇಶಪತಿ, ಕೆಂಬೋಡಿ ನಾರಾ­­ಯಣ ಗೌಡ, ಗಣೇಶ್ ಗೌಡ, ಕೃಷ್ಣ­ಮೂರ್ತಿ, ಜಯ­ಕರ್ನಾ­ಟಕದ ತ್ಯಾಗ­ರಾಜ್, ಕರ್ನಾಟಕ ರಕ್ಷಣಾ ವೇದಿಕೆಯ ಎಲ್‌.ಇ.­ಕೃಷ್ಣೇ­ಗೌಡ, ನಾರಾ­ಯ­ಣಸ್ವಾಮಿ ಭಾಗವ­ಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT