ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

27 ಸ್ಥಳಗಳಿಗೆ ಉಗ್ರರ ಬೆದರಿಕೆ

Last Updated 28 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸೌಧ, ವಿಕಾಸ ಸೌಧ, ಹೈಕೋರ್ಟ್‌, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ,  ಮೈಸೂರಿನ ಕೆಆರ್‌ಎಸ್‌ ಸೇರಿದಂತೆ ರಾಜ್ಯದ 27 ಸ್ಥಳಗಳಿಗೆ ಉಗ್ರಗಾಮಿ ಸಂಘಟನೆಗಳ ಬೆದರಿಕೆಯಿದೆ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದಾರೆ.

ಬಿಜೆಪಿಯ ವಿ.ಸುನಿಲ್‌ಕುಮಾರ್‌ ಪ್ರಶ್ನೆಗೆ ಮಂಗಳವಾರ ವಿಧಾನಸಭೆಯಲ್ಲಿ ನೀಡಿರುವ ಲಿಖಿತ ಉತ್ತರದಲ್ಲಿ ಸಚಿವರು ಈ ಮಾಹಿತಿ ನೀಡಿದ್ದಾರೆ.

ಭಯೋತ್ಪಾದಕ ಚಟುವಟಿಕೆಗಳನ್ನು ನಿಯಂತ್ರಿಸಲು ಆಂತರಿಕ ಭದ್ರತಾ ವಿಭಾಗ ತೆರೆಯಲಾಗಿದೆ. ‘ಸೆಂಟರ್‌ ಫಾರ್‌ ಕೌಂಟರ್‌ ಟೆರರಿಸಂ’ ಪಡೆಯನ್ನು ಸಜ್ಜುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಸೂಕ್ಷ್ಮ ಸ್ಥಾವರಗಳು, ಮುಖ್ಯಸ್ಥಳ ಗಳಲ್ಲಿ ಕಟ್ಟು­ನಿ­ಟ್ಟಿನ ಪೊಲೀಸ್‌ ಬಂದೊಬಸ್ತ್‌ ಮಾಡಲಾಗಿದೆ. ಆಂತ­ರಿ­ಕ ಭದ್ರತಾ ವಿಭಾಗದಲ್ಲಿ ರಾಜ್ಯ ಕೈಗಾರಿಕಾ ಪಡೆ­ಯ­ನ್ನು ಸೃಜಿ­ಸಲಾಗಿದ್ದು, ಈ ಪಡೆಯನ್ನು ರಾಜ್ಯದ ಪ್ರಮುಖ ಘಟಕಗಳ ಭದ್ರತೆಗಾಗಿ ನಿಯೋಜಿಸ­ಲಾಗುತ್ತದೆ ಎಂದು ವಿವರಿಸಿದ್ದಾರೆ.

ಎಲ್ಲೆಲ್ಲಿ ಬೆದರಿಕೆ?
ಬೆಂಗಳೂರು: ಇನ್ಫೋಸಿಸ್‌, ವಿಪ್ರೊ, ಫೋರಂ ಮಾಲ್‌, ಗರುಡಾ ಮಾಲ್‌, ಸೆಂಟ್ರಲ್‌ ಮಾಲ್‌, ಭಾರತೀಯ ವಿಜ್ಞಾನ ಸಂಸ್ಥೆ, ನಗರ ಮತ್ತು ಯಶವಂತಪುರ ರೈಲು ನಿಲ್ದಾಣ, ಕೇಂದ್ರ ಬಸ್‌ ನಿಲ್ದಾಣ, ತಾಜ್‌ ಸಮೂಹದ ಹೋಟೆಲ್‌ಗಳು, ಕಲಾಸಿಪಾಳ್ಯ ಬಸ್‌ ನಿಲ್ದಾಣ, ಅಮೆರಿಕ ಮೂಲದ ಬಹುರಾಷ್ಟ್ರೀಯ ಕಂಪೆನಿಗಳು.
ಮೈಸೂರು: ಇನ್ಫೋಸಿಸ್‌, ವಿಪ್ರೊ, ಮೈಸೂರು ಅರಮನೆ.
ಮಂಡ್ಯ: ಕೆಆರ್‌ಎಸ್‌, ಶ್ರೀರಂಗಪಟ್ಟಣ (ಟಿಪ್ಪು ಅರಮನೆ).
ಮಂಗಳೂರು: ಇನ್ಫೋಸಿಸ್‌, ವಿಪ್ರೊ, ಮಂಗಳೂರು ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣ.
ಉಡುಪಿ: ಶ್ರೀಕೃಷ್ಣದೇವಾಲಯ.
ವಿಜಾಪುರ: ಆಲಮಟ್ಟಿ ಜಲಾಶಯ.
ಕಾರವಾರ: ಕೈಗಾ ಅಣುಸ್ಥಾವರ .
ಬಳ್ಳಾರಿ: ತುಂಗಭದ್ರಾ ವಿದ್ಯುತ್‌ ಸ್ಥಾವರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT