ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

28 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ

Last Updated 18 ಮೇ 2013, 10:38 IST
ಅಕ್ಷರ ಗಾತ್ರ

ಬೆಂಗಳೂರು (ಪಿಟಿಐ) : ಶನಿವಾರ ಬೆಳಿಗ್ಗೆ  28 ಮಂದಿ ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜಭವನದಲ್ಲಿ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರು ಗೋಪ್ಯತಾ ವಿಧಿ ಬೋಧಿಸಿದರು.

ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಮೊದಲ ಸಚಿವ ಸಂಪುಟ ಶನಿವಾರ ಅಸ್ತಿತ್ವಕ್ಕೆ ಬಂದಿತು. ಸಂಪುಟದಲ್ಲಿ ಉಮಾಶ್ರೀ ಅವರೊಬ್ಬರೆ ಮಹಿಳಾ ಸಚಿವರಾಗಿದ್ದಾರೆ.

ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾದ ಅನಿಲ್ ಲಾಡ್, ಡಿ.ಕೆ. ಶಿವಕುಮಾರ್, ರೋಷನ್ ಬೇಗ್, ಜಿ. ಪರಮೇಶ್ವರ ಹಾಗೂ ಮೋಟಮ್ಮ ಅವರು ಸ್ಥಾನ ವಂಚಿತರಾಗಿದ್ದಾರೆ. 

ಮೋಟಮ್ಮ ಅವರ ಗೈರು ಹಾಜರಿ ಸಮಾರಂಭದಲ್ಲಿ ಎದ್ದು ಕಾಣುತ್ತಿತ್ತು. ತಮ್ಮ ನಾಯಕರಿಗೆ ಸಚಿವ ಸ್ಥಾನ ನೀಡಲಿಲ್ಲ ಎಂದು ಆರೋಪಿಸಿ ಡಿ.ಕೆ. ಶಿವಕುಮಾರ್ ಹಾಗೂ ತನ್ವೀರ್ ಸೇಠ್ ಅವರ ಬೆಂಬಲಿಗರು ಕೆಲ ಹೊತ್ತು ಪ್ರತಿಭಟನೆ ನಡೆಸಿದ ಬಗೆಗೆ ವರದಿಯಾಗಿದೆ.

ಸಂಜೆ ಹೊತ್ತಿಗೆ ಸಚಿವರಿಗೆ ಖಾತೆ ಹಂಚಿಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇವರಲ್ಲಿ 20 ಮಂದಿ ಸಂಪುಟ ದರ್ಜೆ ಸಚಿವರಾಗಿ ಉಳಿದ 8 ಮಂದಿ ರಾಜ್ಯ ಸಚಿವರಾಗಿದ್ದು, ವಿವರಗಳು ಹೀಗಿವೆ:

ಸಂಪುಟ ದರ್ಜೆ ಸಚಿವರು:

1.ಆರ್.ವಿ.ದೇಶಪಾಂಡೆ-  ಹಳಿಯಾಳ

2. ಖಮರುಲ್ ಇಸ್ಲಾಂ -  ಗುಲ್ಬರ್ಗ ಉತ್ತರ

3. ಪ್ರಕಾಶ್ ಹುಕ್ಕೇರಿ -  ಚಿಕ್ಕೋಡಿ - ಸದಲಗಾ

4. ರಾಮಲಿಂಗಾರೆಡ್ಡಿ -  ಬಿ.ಟಿ.ಎಂ. ಲೇಔಟ್

5. ಟಿ.ಬಿ.ಜಯಚಂದ್ರ-  ಶಿರಾ

6. ರಮಾನಾಥ ರೈ -  ಬಂಟ್ವಾಳ

7. ಎಚ್.ಕೆ.ಪಾಟೀಲ-  ಗದಗ

8. ಶಾಮನೂರು ಶಿವಶಂಕರಪ್ಪ- ದಾವಣಗೆರೆ ದಕ್ಷಿಣ

9. ವಿ.ಶ್ರೀನಿವಾಸ ಪ್ರಸಾದ್ -  ನಂಜನಗೂಡು

10. ಡಾ.ಎಚ್.ಸಿ.ಮಹದೇವಪ್ಪ -  ಟಿ.ನರಸೀಪುರ

11. ಕೆ.ಜೆ.ಜಾರ್ಜ್ -  ಸರ್ವಜ್ಞನಗರ

12. ಎಚ್.ಎಸ್.ಮಹದೇವಪ್ರಸಾದ್ -  ಗುಂಡ್ಲುಪೇಟೆ

13. ಅಂಬರೀಷ್ -  ಮಂಡ್ಯ

14. ವಿನಯಕುಮಾರ ಸೊರಕೆ -  ಕಾಪು

15. ಬಾಬುರಾವ್ ಚಿಂಚನಸೂರ - ಗುರುಮಠಕಲ್

16. ಯು.ಟಿ.ಖಾದರ್ -  ಮಂಗಳೂರು

17. ಸತೀಶ ಜಾರಕಿಹೊಳಿ -  ಯಮಕನಮರಡಿ

18. ಎಂ.ಬಿ.ಪಾಟೀಲ -  ಬಬಲೇಶ್ವರ

19. ಎಚ್.ಆಂಜನೇಯ -  ಹೊಳಲ್ಕೆರೆ

20. ಶಿವರಾಜ ತಂಗಡಗಿ -  ಕನಕಗಿರಿ

ರಾಜ್ಯ ಸಚಿವರು:

1. ಅಭಯಚಂದ್ರ ಜೈನ್ -  ಮೂಡಬಿದರೆ

2. ದಿನೇಶ್ ಗುಂಡೂರಾವ್ -  ಗಾಂಧಿನಗರ

3. ಕೃಷ್ಣಬೈರೇಗೌಡ -  ಬ್ಯಾಟರಾಯನಪುರ

4. ಶರಣಪ್ರಕಾಶ್ ಪಾಟೀಲ - ಸೇಡಂ

5. ಸಂತೋಷ್ ಲಾಡ್ - ಕಲಘಟಗಿ

6. ಕಿಮ್ಮನೆ ರತ್ನಾಕರ -   ತೀರ್ಥಹಳ್ಳಿ

7. ಉಮಾಶ್ರೀ  -  ತೇರದಾಳ

8. ಪಿ.ಟಿ.ಪರಮೇಶ್ವರ್ ನಾಯ್ಕ -  ಹೂವಿನಹಡಗಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT