ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

440 ಹುದ್ದೆಗಳಿಗೆ 3 ಲಕ್ಷ ಅರ್ಜಿ!

ಕೆಪಿಎಸ್‌ಸಿ: ಏಪ್ರಿಲ್‌ 19ರಂದು ಪೂರ್ವಭಾವಿ ಪರೀಕ್ಷೆ
Last Updated 23 ಫೆಬ್ರುವರಿ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು:  ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ನಡೆಸಲಿ­ರುವ ‘ಎ’ ಮತ್ತು ‘ಬಿ’ ಶ್ರೇಣಿಯ  440 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇಮಕಾತಿ­ಗಾಗಿ ಅರ್ಜಿಗಳ ಮಹಾಪೂರವೇ ಹರಿದು­ಬಂದಿದೆ.

ಒಟ್ಟು 3,07,272 ಅರ್ಜಿಗಳು ಬಂದಿವೆ. ಈ ಪೈಕಿ, 2,62,515 ಅಭ್ಯರ್ಥಿ­ಗಳು ಪ್ರವೇಶ ಶುಲ್ಕ ಪಾವತಿಸಿದ್ದಾರೆ. ಶುಲ್ಕ ಪಾವತಿಸದ ಅಭ್ಯರ್ಥಿಗಳನ್ನು ಪರಿಗಣಿಸಲಾಗಿಲ್ಲ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.

ಅರ್ಜಿ ಸಲ್ಲಿಕೆಯ ದೃಢೀಕರಣಕ್ಕಾಗಿ, ಶುಲ್ಕ ಪಾವತಿಸಿದ ಅಭ್ಯರ್ಥಿಗಳ ಇ–ಮೇಲ್‌ಗೆ ಅವರ ಅರ್ಜಿಯ ಪ್ರತಿಯನ್ನು ಕೆಪಿಎಸ್‌ಸಿ ಕಳುಹಿಸಲಿದೆ. ಒಂದು ವೇಳೆ, ಬರದಿದ್ದರೆ, ಶುಲ್ಕ ಪಾವತಿಸಿದ ಅಭ್ಯರ್ಥಿ­ಗಳು ಚಲನ್‌ನೊಂದಿಗೆ ನೇರವಾಗಿ ಕೆಪಿಎಸ್‌ಸಿ ಕಚೇರಿ ಸಂಪರ್ಕಿಸ­ಬಹು­ದಾ­ಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಹುದ್ದೆಗಳಿಗೆ ಕೆಪಿಎಸ್‌ಸಿಯು ಜನವರಿ 21ರಂದು ಅಧಿಸೂಚನೆ ಹೊರಡಿಸಿತ್ತು. ಅರ್ಜಿ ಸಲ್ಲಿಕೆಗೆ ಫೆಬ್ರುವರಿ 20ರವರೆಗೆ ಅವ­ಕಾಶ ಕಲ್ಪಿಸಲಾಗಿತ್ತು.

ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ: 2011ರಲ್ಲಿ ನಡೆದಿದ್ದ ನೇಮಕಾತಿಗೆ ಹೋಲಿಸಿದರೆ ಈ ಹೆಚ್ಚು ಅರ್ಜಿಗಳು ಬಂದಿವೆ.
2011ರಲ್ಲಿ 1.25 ಲಕ್ಷ ಆಕಾಂಕ್ಷಿ­ಗಳು ಅರ್ಜಿ ಸಲ್ಲಿಸಿದ್ದರು. ಇವರಲ್ಲಿ, 90 ಸಾವಿರ ಅಭ್ಯರ್ಥಿಗಳು ಪ್ರಾಥಮಿಕ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದರು.

ನಿಗದಿಯಂತೆ ಪರೀಕ್ಷೆ:  ಏಪ್ರಿಲ್‌ 19ರಂದು ಪೂರ್ವಭಾವಿ  ಪರೀಕ್ಷೆ ನಡೆಯಲಿದೆ. ಕೆಪಿಎಸ್‌ಸಿಯು ಈಗಾಗಲೇ ಸಿದ್ಧತೆ­ಗಳನ್ನೂ ಆರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT