ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರು ವಕೀಲರಿಂದ ಪ್ರತಿಕ್ರಿಯೆ ಕೇಳಿದ ಸುಪ್ರೀಂ

Last Updated 24 ಮಾರ್ಚ್ 2015, 6:49 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಬಿಬಿಸಿ ಸಾಕ್ಷ್ಯಚಿತ್ರ ‘ಇಂಡಿ­ಯಾಸ್‌ ಡಾಟರ್‌’ನಲ್ಲಿ ಮಹಿಳೆಯರ ಘನತೆಗೆ ಹಾನಿ ತರುವಂಥ ಹೇಳಿಕೆಗಳನ್ನು ಇಬ್ಬರು ವಕೀಲರು ನೀಡಿದ್ದಾರೆ ಎಂದು ಸಲ್ಲಿಸಲಾಗಿದ್ದ ದೂರು ಅರ್ಜಿಯ ವಿಚಾರಣೆಯನ್ನು ಮಂಗಳವಾರ ನಡೆಸಿರುವ ಸುಪ್ರೀಂ ಕೋರ್ಟ್ ಈ ಇಬ್ಬರು ವಕೀಲರಿಂದ ಪ್ರತಿಕ್ರಿಯೆ ನೀಡುವಂತೆ ಕೇಳಿದೆ.

ದೆಹಲಿಯಲ್ಲಿ ಡಿ. 16ರಂದು ನಡೆದ ಸಾಮೂ­­ಹಿಕ ಅತ್ಯಾಚಾರ ಪ್ರಕರಣದ ಆರೋಪಿಯ ಸಂದ­ರ್ಶನ ಒಳಗೊಂಡ ಬಿಬಿಸಿ ಸಾಕ್ಷ್ಯಚಿತ್ರ ‘ಇಂಡಿ­ಯಾಸ್‌ ಡಾಟರ್‌’ನಲ್ಲಿ  ಮಹಿಳೆಯರ ಘನತೆಗೆ ಹಾನಿ ತರುವಂತ ಹೇಳಿಕೆಗಳನ್ನು ಇಬ್ಬರು ವಕೀಲರು ನೀಡಿದ್ದಾರೆ ಎಂದು ದೂರಿ ಮಹಿಳಾ ವಕೀಲರ ಸಂಘ ದಾವೆ ಹೂಡಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ಈ ಇಬ್ಬರೂ ವಕೀಲರಿಂದ ವಿವರಣೆ ಬಯಸಿದೆ.

ವಾಸ್ತವವನ್ನು ತಿಳಿಯಲು ಮತ್ತು ಕಾನೂನಿನ ದೃಷ್ಟಿಯಿಂದ ಇಬ್ಬರ ಪ್ರತಿಕ್ರಿಯೆ ಅವಶ್ಯ ಎಂದು ಕೋರ್ಟ್ ಹೇಳಿದೆ. ಬಿಬಿಸಿ­ಯ ವಿವಾ­ದಾ­ತ್ಮಕ ಸಾಕ್ಷ್ಯಚಿತ್ರ ಪ್ರಸಾರಕ್ಕೆ ಭಾರತದಲ್ಲಿ ನಿಷೇಧ ಹೇರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT