ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಡಿಜಿಪಿ ಛಾಯಾಚಿತ್ರ ತೆಗೆದಿರುವುದು ಸತ್ಯ

ಮುಖ್ಯ ಕಾರ್ಯದರ್ಶಿಗೆ ಸಿಐಡಿ ವರದಿ ಸಲ್ಲಿಕೆ
Last Updated 24 ಜೂನ್ 2014, 20:06 IST
ಅಕ್ಷರ ಗಾತ್ರ

ಬೆಂಗಳೂರು: ‘ಎಡಿಜಿಪಿ ಡಾ.ಪಿ.­ರವೀಂದ್ರನಾಥ್ ಅವರು ಕಾಫಿಶಾಪ್‌­ನಲ್ಲಿ ಯುವತಿಯ ಛಾಯಾಚಿತ್ರ ತೆಗೆ­ದಿರು­ವುದು ಸತ್ಯ’ ಎಂದು ಪ್ರಕರಣ ಸಂಬಂಧ ತನಿಖೆ ನಡೆಸುತ್ತಿ­ರುವ ಸಿಐಡಿ ಅಧಿಕಾರಿಗಳು ಸರ್ಕಾ­ರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರಿಗೆಮಂಗಳ­ ­­ವಾರ ರಾತ್ರಿ ವರದಿ ಸಲ್ಲಿಸಿ­ದ್ದಾರೆ.

‘ಪ್ರಕರಣದಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ರಾಘ­ವೇಂದ್ರ ಔರಾದಕರ್ ಅವರ ಪಾತ್ರ­ವಿಲ್ಲ. ರವೀಂದ್ರ­ನಾಥ್ ಅವರೇ ಯುವತಿಯ ಛಾಯಾಚಿತ್ರಗಳನ್ನು ತೆಗೆದಿ­ರು­ವುದು ತನಿಖೆಯಿಂದ ದೃಢಪ­ಟ್ಟಿದೆ’ ಎಂಬ ಅಂಶಗಳು ವರದಿ­ಯಲ್ಲಿವೆ. ‘ಐದು ಪುಟಗಳ ವರದಿಯನ್ನು ಮುಖ್ಯ ಕಾರ್ಯ­ದರ್ಶಿ ಅವರಿಗೆ ಸಲ್ಲಿಸಲಾಗಿದೆ.  ಎಡಿಜಿಪಿ ಅವರು ಯುವತಿ ಛಾಯಾಚಿತ್ರ ತೆಗೆಯುವ ಮೂಲಕ ಅವರ ಗೌರವಕ್ಕೆ ಧಕ್ಕೆ ಉಂಟು ಮಾಡಿ­ದ್ದಾರೆ.

ಹೀಗಾಗಿ ಭಾರತೀಯ ದಂಡ ಸಂಹಿತೆ 509ರ ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸ­ಲಾಗಿದೆ. ಅಲ್ಲದೆ, ಘಟನಾ ದಿನ ರವೀಂದ್ರ­ನಾಥ್ ಅವರೊಂದಿಗೆ ಅನುಚಿತ­ವಾಗಿ ವರ್ತಿಸಿದ ಎಸ್‌ಐ ರವಿ ಅವರನ್ನು ಅಮಾ­ನತು ಮಾಡು­ವಂತೆ ವರದಿ­ಯಲ್ಲಿ ಶಿಫಾರಸು ಮಾಡ­ಲಾ­ಗಿದೆ’ ಎಂದು ಸಿಐಡಿ ಡಿಜಿಪಿ ಬಿಪಿನ್ ಗೋಪಾಲಕೃಷ್ಣ ತಿಳಿಸಿದ್ದಾರೆ.

‘ಮುಖ್ಯ ಕಾರ್ಯದರ್ಶಿ ಅವರಿಗೆ ಸಲ್ಲಿಸಿರುವ ವರದಿಯ ಒಂದು ಪ್ರತಿ­ಯನ್ನು ದೋಷಾರೋಪಣಾ ಪಟ್ಟಿ­ಯಾಗಿ ಒಂದನೇ ಎಸಿಎಂಎಂ ನ್ಯಾಯಾ­ಲಯಕ್ಕೆ ಸಲ್ಲಿಸಲಾಗಿದೆ’ ಎಂದು ಹೇಳಿದ್ದಾರೆ.

‘ದೋಷಾರೋಪಣಾ ಪಟ್ಟಿಯು ಎಡಿಜಿಪಿ ರವೀಂದ್ರನಾಥ್‌, ದೂರು ನೀಡಿದ ಯುವತಿ, ಕಾಫಿ ಶಾಪ್‌ನ ಸಿಬ್ಬಂದಿ ಹಾಗೂ ಹೈಗ್ರೌಂಡ್ಸ್‌ ಪೊಲೀ­ಸರ ಹೇಳಿಕೆಗಳನ್ನು ಒಳ­ಗೊಂಡಿದೆ. ಅಲ್ಲದೆ, ಸ್ವತಃ ರವೀಂದ್ರನಾಥ್ ಅವರೇ ಠಾಣೆಯ ಸೆಲ್‌ನೊಳಗೆ ಹೋಗಿ, ತಮ್ಮ ಅಂಗಿಯನ್ನು ಹರಿದುಕೊಂಡಿದ್ದಾರೆ ಎಂಬ ಅಂಶವನ್ನೂ ಹೊಂದಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ರವೀಂದ್ರನಾಥ್ ಅವರ ಮೊಬೈಲ್‌­ನಿಂದಲೇ ಯುವತಿಯ ಎರಡು ಛಾಯಾ­­ಚಿತ್ರಗಳನ್ನು ತೆಗೆಯಲಾಗಿದೆ. ಬೇರೊಂದು ಮೊಬೈಲ್‌ನಿಂದ ಆ ಛಾಯಾ­ಚಿತ್ರಗಳನ್ನು ವರ್ಗಾವಣೆ ಮಾಡಿಲ್ಲ ಎಂದು ಗುಜರಾತ್‌ನ ಗಾಂಧಿ­ನಗರದ ವಿಧಿ ವಿಜ್ಞಾನ ಪ್ರಯೋಗಾ­ಲಯ ತಜ್ಞರು ಸ್ಪಷ್ಟಪಡಿಸಿದ್ದಾರೆ’ ಎಂದು ವರದಿಯಲ್ಲಿದೆ.

ಘಟನೆ ಸಂಬಂಧ ಎಡಿಜಿಪಿ ವಿರುದ್ಧ ಹಲ್ಲೆ ನಡೆಸಿ ಮಹಿಳೆ ಗೌರವಕ್ಕೆ ಧಕ್ಕೆ ಉಂಟು ಮಾಡಿದ ಆರೋಪ (ಐಪಿಸಿ 354), ಅಪರಾಧ ಸಂಚು (ಐಪಿಸಿ 506) ಮತ್ತು ಅಶ್ಲೀಲ ಪದಬಳಕೆ ಅಥವಾ ಸಂಜ್ಞೆ ಮೂಲಕ ಮಹಿಳೆಯ ಗೌರವಕ್ಕೆ ಧಕ್ಕೆ ತಂದ ಆರೋಪದ (ಐಪಿಸಿ 509) ಮೇಲೆ ಹೈಗ್ರೌಂಡ್ಸ್‌ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದೀಗ ಸಿಐಡಿ ಅಧಿಕಾರಿಗಳು ಐಪಿಸಿ 354 ಮತ್ತು ಐಪಿಸಿ 506ರ ಪ್ರಕರಣ­ಗಳಿಂದ ಎಡಿಜಿಪಿ ಅವರನ್ನು
ಕೈಬಿಟ್ಟಿ­ದ್ದಾರೆ.

ಇದರಿಂದ ಅಸಮಾಧಾನ­ಗೊಂಡಿ­ರುವ ದೂರುದಾರ ಯುವತಿಯ ಪರ ವಕೀಲರು, ಈ ಸಂಬಂಧ  ನ್ಯಾಯಾ­ಲಯದ ಮೊರೆ ಹೋಗುವುದಾಗಿ ಹೇಳಿದ್ದಾರೆ. ‘ಎರಡು ಪ್ರಕರಣಗಳಲ್ಲಿ ರವೀಂದ್ರನಾಥ್ ಅವರನ್ನು ಕೈಬಿಡುವ ಮೂಲಕ ಅವರನ್ನು ರಕ್ಷಿಸಲಾಗುತ್ತಿದೆ. ಇದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗುವುದು’ ಎಂದು ‘ಪ್ರಜಾವಾಣಿ’ ಗೆ ತಿಳಿಸಿದರು.

‘ಸಿಐಡಿ ಅಧಿಕಾರಿಗಳು ವರದಿ ಸಲ್ಲಿಸಿ­ರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ನಾನು ಯುವತಿಯ ಛಾಯಾ­ಚಿತ್ರ ತೆಗೆದಿಲ್ಲ ಎಂದು ಈಗಲೂ ಹೇಳು­ತ್ತಿ­ದ್ದೇನೆ. ನ್ಯಾಯಕ್ಕಾಗಿ ಕಾನೂನು ಹೋರಾಟ ಮುಂದುವರಿಸುತ್ತೇನೆ’ ಎಂದು ರವೀಂದ್ರನಾಥ್ ತಿಳಿಸಿದರು.

ಕನ್ನಿಂಗ್‌ಹ್ಯಾಂ ರಸ್ತೆಯಲ್ಲಿರುವ ಒಬೊಪೆ ಕಾಫಿಶಾಪ್‌ನಲ್ಲಿ ಮೇ 26­ರಂದು ಎಡಿಜಿಪಿ ರವೀಂದ್ರನಾಥ್  ಯುವತಿಯ ಛಾಯಾಚಿತ್ರ ತೆಗೆದಿ­ದ್ದರು ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಯುವತಿ ಹೈಗ್ರೌಂಡ್ಸ್‌ ಠಾಣೆ­ಯಲ್ಲಿ ದೂರು ಕೊಟ್ಟಿದ್ದರು. ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ವರ್ಗಾ­ಯಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT