ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್ ಮಾರ್ಷಲ್ ಅರುಪ್ ರಹಾ ವಾಯುಪಡೆ ಭಾವಿ ಮುಖ್ಯಸ್ಥ

Last Updated 29 ಅಕ್ಟೋಬರ್ 2013, 11:29 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಏಸ್ ಫೈಟರ್ ಪೈಲಟ್ ಏರ್ ಮಾರ್ಷಲ್ ಅರುಪ್ ರಹಾ ಅವರು ವಾಯುಪಡೆಯ ಮುಂದಿನ ಮುಖ್ಯಸ್ಥರಾಗಿ  ನೇಮಕಗೊಂಡಿದ್ದಾರೆ. ಡಿಸೆಂಬರ್ 31ರಂದು ನಿವೃತ್ತರಾಗುತ್ತಿರುವ ಹಾಲಿ ವಾಯುಪಡೆ ಮುಖ್ಯಸ್ಥ ನಾಕ್ ಬ್ರೌನೆ ಅವರ ಸ್ಥಾನಕ್ಕೆ ನೇಮಕಗೊಂಡಿದ್ದಾರೆ.

1954ರ ಡಿಸೆಂಬರ್ 26ರಂದು ಜನಿಸಿದ 59ರ ಹರೆಯದ ರಹಾ ಅವರು ವಾಯುಪಡೆ ಮುಖ್ಯಸ್ಥರಾಗಿ ಮೂರು ವರ್ಷಗಳ ಕಾಲ ಮುಂದುವರಿಯುವ ನಿರೀಕ್ಷೆ ಇದೆ.

'ಸರ್ಕಾರವು ಪ್ರಸ್ತುತ ವಾಯಪಡೆ ಉಪ ಮುಖ್ಯಸ್ಥರಾಗಿರುವ ಏರ್ ಮಾರ್ಷಲ್ ರಹಾ ಅವರನ್ನು ವಾಯಪಡೆ ಮುಖ್ಯಸ್ಥರಾಗಿ ನೇಮಿಸಲು ಸರ್ಕಾರ ನಿರ್ಧರಿಸಿದೆ. ನಿವೃತ್ತರಾಗುತ್ತಿರುವ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ನಾಕ್ ಬ್ರೌನೆ ಸ್ಥಾನದಲ್ಲಿ ಅವರು ನಿಯುಕ್ತಿಯಾಗುವರು' ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆಯೊಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT