ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಬಾರ, ಜವಳಿ, ಕಾಕೋಡ್ಕರ್‌ ಸೇರಿ 9 ಗಣ್ಯರಿಗೆ ಕವಿವಿ ಗೌರವ ಡಾಕ್ಟರೇಟ್‌

Last Updated 24 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಧಾರವಾಡ: ಹಿರಿಯ ಸಾಹಿತಿ ಡಾ.­ಚಂದ್ರ­ಶೇಖರ ಕಂಬಾರ, ಹಿರಿಯ ಸಂಗೀತ­ಗಾರ ಪಂ.ಎಂ.­ವೆಂಕಟೇಶ­ಕುಮಾರ್‌ ,ಉದ್ಯಮಿ ವಿಜಯ ಸಂಕೇಶ್ವರ, ಗೋವಾದ ಮಾಜಿ ಮುಖ್ಯ­ಮಂತ್ರಿ ಶಶಿಕಲಾ ಕಾಕೋಡ್ಕರ್‌, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾ­ದಕ ಪದ್ಮರಾಜ ದಂಡಾವತಿ, ಸೇರಿ­ದಂತೆ ಒಂಬತ್ತು ಗಣ್ಯರನ್ನು ಕರ್ನಾ­ಟಕ ವಿಶ್ವವಿದ್ಯಾಲಯ ಗೌರವ ಡಾಕ್ಟ­ರೇಟ್‌ಗೆ ಆಯ್ಕೆ ಮಾಡಿದೆ ಎಂದು ವಿ.ವಿ. ಕುಲಪತಿ ಪ್ರೊ.ಎಚ್‌.ಬಿ.­ವಾಲೀಕಾರ ಪ್ರಕಟಿಸಿದರು.

‘ಸುಪ್ರೀಂಕೋರ್ಟ್‌ನ ಹಿರಿಯ ವಕೀಲ ಶರತ್‌ ಜವಳಿ, ಬೆಂಗಳೂರಿನ ಡಾ.­ಮರಿಗೌಡ ನಾಗರಾಜು, ಶಿರಸಿಯ ಡಾ. ವಿ.ಎಸ್‌.ಸೋಂದೆ ಈ ಪಟ್ಟಿಯ­ಲ್ಲಿ­ದ್ದಾರೆ. ಇದೇ 25ರಂದು ನಡೆಯುವ 64ನೇ ಘಟಿಕೋತ್ಸವದಲ್ಲಿ ವಿ.ವಿ. ಕುಲಾಧಿಪತಿಗಳೂ ಆದ ರಾಜ್ಯಪಾಲ ಎಚ್‌.ಆರ್‌.ಭಾರದ್ವಾಜ್‌ ಗೌರವ ಡಾಕ್ಟರೇಟ್‌ ಪ್ರದಾನ ಮಾಡುವರು.

ಸಂತೃಪ್ತಿ ಇದೆ: ‘ಗೌರವ ಡಾಕ್ಟರೇಟ್‌ ಪಟ್ಟಿಯ ಬಗ್ಗೆ ನನಗೆ ಸಂತೃಪ್ತಿ ಇದ್ದು, ಶೋಧನಾ ಸಮಿತಿ ಶಿಫಾರಸು ಮಾಡಿದ ಪಟ್ಟಿಗೆ ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ. ಪಿ.ಬಲರಾಂ ಘಟಿಕೋತ್ಸವ ಭಾಷಣ ಮಾಡಲಿ­ದ್ದಾರೆ’ ಎಂದು ವಾಲೀಕಾರ ಸೋಮ­ವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಟಿ.ಪೋತೆ ಮಾತನಾಡಿ, ‘ಘಟಿಕೋತ್ಸ­ವದಲ್ಲಿ 168 ಅಭ್ಯರ್ಥಿ­ಗಳಿಗೆ ಪಿಎಚ್‌.ಡಿ. ಪದವಿ ಪ್ರದಾನ ಮಾಡಲಿದ್ದು, 11 ಜನರಿಗೆ ಎಂ.ಫಿಲ್‌, 3,886 ಸ್ನಾತಕೋತ್ತರ ಪದವಿ, 15,790 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ ಸೇರಿದಂತೆ ಒಟ್ಟು 20,358 ವಿದ್ಯಾರ್ಥಿಗಳು ವಿವಿಧ ಪದವಿಗಳನ್ನು ಪಡೆಯಲಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT