ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಾಹಿತ್ಯದಲ್ಲಿ ಬೇಕಾದವರಿಗೆ ಮಾತ್ರ ಮಣೆ:ವಿದ್ಯಾಶಂಕರ್‌

Last Updated 28 ಮಾರ್ಚ್ 2014, 20:32 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ಸಾಹಿತ್ಯದಲ್ಲಿ ಬೇಕಾದವ­ರಿಗೆ ಮಾತ್ರ ಮಣೆ ಹಾಕುವ ಪ್ರವೃತ್ತಿ ಹೆಚ್ಚುತ್ತಿದೆ’ ಎಂದು ಸಂಶೋಧಕ ಪ್ರೊ.ಎಸ್‌.ವಿದ್ಯಾಶಂಕರ್‌ ಬೇಸರ ವ್ಯಕ್ತಪಡಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯ­ಯನ ಕೇಂದ್ರದಲ್ಲಿ ಶುಕ್ರವಾರ ನಡೆದ ‘ರಂ.ಶ್ರೀ. ಮುಗಳಿ ಅವರ ಸಮಗ್ರ ಸಾಹಿತ್ಯ: ಅವಲೋಕನ’ ಕಾರ್ಯ­ಕ್ರಮದಲ್ಲಿ ಅವರು ಮಾತನಾಡಿದರು.

‘ಬೇಕಾದವರ ಕೃತಿಗಳಾದರೆ ಪ್ರಕಟಗೊಂಡ ನಾಲ್ಕೇ ದಿನಗಳಲ್ಲಿ ಕೃತಿಗಳ ಕುರಿತು ವಿಮರ್ಶೆ­ಯಾಗು­ತ್ತದೆ. ಆದರೆ, ರಂ.ಶ್ರೀ.ಮುಗಳಿ ಅವರು ಬರೆದ ಅವರ ಕೊನೆಯ ಕೃತಿ ಅಗ್ನಿವರ್ಣ ಕಾದಂಬ­ರಿಯ ಕುರಿತು ವಿಮರ್ಶೆ ಯಾರೂ ಮಾಡಲೇ ಇಲ್ಲ. ಸಾಹಿತ್ಯ ಲೋಕದಲ್ಲಿ ತಾರತಮ್ಯ ನಡೆಯು­ತ್ತಿದೆ’ ಎಂದು ವಿಷಾದಿಸಿದರು.

‘ಮುಗಳಿ ಅವರು ಕನ್ನಡ ಸಾಹಿತ್ಯ ಚರಿತ್ರೆ ಎಂಬ ಮೌಲಿಕ ಕೃತಿಯನ್ನು ತಪಸ್ಸು ಎನ್ನುವ ರೀತಿಯಲ್ಲಿ ರಚಿಸಿ­ದ್ದಾರೆ. ಸಾಹಿತ್ಯ ಚರಿತ್ರೆಯ ರೂಪುರೇಷೆ­ಗ­ಳನ್ನು ಸಂಪೂರ್ಣ ಕರಗತಮಾಡಿಕೊಂಡಿದ್ದ ಅವರು,  ಸಾಹಿತ್ಯವನ್ನು ಓದುವ, ಅರ್ಥೈಸುವ, ವಿಶ್ಲೇಷಿಸುವ ಬಗೆ ಹಾಗೂ ಮೌಲ್ಯಕಟ್ಟುವ ಕಾರ್ಯವನ್ನು ತಮ್ಮ ಈ ಕೃತಿಯಲ್ಲಿ ನಿರ್ವಹಿಸಿದ್ದಾರೆ’ ಎಂದರು.

‘ಕನ್ನಡ ಸಾಹಿತ್ಯ ಚರಿತ್ರೆ ಕೃತಿಯಲ್ಲಿ ದೊಡ್ಡ ಕವಿ­ಗ­ಳಿಗೆ ನೀಡಿರುವ ಸ್ಥಾನವನ್ನು ಸಣ್ಣ ಕವಿಗಳಿಗೆ ನೀಡಿಲ್ಲ. ಸಣ್ಣ ಕವಿಗಳನ್ನು ಅಮುಖ್ಯರಾಗಿ ಪರಿಗ­ಣಿ­ಸಿ­­ದ್ದಾರೆ. ಅವರ ಕೃತಿಯಲ್ಲಿ ತಾರತಮ್ಯತೆಯಿದೆ’ ಎಂದು ವಿಶ್ಲೇಷಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಪ್ರೊ.­ಮಾಲತಿ ಪಟ್ಟಣಶೆಟ್ಟಿ ಮಾತನಾಡಿ, ‘ರಂ.ಶ್ರೀ. ಮುಗಳಿ ಅವರು ಕನ್ನಡ ಮತ್ತು ಮರಾಠರ ನಡುವೆ ಸ್ನೇಹ ಕಟ್ಟಿಕೊಟ್ಟವರು. ಮರಾಠಿಗರಲ್ಲಿಯೂ ಕನ್ನ­ಡದ ಬಗೆಗೆ ಪ್ರೀತಿಯನ್ನು ಬೆಳೆಸಿದರು’ ಎಂದರು.

‘ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯ­ಯನ ಕೇಂದ್ರಕ್ಕೆ ಭದ್ರ ಬುನಾದಿಯನ್ನು ಹಾಕಿದ ಶ್ರೇಯಸ್ಸು ಮುಗಳಿ ಅವರಿಗೆ ಸಲ್ಲಬೇಕು’ ಎಂದು ಅವರು ಹೇಳಿದರು.
ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಸಿ.ಬಿ.ಹೊನ್ನುಸಿದ್ದಾರ್ಥ ಮಾತನಾಡಿ, ‘ಮುಗಳಿ ಅವ­ರನ್ನು ವಿಮರ್ಶಾ ಲೋಕ ಸಂಪೂರ್ಣವಾಗಿ ಕಡೆ­ಗ­ಣಿ­ಸಿದೆ. ಅವರ ಕೃತಿಗಳ ಸಮಗ್ರ ವಿಶ್ಲೇಷಣೆ ನಡೆಯಬೇಕು’ ಎಂದು ಹೇಳಿದರು.

ರಂ.ಶ್ರೀ.ಮುಗಳಿಯವರ ಸೊಸೆ ಶೋಭಾ ಆನಂದ ಮುಗಳಿ, ‘ಪ್ರೇಮಮಯ ವ್ಯಕ್ತಿತ್ವವನ್ನು ಹೊಂದಿದ್ದ ರಂ.ಶ್ರೀ.ಮುಗಳಿಯವರು ಬದುಕನ್ನು ಸಾಹಿ­ತ್ಯ­ದಷ್ಟೇ ಪ್ರೀತಿಸಿದವರು. ಒಂದೇ ಪುಸ್ತಕದಲ್ಲಿ ಎಲ್ಲ ಶತಮಾನಗಳ ವಿಷಯ ಸಿಕ್ಕರೆ ಎಷ್ಟು ಚೆನ್ನ ಎಂದು­ಕೊಂಡು ಅವಶ್ಯಕವಾದ ಎಲ್ಲಾ ಪುಸ್ತಕ­ಗ­ಳನ್ನು ತರಿಸಿಕೊಂಡು, ಗ್ರಂಥಾಲಯದಲ್ಲಿ ಕುಳಿತು, ಸುದೀರ್ಘ ಅಧ್ಯಯನವನ್ನು ನಡೆಸಿ, ಕನ್ನಡ ಸಾಹಿತ್ಯ ಚರಿತ್ರೆಯನ್ನು ತಪಸ್ಸಿನಂತೆ ರಚಿಸಿದರು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT