ಮುಂಬೈ: ಇಲ್ಲಿನ ಕರ್ನಾಟಕ ಸಂಘ ಕುವೆಂಪು ಸ್ಮಾರಕ ಏಕಾಂಕ ನಾಟಕ ಸ್ಪರ್ಧೆಯನ್ನು ಮುಂದಿನ ವರ್ಷದ ಜನವರಿ 17, 18, 19 ರಂದು ಹಮ್ಮಿಕೊಂಡಿದೆ.

ನಾಟಕದ ಅವಧಿ ಕನಿಷ್ಠ 45 ನಿಮಿಷ ಹಾಗೂ ಗರಿಷ್ಠ 60 ನಿಮಿಷ. ಪ್ರತೀ ತಂಡಕ್ಕೆ ಗೌರವ ಸಂಭಾವನೆಯಾಗಿ ₨4,000 ನೀಡಲಾಗುವುದು. ವಿಜೇತ ತಂಡಗಳಿಗೆ ಪ್ರಥಮ ಬಹುಮಾನ ₨10,000 ದ್ವಿತೀಯ ಬಹುಮಾನ ₨7000 ಹಾಗೂ ತೃತೀಯ ಬಹುಮಾನ ₨5000 ನೀಡಲಾಗುವುದು. ಮುಂಬೈಯ ಅತ್ಯುತ್ತಮ ನಾಟಕಕ್ಕೆ ವಿಶೇಷ ಬಹುಮಾನ ದೊರೆಯಲಿದೆ. ತಂಡಗಳಿಗೆ ವಸತಿ ಸೌಕರ್ಯವನ್ನು ಸಂಘ ಕಲ್ಪಿಸಲಿದೆ. ಹೊಸ ನಾಟಕ ಕೃತಿಗೆ ವಿಶೇಷ ಬಹುಮಾನ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಆಸಕ್ತ ತಂಡಗಳು ₨500 ಪ್ರವೇಶ ಧನದ ಜತೆಗೆ ನವೆಂಬರ್ 15ರ ಒಳಗೆ ಈ ಕೆಳಗಿನ ವಿಳಾಸಕ್ಕೆ ತಮ್ಮ ನಾಟಕದ ಪಠ್ಯದೊಂದಿಗೆ ಸಂಪೂರ್ಣ ವಿವರ ಹಾಗೂ ಪ್ರವೇಶ ಪತ್ರವನ್ನು ಸಲ್ಲಿಸಬೇಕು ಎಂದು ಕೋರಿದ್ದಾರೆ. ಪ್ರವೇಶ ಪತ್ರವನ್ನು ಕಾರ್ಯದರ್ಶಿ, ಕರ್ನಾಟಕ ಸಂಘ, ಡಾ. ವಿಶ್ವೇಶ್ವರಯ್ಯ ಸ್ಮಾರಕ ಮಂದಿರ, ಸಿ.ಎಸ್.ಎಂ. ಮಾರ್ಗ್ ಮುಂಬೈ 400 016 ಈ ವಿಳಾಸಕ್ಕೆ ಕಳುಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.