ಶಿವಮೊಗ್ಗ: ತೀರ್ಥಹಳ್ಳಿಯ ಕುಪ್ಪಳಿಯಲ್ಲಿ ಭಾನುವಾರ ರಾಷ್ಟ್ರಕವಿ ಕುವೆಂಪು ಅವರ 109ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಲೆಯಾಳಂನ ಸಾಹಿತಿ ಕೆ.ಸಚ್ಚಿದಾನಂದನ್ ಅವರಿಗೆ ಪ್ರಪ್ರಥಮ ‘ಕುವೆಂಪು ರಾಷ್ಟ್ರೀಯ ಪುರಸ್ಕಾರ’ ಪ್ರದಾನ ಮಾಡಲಾಯಿತು.

ವಿಧಾನ ಪರಿಷತ್ತು ಸಭಾಪತಿ ಡಿ.ಎಚ್.ಶಂಕರಮೂರ್ತಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಅವರು ಕುಪ್ಪಳಿಯ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಕೆ.ಸಚ್ಚಿದಾನಂದನ್ ಅವರಿಗೆ ₨5 ಲಕ್ಷ ನಗದು, ಸ್ಮರಣಿಕೆ ನೀಡಿ, ಗೌರವಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕೆ.ಸಚ್ಚಿದಾನಂದನ್, ಜಾಗತೀಕರಣದಿಂದ ಇಂಗ್ಲಿಷ್ ಯಜಮಾನ್ಯ ಭಾಷೆಯಾಗಿ ನಮ್ಮ ಸಂಸ್ಕೃತಿಯನ್ನು ವಿಸ್ಮೃತಿಗೆ ತಳ್ಳುತ್ತಿರುವುದರಿಂದ ಪ್ರಸ್ತುತ ಮಾತೃಭಾಷೆಯಲ್ಲೇ ಸಾಹಿತ್ಯ ರಚಿಸಬೇಕಾದ ಅನಿವಾರ್ಯತೆ ಇದೆ ಎಂದು ಪ್ರತಿಪಾದಿಸಿದರು.

ಮಾತೃಭಾಷೆ ಉಳಿಸಿಕೊಳ್ಳುವ ಹೋರಾಟ ಮನುಷ್ಯನ ಘನತೆ ಉಳಿಸಿಕೊಳ್ಳುವ ಹೋರಾಟವೂ ಆಗಿದೆ ಎಂದು ಅಭಿಪ್ರಾಯಪಟ್ಟ ಅವರು, ತಾನು ಪ್ರಜ್ಞಾಪೂರಕವಾಗಿಯೇ ಮಾಲಯಾಳಂನಲ್ಲಿ ಕಾವ್ಯ ರಚಿಸುತ್ತಾ ಬಂದಿದ್ದು, ಅದನ್ನು ಬಿಟ್ಟು ಬೇರೆ ಭಾಷೆಯಲ್ಲಿ ಉತ್ತಮವಾಗಿ ಬರೆಯಬಲ್ಲೆ ಎಂದು ಎಂದಿಗೂ ಅನಿಸಿಲ್ಲ ಎಂದರು.

ತಾನು ಮಾತೃಭಾಷೆಯಲ್ಲಿ ಕವಿತೆ ಬರೆದರೂ, ಅವು ಬೇರೆಲ್ಲಾ ಭಾಷೆಗಳಿಗೆ ಅನುವಾದಗೊಳ್ಳುತ್ತಿದ್ದು, ಅಲ್ಲಿನ ಜನ ಸ್ಪಂದಿಸುತ್ತಿರುವುದನ್ನು ನೋಡಿದರೆ ಕಾವ್ಯಶಕ್ತಿ ಮೇಲಿನ ನನ್ನ ನಂಬಿಕೆಗಳು ಇನ್ನಷ್ಟು ಬಲಗೊಂಡಿವೆ ಎಂದು ವಿಶ್ಲೇಷಿಸಿದರು.

ಎರಡು ತಲೆಮಾರನ್ನು ಪ್ರಭಾವಿಸಿದ ಕುವೆಂಪು ಅವರ ವಿಚಾರವಾದಿ ಮೌಲ್ಯಗಳು ಇಡೀ ವಿಶ್ವಕ್ಕೆ ಮಾದರಿ ಎಂದು ಅಭಿಪ್ರಾಯಪಟ್ಟ ಅವರು, ನನ್ನ ಕವಿತೆಯ ಆಶಯ, ಈ ಕಾಡು, ನೆಲ, ಜಲ ಎಲ್ಲರಿಗೂ ಸೇರಿದ್ದು, ಇದರ ಮೇಲೆ ಎಲ್ಲರಿಗೂ ಹಕ್ಕಿದೆ ಎಂಬುದು. ನ್ಯಾಯ, ಸಮಾನತೆ, ದನಿ ಇಲ್ಲದವರಿಗೆ ದನಿಯಾಗುವುದು ಕೂಡ ಕವಿಯ ನಿಜವಾದ ಕಾಳಜಿಯಾಗಬೇಕಾಗಿದೆ ಎಂದರು.

ಸುಮಾರು 60 ಜನ ವಿದ್ವಾಂಸರು ವಾಚನ ಮತ್ತು ವ್ಯಾಖ್ಯಾನ ಮಾಡಿದ ಕುವೆಂಪು ಅವರ ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯದ 75 ಗಂಟೆಗಳ ಅವಧಿಯ 4 ಡಿವಿಡಿ ಬಿಡುಗಡೆ ಮಾಡಲಾಯಿತು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎ.ಜೆ.ಸದಾಶಿವ, ಕುವೆಂಪು ಪ್ರಶಸ್ತಿ ದಾನಿ ಸರೋಜಾ ಎಂ.ಚಂದ್ರಶೇಖರ್, ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್, ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಕರ್ನಾಟಕ ರಾಜ್ಯ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಉಪಸ್ಥಿತರಿದ್ದರು. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಹಂ.ಪ.ನಾಗರಾಜಯ್ಯ ಅಧ್ಯಕ್ಷತೆ ವಹಿಸಿದ್ದರು. ಕಡಿದಾಳು ಪ್ರಕಾಶ್ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.