ನವದೆಹಲಿ (ಪಿಟಿಐ): ಕರ್ನಾಟಕದ ಕೈಗಾ ಒಳಗೊಂಡಂತೆ ಒಟ್ಟು 10 ತಾಣಗಳಲ್ಲಿ ಹೊಸ ಅಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.

ಈ ಹತ್ತು ತಾಣಗಳು ಒಂಬತ್ತು ರಾಜ್ಯಗಳಲ್ಲಿವೆ ಎಂದು ಪ್ರಧಾನಿ ಕಚೇರಿಯ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಬುಧವಾರ ಲೋಕಸಭೆಗೆ ತಿಳಿಸಿದರು.

ಕೈಗಾದಲ್ಲಿ ಈಗಾಗಲೇ ನಾಲ್ಕು ಅಣು ವಿದ್ಯುತ್ ಘಟಕಗಳಿವೆ. ಇದೀಗ ಐದು ಮತ್ತು ಆರನೇ ಘಟಕಗಳನ್ನು ಆರಂಭಿಸಲು ಒಪ್ಪಿಗೆ ಲಭಿಸಿದೆ.
‘ಹರಿಯಾಣದ ಗೋರಖ್‌ಪುರ, ಮಧ್ಯಪ್ರದೇಶದ ಚುಟ್ಕಾ ಮತ್ತು ಭೀಮಪುರ, ಕರ್ನಾಟಕದ ಕೈಗಾ ಹಾಗೂ ರಾಜಸ್ತಾನದ ಮಾಹಿ ಬನ್ಸ್ವಾರದಲ್ಲಿ ದೇಶೀಯವಾಗಿ ಸ್ಥಾವರಗಳನ್ನು ನಿರ್ಮಿಸಲಾಗುವುದು’ ಎಂದು ಅವರು ಹೇಳಿದರು.

‘ತಮಿಳುನಾಡಿನ ಕೂಡುಂಕುಳುಂ, ಮಹಾರಾಷ್ಟ್ರದ ಜೈತಾಪುರ, ಗುಜರಾತ್‌ನ ಚಾಯಾ ಮಿತಿವಿರ್ದಿ, ಆಂಧ್ರ ಪ್ರದೇಶದ ಕೊವ್ವಡ
ಮತ್ತುಪಶ್ಚಿಮ ಬಂಗಾಳದ ಹರಿಪುರದಲ್ಲಿ ವಿದೇಶಿ ನೆರವಿನೊಂದಿಗೆ ಸ್ಥಾವರಗಳು ನಿರ್ಮಾಣವಾಗಲಿವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.