ಶಿವಮೊಗ್ಗ: ಯುಜಿಸಿ ಸೂಚನೆಯಂತೆ ಹೊರ ರಾಜ್ಯಗಳಲ್ಲಿ ನಡೆಸುತ್ತಿದ್ದ ಕೋರ್ಸ್ಗಳನ್ನು 2013–14ನೇ ಸಾಲಿನಿಂದಲೇ ಸ್ಥಗಿತಗೊಳಿಸಲಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯ ದೂರ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಪ್ರೊ.ಎಂ.ಕೃಷ್ಣಪ್ಪ ತಿಳಿಸಿದ್ದಾರೆ.
ಕುವೆಂಪು ವಿವಿ ದೂರ ಶಿಕ್ಷಣದಡಿ ಹೊರರಾಜ್ಯಗಳಲ್ಲಿ ಕೋರ್ಸ್ ನಡೆಸುತ್ತಿದೆ ಎಂದು ಎಸ್ಒಯು ಕುಲಪತಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಮಾಹಿತಿ ಕೊರತೆಯ ಕಾರಣ ಈ ರೀತಿ ಗೊಂದಲವಾಗಿರಬಹುದು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.