ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌತಮ ಬುದ್ಧ ಪ್ರಬಂಧ ಸ್ಪರ್ಧೆ

Last Updated 17 ಜನವರಿ 2015, 19:47 IST
ಅಕ್ಷರ ಗಾತ್ರ

ಮಂಡ್ಯ: ಇಲ್ಲಿನ ಬುದ್ಧ ಭಾರತ ಫೌಂಡೇಷನ್‌ ವತಿಯಿಂದ ‘ಭಗವಾನ್ ಗೌತಮ ಬುದ್ಧ ಬೋಧಿಸಿದ ವಿಷಯಗಳು ಪ್ರಸ್ತುತ ಸಮಾಜಕ್ಕೆ ಎಷ್ಟು ಉಪಕಾರವಾಗಿವೆ’ ಎಂಬ ವಿಷಯ ಕುರಿತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯನ್ನು ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದೆ.

ಪಿಯುವರೆಗಿನ ವಿದ್ಯಾರ್ಥಿಗಳು ಹಾಗೂ ಪಿಯು ನಂತರ ವಿದ್ಯಾರ್ಥಿಗಳೆಂದು ಎರಡು ವಿಭಾಗ ಮಾಡಲಾಗಿದ್ದು, ಪ್ರತಿ ವಿಭಾಗದಲ್ಲಿ ತಲಾ ₹ 10,001 (ಪ್ರಥಮ), ₹ 7,500 (ದ್ವಿತೀಯ), ₹ 5000 (ತೃತೀಯ) ಹಾಗೂ ಸಮಾಧಾನಕರ ಬಹುಮಾನ ನೀಡಲಾಗುತ್ತದೆ.

2 ಸಾವಿರ ಪದಗಳಿಗೆ ಮೀರದಂತೆ ಪ್ರಬಂಧ ಬರೆದು ಜ. 31ರ ಒಳಗೆ ಕಳುಹಿಸಿಕೊಡಬೇಕು. ಮೇ 4ರಂದು ನಡೆಯುವ ‘ಗೌತಮ ಬುದ್ಧನ 2,549ನೇ ಜನ್ಮದಿನ’ದ ಅಂಗವಾಗಿ ನಗರದ ಕಲಾಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುತ್ತದೆ ಎಂದು ಕಾರ್ಯದರ್ಶಿ ಜೆ. ರಾಮಯ್ಯ ತಿಳಿಸಿದ್ದಾರೆ.

ಪ್ರಬಂಧಗಳನ್ನು ಜೆ. ರಾಮಯ್ಯ, ಕಾರ್ಯದರ್ಶಿ, ಬುದ್ಧ ಭಾರತ ಫೌಂಡೇಷನ್‌, ಸುಂದ್ರಪ್ಪ ಬಿಲ್ಡಿಂಗ್‌, 8ನೇ ಕ್ರಾಸ್‌, ಸುಭಾಷ್‌ನಗರ, ಮಂಡ್ಯ– 571401 ಈ ವಿಳಾಸಕ್ಕೆ ಕಳುಹಿಸಬೇಕು.

ಹೆಚ್ಚಿನ ವಿವರಗಳಿಗೆ ಮೊಬೈಲ್‌ ಸಂಖ್ಯೆ 98455 38685, 97313 56715 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT