ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈನ ಧರ್ಮ ಜಟಿಲ, ತರ್ಕ ಪ್ರಖರ

ಹಿರಿಯ ಸಂಶೋಧಕ ಪ್ರೊ.ಷ.ಶೆಟ್ಟರ್‌ ಅಭಿಪ್ರಾಯ
Last Updated 29 ಜನವರಿ 2015, 19:27 IST
ಅಕ್ಷರ ಗಾತ್ರ

ಬೆಂಗಳೂರು: ‘ಜೈನ ಧರ್ಮ ಜಟಿಲವಾ­ದುದು. ಜೈನರ ತರ್ಕ ಹಾಗೂ ವಾದ ಪ್ರಖ­ರತೆಯಿಂದ ಕೂಡಿದೆ.  ಜೈನ ತರ್ಕ­ಶಾಸ್ತ್ರಜ್ಞರನ್ನು ಮೀರಿಸಿದವರು ಜಗತ್ತಿ­ನಲ್ಲಿ ಸಿಗುವುದು ಅಪರೂಪ’ ಎಂದು ಹಿರಿಯ ಸಂಶೋಧಕ ಪ್ರೊ.ಷ.ಶೆಟ್ಟರ್‌ ವಿಶ್ಲೇಷಿಸಿದರು.

‘ಅಭಿನವ’ ಪ್ರಕಾಶನದ ವತಿಯಿಂದ ನಗ­ರದ ಕನ್ನಡ ಸಾಹಿತ್ಯ ಪರಿಷತ್‌ ಸಭಾಂಗ­ಣ­ದಲ್ಲಿ ಗುರುವಾರ ನಡೆದ ತಮ್ಮ ‘ಸಾವನ್ನು ಸ್ವಾಗತಿಸಿ (ಶ್ರವಣ­ಬೆಳಗೊಳ ಇತಿಹಾಸದ ಹಿನ್ನೆಲೆಯಲ್ಲಿ ಇಚ್ಛಾಮರಣ ಪ್ರಕ್ರಿಯೆ)’, ‘ಸಾವನ್ನು ಅರಸಿ (ಇಚ್ಛಾಮರಣದ ಜೈನ ಸಿದ್ಧಾಂತ ಮತ್ತು ಚಾರಿತ್ರಿಕ ಸಾದೃಶ್ಯಗಳು)’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾ­ಡಿದ ಅವರು, ‘ಶಾಸ್ತ್ರ ಹಾಗೂ ಸ್ತ್ರೋತ್ರ­ಗಳನ್ನು ಆರಂಭ­ದಲ್ಲಿ ನಾವು ಕಥೆಗಳ ಮೂಲಕ ಅರ್ಥ ಮಾಡಿಕೊಳ್ಳಬಹುದು. ಬಳಿಕ ಶಾಸ­ನ­ಗಳನ್ನು ಹಾಗೂ ಶಿಲ್ಪಗಳನ್ನು ಹುಡುಕಿ ತಿಳಿದುಕೊಳ್ಳಬಹುದು’ ಎಂದು ಅಭಿಪ್ರಾಯಪಟ್ಟರು.

‘ಪಂಪನ ಕಾವ್ಯದ 5–6 ಪುಟಗಳನ್ನು  ಇಂಗ್ಲಿಷ್‌ಗೆ ಭಾಷಾಂತರ ಮಾಡಲು ಒಂದೂವರೆ ತಿಂಗಳು ತೆಗೆದುಕೊಂಡಿದ್ದೂ ಇದೆ. ಕೆಲವು ಸಲ ಒಂದೊಂದು ಶಬ್ದ ಅನು­ವಾದ ಮಾಡಲು ಒದ್ದಾಡಿದ್ದೇನೆ. ಹೀಗೆ ಶಬ್ದಗಳನ್ನು ಪೋಣಿಸಿಕೊಂಡು ಹೋದೆ. ನಿರರ್ಗಳವಾಗಿ ಕೃತಿಯನ್ನು ಓದಿಸಿ­ಕೊಂಡು ಹೋಗುವಂತೆ ಮಾಡು­ವುದು ನನ್ನ ಗುರಿಯಾಗಿತ್ತು’ ಎಂದರು.

ಹಿರಿಯ ವಿಮರ್ಶಕ ಪ್ರೊ. ಓ.ಎಲ್‌. ನಾಗಭೂಷಣಸ್ವಾಮಿ ಮಾತನಾಡಿ, ‘ಧಾರ್ಮಿಕ ಹಿನ್ನೆಲೆ, ತತ್ವಶಾಸ್ತ್ರ ಇಟ್ಟು­ಕೊಂಡು ಯಾವ ಬಗೆಯ ಸಾವು ಸ್ವೀಕರಿ­ಸಬೇಕು ಎಂಬ ಬಗ್ಗೆ ಈ ಕೃತಿ ಮಾರ್ಗ­ದರ್ಶನ ನೀಡುತ್ತದೆ. ಇದು ಬದುಕಿನ ಬಗೆಗಿನ ಕೃತಿ’ ಎಂದರು.

‘ಸಾವನ್ನು ಅರಸಿ’ ಕೃತಿಯನ್ನು ಪ್ರೊ.ಓ.ಎಲ್‌.ನಾಗಭೂಷಣಸ್ವಾಮಿ, ‘ಸಾವನ್ನು ಸ್ವೀಕರಿಸಿ’ ಕೃತಿಯನ್ನು ಪ್ರೊ.ಷ. ಶೆಟ್ಟರ್‌ ಹಾಗೂ ಸದಾನಂದ ಕನವಳ್ಳಿ ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT