ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳಗುಂದ: ಉತ್ಖನನ ನಡೆಸಲು ಒತ್ತಾಯ

Last Updated 25 ನವೆಂಬರ್ 2013, 6:10 IST
ಅಕ್ಷರ ಗಾತ್ರ

ಶಿರಾಳಕೊಪ್ಪ:   ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ತಾಳಗುಂದದಲ್ಲಿ ಶೀಘ್ರ ಉತ್ಖನನ ಕಾರ್ಯ  ನಡೆಯಬೇಕಿದೆ ಎಂದು  ನಿವೃತ್ತ  ಕೆಎಎಸ್ ಅಧಿಕಾರಿ ಎಚ್. ಬಳಿಗಾರ್ ಅಭಿಪ್ರಾಯಪಟ್ಟರು.

   ಹತ್ತಿರದ ತಾಳಗುಂದ ಗ್ರಾಮದಲ್ಲಿ ಶುಕ್ರವಾರ ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ‘ತಾಳಗುಂದ ತಪ್ಪಲಿನಲ್ಲಿ ಕನ್ನಡದ ಸಂಜೆ’ ಎಂಬ ಚಿಂತನ–ಮಂಥನ ಕಾರ್ಯಕ್ರಮ ಉದ್ಘಾಟಿಸಿ  ಅವರು ಮಾತನಾಡಿದರು.
ತಾಳಗುಂದದ ಪ್ರಣವೇಶ್ವರ ದೇವಾಲಯ  ಎರಡು ಸಾವಿರ ವರ್ಷಕ್ಕೂ ಹಿಂದಿನ ಇತಿಹಾಸದ ಕುರುಹು ಉಳಿಸಿಕೊಂಡಿದೆ. ಇದರ ಉತ್ಖನನ ಕಾರ್ಯ ಶೀಘ್ರ ನಡೆಯಬೇಕಿದೆ ಎಂದರು. 

  ಶಿರಾಳಕೊಪ್ಪ ಠಾಣೆ ಸಬ್ ಇನ್  ಸ್ಪೆಕ್ಟರ್ ಗುರುಪ್ರಸಾದ್ ಮಾತನಾಡಿದರು. ಬೆಂಗಳೂರು ನಗರ  ಕಾರ್ಯನಿರತ ಪತ್ರಕರ್ತರ ಸಂಘದ  ಕಾರ್ಯದರ್ಶಿ ದೇವಿ  ಸಿನಿಮಾ ನಿರ್ದೇಶಕ ವೈಭವ್, ಲೇಖಕ ತಾಳಗುಂದ ಮಹಾದೇವಪ್ಪ, ಶಿರಾಳಕೊಪ್ಪ ಪಟ್ಟಣ ಪಂಚಾಯ್ತಿ ಸದಸ್ಯ ಬಿ.ಎಲ್.ಮಂಜುನಾಯ್ಕ, ವೈಭವ್ ಶಿವಣ್ಣ, ತಾಲ್ಲೂಕು ಪತ್ರಕರ್ತರ ಸಂಘದ ಉಪಾಧ್ಯಕ್ಷ ಅರುಣ್ , ತಾಳಗುಂದ ರುದ್ರಣ್ಣ, ರಮೇಶ್
ಮಾತನಾಡಿದರು.

   ಕನ್ನಡ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಖಜಾಂಚಿ ಕಿರಣ್ ಮೂಗೂರು,  ಸಂಚಾಲಕ ಕೃಷ್ಣರಾಜ್, ಜಯ್ಯಾನಾಯ್ಕ, ಪೊಲೀಸ್‌ ಇಲಾಖೆಯ  ಕೊಟ್ರೇಶ್, ಲೋಕೇಶ್, ರಮೇಶ್, ಗುರುವಾನಾಯ್ಕ, ಪುರಾತತ್ವ ಇಲಾಖೆಯ ಜಗದೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT