ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ವಿ.ವಿಗೆ ಕಲಿವಾಳ ಕುಲಪತಿ

ಸರ್ಕಾರಕ್ಕೆ ಹಿನ್ನಡೆ
Last Updated 28 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ವಿಶ್ವವಿ­ದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾ­ಗದ ಮುಖ್ಯಸ್ಥ ಡಾ.ಬಿ.­ಬಿ.­ಕಲಿ­ವಾಳ ಅವರನ್ನು ದಾವಣಗೆರೆ ವಿಶ್ವವಿದ್ಯಾಲ­ಯದ ಕುಲ­ಪತಿ­ಯಾಗಿ ನೇಮಕ ಮಾಡಲಾಗಿದೆ.

ರಾಜ್ಯಪಾಲ ಎಚ್.ಆರ್‌. ಭಾರ­ದ್ವಾಜ್‌ ಅವರ ಕಚೇರಿ  ಶನಿವಾರ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದೆ.
ಸಾಹಿತಿ ಪ್ರೊ ಯು.­ಆರ್‌.­ಅನಂತ­ಮೂರ್ತಿ ಅಧ್ಯಕ್ಷತೆಯ ಶೋಧನಾ ಸಮಿತಿ ಇದೇ ಮೊದಲ ಸಲ ಸಂದ­ರ್ಶನದ ಮೂಲಕ ಕಲಿವಾಳ, ಬೆಂಗ­ಳೂರು ವಿವಿಯ ಪ್ರೊ ಎಲ್‌.­ಗೋಮತಿದೇವಿ ಮತ್ತು ಡಾ.ಜನಾ­ರ್ದನಂ ಅವರ ಹೆಸರನ್ನು ಕುಲ­ಪತಿ ಸ್ಥಾನಕ್ಕೆ ಶಿಫಾರಸು ಮಾಡಿತ್ತು.

ನಿಯಮ ಪ್ರಕಾರ ಸರ್ಕಾರದ ಜತೆ ಸಮಾಲೋಚನೆ ನಡೆಸಿ ಈ ಮೂವರಲ್ಲಿ ಒಬ್ಬರನ್ನು ನೇಮಕ ಮಾಡ­ಬೇಕು. ಆದರೆ, ಈ ವಿಷಯ­ದಲ್ಲಿ ಸರ್ಕಾರದ ಮಾತು ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಶಿಷ್ಟ ಪಂಗಡಕ್ಕೆ ಸೇರಿದ ಗೋಮತಿದೇವಿ ಅವರನ್ನು ನೇಮಕ ಮಾಡುವಂತೆ ರಾಜ್ಯಪಾಲರಿಗೆ ಸಲಹೆ ಮಾಡಿದ್ದರು ಎನ್ನಲಾಗಿದೆ.

ಅನಂತಮೂರ್ತಿ ಅಸಮಾಧಾನ
ಕಲಿವಾಳ ನೇಮಕಕ್ಕೆ ಅನಂತ­ಮೂರ್ತಿ ತೀವ್ರ ಅಸಮಾಧಾನ ವ್ಯಕ್ತ­ಪ­ಡಿಸಿದ್ದಾರೆ. ‘ಈ ಆಯ್ಕೆ ನನಗೆ ಇಷ್ಟ­ವಾಗಿಲ್ಲ. ಗೋಮತಿದೇವಿ ಅವರನ್ನೇ ಕುಲಪತಿಯಾಗಿ ನೇಮಕ  ಮಾಡಬೇ­ಕಾಗಿತ್ತು. ಈ ಕುರಿತು ಮುಖ್ಯಮಂತ್ರಿ ಜತೆ ಚರ್ಚಿಸಿದ ನಂತರ ಹೆಚ್ಚಿನ ವಿವರ ನೀಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT