ಸದ್ಯದಲ್ಲೇ ಅಂತಿಮ ವರದಿ
ವಿದ್ಯಾರ್ಥಿನಿಯ ಪೋಷಕರು, ಅವರು ಹೆಸರಿಸಿದ್ದ ಶಂಕಿತ ವ್ಯಕ್ತಿಗಳು, ಚಿಕಿತ್ಸೆ ನೀಡಿದ ವೈದ್ಯರು, ಸಹಪಾಠಿಗಳು, ಶಿಕ್ಷಕರು ಸೇರಿದಂತೆ 100ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಪೋಷಕರು ಹಾಗೂ ಶಂಕಿತರ ಮೊಬೈಲ್ ಕರೆ ವಿವರ ಪರಿಶೀಲಿಸಲಾಗಿದೆ. ಕೆಲವೆಡೆ ಇದ್ದ ಸಿ.ಸಿ ಕ್ಯಾಮೆರಾಗಳನ್ನೂ ಪರಿಶೀಲಿಸಲಾಗಿದೆ. ಇದಾದ ನಂತರವೇ ನಿರ್ಧಾರಕ್ಕೆ ಬರಲಾಗಿದೆ. ಸದ್ಯದಲ್ಲೇ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಲಾಗುವುದು.
– ಬಿಪಿನ್ ಗೋಪಾಲಕೃಷ್ಣ
ಡಿಜಿಪಿ, ಸಿಐಡಿ