ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದಿನಿಂದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ

Last Updated 25 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ವಾರ್ತಾ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಶ್ರಯದಲ್ಲಿ ಗುರುವಾರ (ಡಿ. 26ರಿಂದ ಜ. 2ರವರೆಗೆ)ದಿಂದ 6ನೇ ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವ ಆಯೋಜಿಸಲಾಗಿದೆ.

ದೇಶ ವಿದೇಶಗಳ ಪ್ರಸಿದ್ಧ ಸಿನಿಮಾಗಳು ಈ ಉತ್ಸವದಲ್ಲಿ ಪ್ರದರ್ಶನ ಕಾಣಲಿವೆ. ಚಿತ್ರನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತೀರ್ಪುಗಾರರು ಹಾಗೂ ವಿಮರ್ಶಕರು ಸೇರಿದಂತೆ 20 ವಿದೇಶಿ ಪ್ರತಿನಿಧಿಗಳು ಸೇರಿದಂತೆ ಉತ್ಸವದಲ್ಲಿ 57 ಮಂದಿ ಗಣ್ಯ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ.

ಉದ್ಘಾಟನೆ– ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಟ ಕಮಲ್‌ ಹಾಸನ್‌. ಅಧ್ಯಕ್ಷತೆ– ದಿನೇಶ್‌ ಗುಂಡೂರಾವ್‌. ಅತಿಥಿ– ಗೃಹಸಚಿವ ಕೆ.ಜೆ. ಜಾರ್ಜ್‌, ಅಂಬರೀಶ್‌, ಉಮಾಶ್ರೀ, ಸಂಸದ ಪಿ.ಸಿ. ಮೋಹನ್‌, ರಮ್ಯಾ, ಮೇಯರ್‌ ಬಿ.ಎಸ್‌. ಸತ್ಯನಾರಾಯಣ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಚ್‌.ಡಿ. ಗಂಗರಾಜು, ನಟ ಸುದೀಪ್‌, ಇರಾನ್‌ ದೇಶದ ಸಿನಿಮಾ ನಿರ್ದೇಶಕ ಪೌರನ್‌ ದೇರಾಕ್ಷಾಂದ್ಹೇ, ಜರ್ಮನಿಯ ಚಿತ್ರ ನಿರ್ದೇಶಕ ಹೈನ್ಸ್‌ ಜಾರ್ಜ್‌ ಭಡೇವಿಟ್ಸ್‌ ಹಾಗೂ ನಟಿ ರಾಧಿಕಾ ಪಂಡಿತ್‌.

ಉದ್ಘಾಟನಾ ಸಿನಿಮವಾಗಿ ಇರಾಕ್‌ ದೇಶದ ‘ಬೇಕಾಸ್‌’ (ನಿರ್ದೇಶನ– ಕರ್ಜಾನ್‌ ಖಾದರ್‌) ಚಿತ್ರ ಪ್ರದರ್ಶನ. ಸ್ಥಳ: ಸೆಂಟ್ರಲ್‌ ಕಾಲೇಜು, ಪ್ಯಾಲೇಸ್‌ ರಸ್ತೆ. ಸಂಜೆ 5.30.

ಶುಕ್ರವಾರ (ಡಿ. 27) ‘ಪ್ರಾದೇಶಿಕ ಚಿತ್ರಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆ’ ವಿಷಯ ಕುರಿತು ಚರ್ಚೆ.

ಭಾನುವಾರ (ಡಿ. 29) ‘ದಿ ಡಿಜಿಟಲ್‌ ಎಕ್ಸ್‌ಪೀರಿಯನ್ಸ್‌: ಟಾಕಿಂಗ್‌ ರೆಡ್‌, ಅಲೆಕ್ಸಾ, ಬ್ಲಾಕ್‌ ಮ್ಯಾಜಿಕ್‌’ ಡಿಜಿಟಲ್‌ ಕ್ಯಾಮೆರಾ ಕುರಿತು ಡಾ. ಬೇದಬ್ರತ ಪೇನ್‌, ವಿಶ್ವನಾಥ್‌, ನಿರಂಜನ ಬಾಬು, ಮನೋಹರ ಜೋಶಿ ಅವರಿಂದ ವಿಚಾರ ಸಂಕಿರಣ. ಸೋಮವಾರ (ಡಿ. 30) ‘ದಿ ಡಿಜಿಟಲ್‌ ಎಡ್ಜ್‌: ಸೌಂಡ್‌ ಕ್ಯಾಪ್ಟರ್‌ ಆನ್‌ ಲೊಕೇಷನ್‌’ ಡಿಜಿಟಲ್‌ ಶಬ್ದಗ್ರಹಣ ಕುರಿತು ನಿಹಾರ್‌ ಸಮಾಲ್‌ ಅವರಿಂದ ವಿಚಾರ ಸಂಕಿರಣ.

ಗುರುವಾರ (ಜ. 2) ಸಂಜೆ ಸಮಾರೋಪ ಸಮಾರಂಭ. ಆಸ್ಟ್ರೇಲಿಯಾ ನಿರ್ದೇಶಕ ಕಿಮ್‌ ಮೋರ್ಡೋಂ ‘ದ ರಾಕೆಟ್‌’ ಚಿತ್ರ ಪ್ರದರ್ಶನ.  ಸ್ಥಳ: ಫನ್‌ ಸಿನಿಮಾಸ್‌, ಕನ್ನಿಂಗ್‌ ಹ್ಯಾಂ ರಸ್ತೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT