ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಕಕಾರ ಬಿ.ಟಿ.ಮುನಿರಾಜಯ್ಯ ನಿಧನ

Last Updated 12 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಹಾಗೂ ನಾಟಕಕಾರ ಬಿ.ಟಿ.ಮುನಿರಾಜಯ್ಯ (62) ಅವರು ಇಂದು ಇಲ್ಲಿ ನಿಧನರಾದರು.
ಪತ್ನಿ ಮತ್ತು ಪುತ್ರನನ್ನು ಅವರು ಅಗಲಿದ್ದಾರೆ.

  ಬೋವಿ ಜನಾಂಗದ ಸಾಂಸ್ಕೃತಿಕ ನಾಯಕ ಹಾಗೂ ಆರಾಧ್ಯದೈವ ’ಕಾಟಮಲ್ಲ’ ನಾಟಕ ರಚಿಸಿದ್ದ ಮುನಿರಾಜಯ್ಯ ಅವರು ಅದರ ನೂರಾರು  ರಂಗಪ್ರಯೋಗಗಳು  ರಾಜ್ಯದಲ್ಲಿ   ಪ್ರಯೋಗಗೊಳ್ಳಲು   ಕಾರಣವಾಗಿದ್ದರು.  ಅವರು ರಚಿಸಿದ  ’ಕರ್ಪೂರ ಬೆಂಕಿ’  ಹಾಗೂ ’ಪುರಾಣ ಪ್ರಹಸನ’ ನಾಟಕಗಳು ರಂಗಸುಗ್ಗಿ, ಸಮಸ್ತರು ತಂಡದಿಂದ ರಾಜ್ಯದ ವಿವಿಧೆಡೆ ಪ್ರಯೋಗಗೊಂಡಿದ್ದವು.

ಲಲಿತ ಕಲಾ ಅಕಾಡೆಮಿ, ನಾಟಕ ಅಕಾಡೆಮಿ ಸೇರಿದಂತೆ ಬಹುತೇಕ ಎಲ್ಲ ಅಕಾಡೆಮಿಗಳಲ್ಲಿ ರಿಜಿಸ್ಟ್ರಾರ್ ಅಗಿ ಜತೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ್ದ ಅವರು, ರಾಜ್ಯದಲ್ಲಿ ಹಲವು ಸಾಂಸ್ಕೃತಿಕ ಸಂಘ ಸಂಸ್ಥೆಗಳ ಹುಟ್ಟಿಗೆ ಕಾರಣರಾದ ತುಂಬು ಅಂತಕರಣದ ಅಧಿಕಾರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT