ಬೆಂಗಳೂರು: ಹೆಗ್ಗೋಡಿನ ನೀಲ ಕಂಠೇಶ್ವರ ನಾಟ್ಯಸೇವಾ ಸಂಘ (ನೀನಾಸಂ) ಮೇ 11ರಿಂದ 31ರವರೆಗೆ ರಂಗ ತರಬೇತಿ ಶಿಬಿರ ಆಯೋಜಿಸ ಲಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

18ರಿಂದ 35ರ ನಡುವಿನ ವಯಸ್ಸಿನವರಿಗೆ ಪಾಲ್ಗೊಳ್ಳಲು ಅವಕಾಶ ವಿದೆ. ಅಭ್ಯರ್ಥಿಗಳು ಎಸ್ಎಸ್ಎಲ್‌ಸಿ ಓದಿರಬೇಕು. ಶಿಬಿರದ ಅವಧಿಯಲ್ಲಿ ಊಟ–ವಸತಿ ವೆಚ್ಚವಾಗಿ ₨ 3,500ಪಾವತಿಸಬೇಕು. ಅರ್ಜಿಯ ವಿವರಗಳನ್ನು ಆಧರಿಸಿ ಅಭ್ಯರ್ಥಿಗಳನ್ನು ಶಿಬಿರಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ನೀನಾಸಂ ಪ್ರಕಟಣೆ ತಿಳಿಸಿದೆ.

ಶಿಬಿರದಲ್ಲಿ ರಂಗ ಮಾಧ್ಯಮದ ಬಗ್ಗೆ ಮಾಹಿತಿ, ನುರಿತ ನಿರ್ದೇಶಕರಿಂದ ನಾಟಕ ಪ್ರಯೋಗಗಳನ್ನು ಮಾಡಿಸ ಲಾಗುತ್ತದೆ. ಆಸಕ್ತರು ನೀನಾಸಂನಿಂದ ಪ್ರವೇಶ ಪತ್ರ ತರಿಸಿಕೊಂಡು, ಅದನ್ನು ಭರ್ತಿ ಮಾಡಿ ಏಪ್ರಿಲ್ 20ರೊಳಗೆ ಕಳುಹಿಸಬೇಕು. ಅಥವಾ ನೀನಾಸಂ ವೆಬ್‌ಸೈಟ್ (www.ninasam.org) ಮೂಲಕ ಆನ್-ಲೈನ್ ಅರ್ಜಿ ಸಲ್ಲಿಸಬಹುದು. ಶಿಬಿರಕ್ಕೆ ಆಯ್ಕೆಯಾದ ವರಿಗೆ ಏ. 30ರೊಳಗೆ ಮಾಹಿತಿ ನೀಡಲಾಗುತ್ತದೆ. ಸಂಪರ್ಕ ವಿಳಾಸ: ಸಂಚಾಲಕರು, ನೀನಾಸಂ ರಂಗಶಿಕ್ಷಣ ಕೇಂದ್ರ, ಹೆಗ್ಗೋಡು, ಸಾಗರ, ಶಿವಮೊಗ್ಗ ಜಿಲ್ಲೆ 577 417.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.