ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಜಾತ್ರೆ; 25 ಗ್ರಂಥಗಳು ಲೋಕಾರ್ಪಣೆ

Last Updated 5 ನವೆಂಬರ್ 2014, 6:05 IST
ಅಕ್ಷರ ಗಾತ್ರ

ಸಿಂದಗಿ: ನಾಡಿನ ಅದೆಷ್ಟೋ ಮಠಗಳು ಧಾರ್ಮಿಕ, ಸಾಂಸ್ಕೃತಿಕ, ಸಾಂಪ್ರದಾಯಿಕ ರೀತಿಯಲ್ಲಿ ಜಾತ್ರೆಗಳನ್ನು ಆಚರಿಸಿಕೊಳ್ಳುತ್ತಿದ್ದರೆ, ಇಲ್ಲೊಂದು ಮಠದಲ್ಲಿ ಅಪರೂಪದ ಜಾತ್ರೆ ನಡೆಯುತ್ತಲಿದೆ. ಅದೇ ಪುಸ್ತಕ ಜಾತ್ರೆ, ಪುಸ್ತಕ ಸಂಸ್ಕೃತಿಯನ್ನು ಹೆಚ್ಚಿಸುವ ಮಹತ್ಕಾರ್ಯ ಮಾಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ನಾಂದಿ ಹಾಡುತ್ತಲಿರುವ ಶ್ರೀಮಠ ವಿಜಯಪುರ ಜಿಲ್ಲೆಯ ಸಿಂದಗಿ ಸಾರಂಗಮಠ.

ಸಾರಂಗಮಠದ ಪೀಠಾಧ್ಯಕ್ಷರಾಗಿರುವ ಪ್ರಭು ಸಾರಂಗದೇವ ಶಿವಾಚಾರ್ಯರು ತಮ್ಮ ಪಟ್ಟಾಧಿಕಾರ ರಜತ ಮಹೋತ್ಸವ ಬರೀ ಪ್ರಚಾರಕ್ಕಾಗಿ ಬಳಸಿಕೊಳ್ಳದೇ ಅದೊಂದು ವಿಧಾಯಕ ಸ್ವರೂಪ ಪಡೆದುಕೊಳ್ಳಬೇಕು ಎಂಬ ಮಹದಾಸೆಯನ್ನಿಟ್ಟುಕೊಂಡು ರಜತ ಮಹೋತ್ಸವ ಆಚರಣೆಯನ್ನು 25 ಗ್ರಂಥಗಳನ್ನು ಪ್ರಕಟಿಸುವ ಮೂಲಕ ಆಚರಿಸಿಕೊಳ್ಳುವ ಸದಿಚ್ಛೆ ಹೊಂದಿದ್ದಾರೆ.

ಶ್ರೀಗಳು 2002ರಲ್ಲಿ 19 ಜನ ನಾಡಿನ ಪುಣ್ಯಪುರುಷರ ಬದುಕು–ಬರಹ ಬಿಂಬಿಸುವ 19 ಕೃತಿಗಳನ್ನು ಲೋಕಾರ್ಪಣೆ ಮಾಡುವ ಮೂಲಕ  ಪಟ್ಟಾಧಿಕಾರ ದ್ವಾದಶ ಮಹೋತ್ಸವವನ್ನು ಆಚರಿಸಿಕೊಂಡಿದ್ದರು. ಇದೇ ಸಂದರ್ಭದಲ್ಲಿ ‘ಸಾರಂಗಪ್ರಭೆ’ ಅಭಿನಂದನ ಗ್ರಂಥ ಮತ್ತು ‘ಬಸವಣ್ಣನವರ ವಚನಗಳ ಸಮಾಲೋಕನ’ ನೆನಪಿನ ಸಂಪುಟವನ್ನು ಕೂಡ ಹೊರ ತರಲಾಗಿತ್ತು.

ಸದ್ಯ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನದ ಪ್ರಸಾರಾಂಗ ಅಡಿ ಮಕ್ಕಳ ಸಾಹಿತ್ಯ ಮಾಲೆಯ 25 ಪುಣ್ಯ ಪುರುಷರ ಜೀವನ ಚರಿತ್ರೆಯನ್ನೊಳಗೊಂಡ ಗ್ರಂಥಗಳನ್ನು ನವೆಂಬರ್ 5ರಂದು ಮುಂಜಾನೆ 11.30ಕ್ಕೆ ನಗರದ ಸಾತವೀರೇಶ್ವರ ಬೃಹತ್ ಸಭಾಭವನದಲ್ಲಿ ವಿಜಯಪುರ ಜ್ಞಾನಯೋಗಾ­ಶ್ರಮದ ಸಿದ್ಧೆೇಶ್ವರ ಸ್ವಾಮಿಗಳ ಸಮ್ಮುಖದಲ್ಲಿ ಲೋಕಾರ್ಪಣೆ ನಡೆಯಲಿದೆ.
ಪ್ರಭು ಸಾರಂಗದೇವ ಶಿವಾಚಾರ್ಯರು ಉಪಸ್ಥಿತರಿರುವರು. ಪ್ರಸ್ತುತ ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ರಮೇಶ ಭೂಸನೂರ ವಹಿಸಿಕೊಳ್ಳುವರು.

ಮುಖ್ಯ ಅತಿಥಿಗಳಾಗಿ ಸಚಿವರಾದ ಎಂ.ಬಿ.ಪಾಟೀಲ, ಎಸ್.ಆರ್.ಪಾಟೀಲ, ಜಿಲ್ಲೆಯ ಎಲ್ಲಾ ಮತಕ್ಷೇತ್ರಗಳ ಶಾಸಕರುಗಳು, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಉಮೇಶ ಕೋಳಕೂರ, ಉಪಾ­ಧ್ಯಕ್ಷ ನಿಂಗನಗೌಡ ಪಾಟೀಲ, ನಗರದ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಮುಖರು ಹಾಗೂ ಸಹಸ್ರಾರು ಸಂಖ್ಯೆ ಭಕ್ತಾದಿಗಳು ಸಾಕ್ಷಿಯಾಗಲಿದ್ದಾರೆ.

ಲೋಕಾರ್ಪಣೆಗೊಳ್ಳುವ ಕೃತಿಗಳು

ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯರು. ಲೇಖಕರು–ಪ.ಗು.ಸಿದ್ದಾಪುರ; ರಂಭಾಪುರಿ ಜಗದ್ಗುರು ವೀರಗಂಗಾಧರ ಶಿವಾಚಾರ್ಯರು.ಲೇ–ಮಲಯಶಾಂತಮುನಿ ಶಿವಾಚಾರ್ಯರು; ಹಾನಗಲ್ ಕುಮಾರಸ್ವಾಮಿಗಳು. ಲೇ–ಬಿ.ಎಂ.ಗೋಟಖಿಂಡಿಮಠ; ಕಡಕೋಳ ಮಡಿವಾಳಪ್ಪ. ಲೇ–ಮೀನಾಕ್ಷಿ ಬಾಳಿ; ವೈರಾಗ್ಯನಿಧಿ ಅಕ್ಕಮಹಾದೇವಿ. ಲೇ–ಮಲ್ಲಮ್ಮ ಬಿರಾದಾರ; ಶಿವಶರಣೆ ಹೇಮರಡ್ಡಿ ಮಲ್ಲಮ್ಮ. ಲೇ–ಮುಕ್ತಾಯಕ್ಕ ಕತ್ತಿ; ಎಡೆಯೂರ ಸಿದ್ದಲಿಂಗೇಶ್ವರ.ಲೇ–ಎಸ್.ಬಿ.ಬರಗುಂಡಿ; ಗಾನಯೋಗಿ ಪಂಚಾಕ್ಷರಿ ಗವಾಯಿಗಳು. ಲೇ–ಚಂದ್ರಶೇಖರ ವಸ್ತ್ರದ; ಕೈವಲ್ಯ ಚಕ್ರವರ್ತಿ ನಿಜಗುಣ ಶಿವಯೋಗಿ. ಲೇ–ಸಂಗಮೇಶ ಗುಜಗೊಂಡ;

ಮಂಗಳಮೂರ್ತಿ ವೀರಭದ್ರೇಶ್ವರ. ಲೇ.ಸಂಗಮೇಶ ಸವದತ್ತಿಮಠ; ತತ್ವಪದಕಾರ ಖೈನೂರ ಕೃಷ್ಣಪ್ಪ. ಲೇ–ಮೀನಾಕ್ಷಿ ಬಾಳಿ; ಗರಗದ ಮಡಿವಾಳೇಶ್ವರ. ಲೇ–ರಾಮಚಂದ್ರ ಪಾಟೀಲ; ಹಾಲಕೇರಿ ಅನ್ನದಾನೇಶ್ವರ. ಲೇ–ಶ್ರೀಶೈಲ ಹಿರೇಮಠ; ನವಲಗುಂದ ಅಜಾತ ನಾಗಲಿಂಗಪ್ಪ. ಲೇ–ಈಶ್ವರಪ್ಪ ಜಾವೂರ; ಯತಿಕುಲ ತಿಲಕ ಸಿದ್ಧಾರೂಢರು. ಲೇ–ವಿ.ಡಿ.ವಸ್ತ್ರದ; ಸಿಂದಗಿಯ ಸೌಭಾಗ್ಯ ನೀಲಗಂಗಾ. ಲೇ–ಎಂ.ಎಂ.ಪಡಶೆಟ್ಟಿ; ಶಿರಹಟ್ಟಿ ಫಕೀರೇಶ್ವರ.  ಲೇ–ಕೆ.ಎಸ್.ಕೊಡ್ಲಿವಾಡ; ಗೋಲಗೇರಿ ಗೊಲ್ಲಾಳೇಶ್ವರ. ಲೇ–ಹ.ಮ.ಪೂಜಾರ; ತಿಪ್ಪಾಯಿಕೊಪ್ಪದ ಮೂಕಪ್ಪ ಶಿವಯೋಗಿ. ಲೇ–ಎಂ.ವಿ.ಗಣಾಚಾರಿ; ಕೊಪ್ಪಳ ಗವಿಸಿದ್ದೇಶ್ವರ. ಲೇ–ರಾಜೇಂದ್ರ ಗಡಾದ; ಇಟಗಿ ಭೀಮಾಂಬಿಕೆ. ಲೇ–ಚನ್ನಪ್ಪ ಕಟ್ಟಿ; ಮುರಗೋಡ ಮಹಾಂತಜ್ಜನವರು.

ಲೇ–ಗುರುದೇವಿ ಹುಲೆಪ್ಪನವರಮಠ; ಶಿಶುನಾಳ ಶರೀಫ ಶಿವಯೋಗಿ. ಲೇ–ಚಂದ್ರಗೌಡ ಕುಲಕರ್ಣಿ; ಧಾರವಾಡ ತಪೋವನದ ಕುಮಾರಸ್ವಾಮಿಗಳು. ಲೇ–ಎಂ.ಎಸ್.ಚಾಂದಕವಟೆ; ಕಲಬುರ್ಗಿ ಶರಣಬಸವೇಶ್ವರ. ಲೇ.ಎಸ್.ಜಿ.ಹಿರೇಮಠ; ವರದಾನಿ ಗುಡ್ಡಾಪುರ ದಾನಮ್ಮ. ಲೇ–ನಾಗರಾಜ ಮುರಗೋಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT