ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕ ಜೋಡಿಸುವ ರೋಬೊ...!

ಪಿ.ಇ.ಎಸ್‌ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಕೈಚಳಕ
Last Updated 27 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯಾರ್ಥಿಗಳು ಗ್ರಂಥಾಲ­ಯ­ದಲ್ಲಿ ಓದಿ ಟೇಬಲ್‌ ಮೇಲೆ ಇಟ್ಟು ಹೋದ ಪುಸ್ತಕಗಳನ್ನು ಎತ್ತಿ ಮತ್ತೆ ರ್‌್್ಯಾಕ್‌ಗೆ ಜೋಡಿಸಬೇಕಲ್ಲ ಎಂಬ ಚಿಂತೆಯೇ? ಗ್ರಂಥಾಲಯ ನಿರ್ವಹಣೆಗೆ ಸಿಬ್ಬಂದಿ ಕೊರತೆಯೇ? ಇದಕ್ಕೊಂದು ಪರಿಹಾರವನ್ನು ಪಿ.ಇ.ಎಸ್‌ ವಿಶ್ವ­ವಿದ್ಯಾ­ಲಯ ವಿದ್ಯಾರ್ಥಿಗಳು ರೂಪಿಸಿದ್ದಾರೆ.

ಮಾಹಿತಿ ಕೇಂದ್ರದಲ್ಲಿ ಪುಸ್ತಕದ ನಿರ್ವಹಣೆಗೆಂದೇ ‘ಗ್ರಂಥಾಲಯ ರೋಬೊ’ ರೂಪಿಸಿದ್ದಾರೆ. ಒಂದು ಬಟನ್‌ ಒತ್ತಿದರೆ ಸಾಕು ಟೇಬಲ್‌ ಮೇಲೆ ಇಟ್ಟ ಪುಸ್ತಕಗಳನ್ನು ಈ ರೋಬೊ ಮತ್ತೆ ರ್‌್ಯಾಕ್‌ಗೆ ಜೋಡಿಸು­ತ್ತದೆ. ವಿ.ವಿ ಗ್ರಂಥಾಲಯದಲ್ಲಿ ಈ ಯಂತ್ರವು ಕಾರ್ಯನಿರ್ವಹಿಸುತ್ತಿದ್ದು, ಎಲ್ಲರ ಚಿತ್ತವನ್ನು ತನ್ನತ್ತ ಸೆಳೆಯುತ್ತಿದೆ.

ಎಲೆಕ್ಟ್ರಾನಿಕ್‌ ಹಾಗೂ ಮೆಕಾನಿಕಲ್‌ ಎಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿ­ಗಳು ಈ ರೋಬೊ ಅಭಿವೃದ್ಧಿಪಡಿಸಿ­ದ್ದಾರೆ. ಸುಮಾರು ₨ 1 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ರೋಬೊ, ಪುಸ್ತಕ­ಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವ ಕೆಲಸದಲ್ಲಿ ನಿರತವಾಗಿದೆ.

‘ಈ ರೋಬೊ ಅಭಿವೃದ್ಧಿಗೆ ಎರಡು ವರ್ಷ ತೆಗೆದುಕೊಂಡಿದ್ದೇವೆ. ಮೂರು ಹಂತಗಳಲ್ಲಿ ವಿನ್ಯಾಸಗೊಳಿಸಿದ್ದೇವೆ. ಮೊದಲು ಫ್ಲೈವುಡ್‌ನಿಂದ ನಿರ್ಮಿಸಿ­ದೆವು. ಬಳಿಕ ಅಲ್ಯೂಮಿನಿಯಂ ಕವಚ ಅಳವಡಿಸಲಾಯಿತು. ಅಂತಿಮವಾಗಿ ಸ್ಟೀಲ್‌ನಿಂದ ನಿರ್ಮಿಸಿದೆವು’ ಎಂದು ವಿಭಾಗದ ಕರುಣಾಕರ್‌ ಪ್ರವೀಣ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ರಿಮೋಟ್‌ ಮೂಲಕ ಈ ಯಂತ್ರ­ವನ್ನು ನಿಯಂತ್ರಿಸಬಹುದು. ಪ್ರಾಕ್ಸಿ­ಮಿಟಿ, ಅಲ್ಟ್ರಾ ಸೋನಿಕ್‌, ಪಿಐಆರ್‌ ಸೆನ್ಸರ್‌ ಅಳವಡಿಸಲಾಗಿದೆ. ಸೆನ್ಸರ್‌ ನೆರ­ವಿನಿಂದ ಸಾಗುವ ರೋಬೊಗೆ ಪ್ರತ್ಯೇಕ ಹಾದಿ ನಿರ್ಮಿಸಬೇಕು. ಈ ಹಾದಿಯಲ್ಲಿ ಯಾರಾದರೂ ಅಡ್ಡಬಂದರೆ ಸಂಚಾರ ಸ್ಥಗಿತಗೊಳಿಸಿ ಶಬ್ದಮಾಡುತ್ತದೆ.

ವಿ.ವಿ ಅನನ್ಯ ಸಂಶೋಧನಾ ಮತ್ತು ಆವಿಷ್ಕಾರ ಕೇಂದ್ರದಲ್ಲಿ (ಕೋರಿ) ಈ ಯಂತ್ರ ಸಿದ್ಧಪಡಿಸಲಾಗಿದೆ. ಪ್ರಾಧ್ಯಾ­ಪಕ ಪ್ರೊ.ನಂದಕುಮಾರ್ ಮಾರ್ಗದ­ರ್ಶ­ನ­ದಲ್ಲಿ ಸಂಕೇತ್‌, ಸ್ನೇಹಿತ್‌, ರಜತ್‌, ಕರುಣಾಕರ್‌ ಪ್ರವೀಣ್‌, ಜೂಡ್‌, ವಿನಯ್‌ ಈ ತಂತ್ರಜ್ಞಾನ ಅಭಿವೃದ್ಧಿ­ಪಡಿಸಿದ್ದಾರೆ.

‘ರೋಬೊಗೆ ಬಳಸಿರುವ ಪ್ರತಿ­ಯೊಂದು ವಸ್ತುವನ್ನು ಇಲ್ಲಿಯೇ ತಯಾ­ರಿಸಿದ್ದೇವೆ. ಯಂತ್ರವು ಬ್ಯಾಟರಿ ನೆರ­ವಿನಿಂದ ಚಲಿಸುತ್ತದೆ. ಒಮ್ಮೆ ಚಾರ್ಜ್‌ ಮಾಡಿದರೆ ಐದು ದಿನ ಬಳ­ಸಬಹುದು. 10 ಸೆನ್ಸರ್‌ಗಳನ್ನು ಬಳ­ಸ­ಲಾ­­ಗಿದೆ. ನೇವಿಗೇಟರ್, ಆಪ್ಟಿಕಲ್ ಡಿಟೆಕ್ಷನ್, ಡೀ­ಕೋಡರ್, ಎಲೆಕ್ಟ್ರಾನಿಕ್ ಬೋರ್ಡ್‌ ಉಪಕರಣಗಳನ್ನು ಬಳಸಿ­ಕೊಳ್ಳಲಾಗಿದೆ’ ಎಂದು ಕರುಣಾಕರ್‌ ಮಾಹಿತಿ ನೀಡಿದರು.

‘ರೋಬೊ ಬಳಕೆಯಿಂದ ಸಿಬ್ಬಂದಿ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಪುಸ್ತಕ ಜೋಡಿಸುವ ಕೆಲಸ ಮುಗಿದ ನಂತರ ತನ್ನ ಸ್ಥಾನಕ್ಕೆ ಹೋಗಿ ಸ್ವಯಂ ಚಾರ್ಜ್‌ ಮಾಡಿಕೊಳ್ಳುವಂತೆ ರಚಿಸ­ಲಾಗಿದೆ. ಯಂತ್ರವನ್ನು ಸುಧಾರಣೆ ಮಾಡಲು ಇನ್ನೂ ಅವಕಾಶವಿದೆ’ ಎಂದರು.

ದಿನಕ್ಕೆ 800 ಪುಸ್ತಕ
ಏಕಕಾಲದಲ್ಲಿ ಸುಮಾರು 10 ಕೆ.ಜಿ. ಪುಸ್ತಕ­ವನ್ನು ಎತ್ತಿಕೊಂಡು ಹೋಗಿ ರ್‌್್ಯಾಕ್‌ನಲ್ಲಿ ಇಡುವ ಸಾಮ­ರ್ಥ್ಯ­ವನ್ನು ಈ ರೋಬೊ ಹೊಂದಿದೆ. ಗ್ರಂಥಾ­ಲ­ಯದಲ್ಲಿ ಪುಸ್ತಕ ಓದಿ ಟೇಬಲ್‌ ಮೇಲೆ ಇಟ್ಟಿ­ರುವ ಬ್ಯಾಸ್ಕೆಟ್‌ನಲ್ಲಿ ಹಾಕ­ಬೇಕು. ಆಗ ರೋಬೊ ಆ ಬ್ಯಾಸ್ಕೆಟ್‌ ಎತ್ತಿ­ಕೊಂಡು  ರ್‌್ಯಾಕ್‌ನಲ್ಲಿಡುತ್ತದೆ.

ಯಾವ ರ್‌್ಯಾಕ್‌ನಲ್ಲಿಡಬೇಕು ಎಂದು ಪೂರ್ವನಿಯೋಜಿತವಾಗಿ ಯಂತ್ರಕ್ಕೆ ದತ್ತಾಂಶ ಅಳವಡಿ­ಸ­ಲಾಗಿರುತ್ತದೆ. ದಿನವೊಂದಕ್ಕೆ 800 ಪುಸ್ತಕಗಳನ್ನು ಹೊರುವ ಬ್ಯಾಟರಿ ಸಾಮರ್ಥ್ಯವನ್ನು ಇದು ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT