ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋರ್ಚುಗೀಸ್‌ ಚಿತ್ರಕ್ಕೆ ಸ್ವರ್ಣ ಮಯೂರ

ಗೋವಾ ಚಿತ್ರೋತ್ಸವಕ್ಕೆ ವರ್ಣರಂಜಿತ ತೆರೆ
Last Updated 30 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಪಣಜಿ (ಐಎಎನ್‌ಎಸ್‌): ಗೋವಾದಲ್ಲಿ ನಡೆಯುತ್ತಿರುವ 44ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್ಎಫ್‌ಐ)ಕ್ಕೆ  ಶನಿವಾರ ವರ್ಣರಂಜಿತ ತೆರೆ ಬಿದ್ದಿತು.

ಬೆಟಿ ರೇಸ್‌ ಮತ್ತು ಲ್ಯೂಗಿ ಅಕ್ವಿಸ್ಟೊ ನಿರ್ದೇಶನದ ಪೋರ್ಚುಗೀಸ್‌ ಸಾಕ್ಷ್ಯಚಿತ್ರ ‘ಬೀಟ್ರಿಜಸ್‌ ವಾರ್‌’ ಪ್ರತಿಷ್ಠಿತ  ‘ಸ್ವರ್ಣ ಮಯೂರ’ ಫಲಕ ಮತ್ತು 40 ಲಕ್ಷ ರೂಪಾಯಿ ನಗದು ಪುರಸ್ಕಾರಕ್ಕೆ ಪಾತ್ರವಾಯಿತು.

ಆಸ್ಟ್ರೇಲಿಯಾ ಮತ್ತು ಪೂರ್ವ ತಿಮೋರ್‌ ಸಹಯೋಗದಲ್ಲಿ ಈ ಸಾಕ್ಷ್ಯ ಚಿತ್ರ ನಿರ್ಮಾಣಗೊಂಡಿದೆ. ಅಂತಿಮ ಸುತ್ತಿನಲ್ಲಿ  ತೀರ್ಪುಗಾರರು ಈ ಚಿತ್ರವನ್ನು ಅವಿರೋಧವಾಗಿ ಪ್ರಶಸ್ತಿಗೆ ಆಯ್ಕೆ ಮಾಡಿದರು.

ಕಮಲೇಶ್ವರ್‌ ಮುಖರ್ಜಿ ನಿರ್ದೇಶನದ ಬಂಗಾಳಿ ಚಿತ್ರ ‘ಮೇಘೆ ಢಾಕಾ ತಾರಾ’ ರಜತ ಮಯೂರ ಮತ್ತು 15 ಲಕ್ಷ ರೂಪಾಯಿ ನಗದು ತನ್ನದಾಗಿಸಿ ಕೊಂಡಿತು.

ಬಂಗಾಳಿ ಚಿತ್ರ ‘ಅಪುರ್‌ ಪಾಂಚಾಲಿ’ ನಿರ್ದೇಶಕ ಕೌಶಿಕ್‌ ಗಂಗೂಲಿ ಅವರು  ‘ಉತ್ತಮ ನಿರ್ದೇಶಕ’ (ರಜತ ಮಯೂರ ಮತ್ತು 15 ಲಕ್ಷ ರೂಪಾಯಿ ನಗದು) ಪ್ರಶಸ್ತಿ ಪಡೆದರು.

ಇಸ್ರೇಲ್‌ ನಟ ಅಲೋನ್ ಮೋನಿ ಅಬೌಟ್‌ಬೌಲ್‌  ಅವರು ‘ಪ್ಲೇಸ್‌ ಇನ್‌ ಹೆವೆನ್‌’ ಚಿತ್ರಕ್ಕಾಗಿ  ‘ಉತ್ತಮ ನಟ’ (ರಜತ ಪದಕ ಮತ್ತು 10 ಲಕ್ಷ ರೂಪಾಯಿ ನಗದು) ಮತ್ತು ಪೋಲೆಂಡಿನ ‘ ಇನ್‌ ಹೈಡಿಂಗ್ ’ ಚಿತ್ರದ ನಟನೆಗಾಗಿ  ಮಗ್ಡಾಲೇನಾ ಬೋಕ್ಜಾ ರ್ಸಕಾ ‘ಉತ್ತಮ ನಟಿ’ (ಬೆಳ್ಳಿ ಪದಕ ಮತ್ತು 10 ಲಕ್ಷ ರೂಪಾಯಿ ನಗದು)  ಪ್ರಶಸ್ತಿ ಪಡೆದರು.

ತುರ್ಕಿ ಭಾಷೆಯ ಚಿತ್ರ ‘ದೌ ಗಿಲ್ಡ್ಸ್ ದ ಈವನ್’ ಮತ್ತು ಅದರ ನಿರ್ದೇಶಕ ಓನೂರ್ ಉನ್ಲು  ತೀರ್ಪುಗಾರರ ವಿಶೇಷ ಮೆಚ್ಚುಗೆ ಪಡೆದ ಪ್ರಶಸ್ತಿ (ರಜತ ಪದಕ ಮತ್ತು 15 ಲಕ್ಷ ರೂಪಾಯಿ) ಗಿಟ್ಟಿಸಿಕೊಂಡರು.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಮನೀಶ್‌ ತಿವಾರಿ, ನಟಿ ಆಶಾ ಪಾರೇಖ್, ಮಲೇಷ್ಯಾ ನಟಿ ಮೈಕೆಲ್‌ ಯೋ ಅವರು ಪ್ರಶಸ್ತಿ ವಿತರಿಸಿ ದರು. ಗೋವಾ ಮುಖ್ಯಮಂತ್ರಿ ಮನೋ ಹರ್‌ ಪರಿಕ್ಕರ್‌ ಮಾತನಾಡಿದರು.

ಗೋವಾದ ಖ್ಯಾತ ಪಾಪ್‌ ಗಾಯಕ ರೆಮೊ ಫರ್ನಾಂಡಿಸ್‌ ಮತ್ತು ತಂಡ ‘ಹಮ್ಮಾ ...ಹಮ್ಮಾ ...’ , ‘ಓ ಮೇರಿ ಮುನ್ನಿ, ಮುನ್ನಿ ಮುನ್ನಿ ಬೇಬಿ’ ಪಾಪ್‌ ಗೀತೆಗಳು ಮೆರುಗು ನೀಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT