ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಮಾಣಿಕತೆ ಮೆರೆದ ಭೂಮಾಲೀಕ

ನೀಲಗಿರಿ ನೆಡುತೋಪಿನಲ್ಲಿ ದೊರೆತ ಬಂಗಾರದ ನಾಣ್ಯ
Last Updated 10 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಕಾರ್ಗಲ್: ಇಲ್ಲಿಗೆ ಸಮೀಪದ ಇಡು­ವಾಣಿ ಗ್ರಾಮದ ಕೊಳಚಗಾರು ನಾರಾ­ಯಣ­ಸ್ವಾಮಿ ಎಂಬುವರ ಮಾಲೀಕ­ತ್ವದ ನೀಲಗಿರಿ ನೆಡುತೋಪಿ­ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಸಾಧು ಶಂಕರ ಎಂಬ ಮಹಿಳೆಗೆ ತಾಮ್ರದ ಕುಡಿಕೆಯಲ್ಲಿಟ್ಟಿದ್ದ 27 ಬಂಗಾರದ ನಾಣ್ಯ ಮತ್ತು 2 ಚಿನ್ನದ ವಾಲೆಗಳು ದೊರಕಿವೆ.

ಅವುಗಳನ್ನು ಭೂಮಾಲೀಕ ನಾರಾ­ಯಣ ಸ್ವಾಮಿ ಅವರು ಸರ್ಕಾರದ ವಶಕ್ಕೆ ನೀಡಿ ಪ್ರಾಮಾಣಿಕತೆ ಮೆರೆದ ಸೋಮ­ವಾರ ವರದಿಯಾಗಿದೆ. ನೀಲಗಿರಿ ನೆಡುತೋಪಿನಲ್ಲಿ ಮಣ್ಣಿ­ನಲ್ಲಿ ಹುದುಗಿದ್ದ ಚಿಕ್ಕ ಕಲ್ಲುಬಂಡೆಗೆ ಸಣ್ಣದಾಗಿ ಕೊರೆದಿದ್ದ ರಂಧ್ರದ ಮೇಲೆ ಕತ್ತಿಯಿಂದ ಒಡೆದಾಗ ಮೇಲ್ಪದರ­ದ­ಲ್ಲಿದ್ದ ಮುಚ್ಚ­ಳಾಕಾರದ ಕಲ್ಲು ತೆರೆದು­ಕೊಂಡು ಒಳ­ಗಡೆ ಪುಟ್ಟ ಕುಡಿಕೆಯಲ್ಲಿ 81 ಗ್ರಾಂ ತೂಕದ ಅಂದಾಜು ರೂ 2.5 ಲಕ್ಷ ಬೆಲೆ ಬಾಳುವ ಬಂಗಾರದ ನಾಣ್ಯ, ವಾಲೆಗಳು ಕಂಡು ಬಂದಿದ್ದವು.

ವಿಷಯ ತಿಳಿದ ಕೂಡಲೇ, ಭೂ ಮಾಲೀಕ ನಾರಾಯಣಸ್ವಾಮಿ ಅವರು, ‘ಬಂಗಾರ ನನಗೆ ಬೇಡ, ಇದು ಸರ್ಕಾರದ ಸ್ವತ್ತು. ಇದನ್ನು ವಾಪಸು ಸರ್ಕಾರದ ವಶಕ್ಕೆ ನೀಡೋಣ’ ಎಂದು ಕೆಲಸಗಾರರ ಮನವೊಲಿಸಿ ಅಪರೂಪ­ವಾಗಿ ದೊರೆತ ಈ ನಿಧಿಯನ್ನು ಪೊಲೀಸರ ಮೂಲಕ ಸರ್ಕಾರಕ್ಕೆ ಒಪ್ಪಿಸಿದ್ದಾರೆ.

ನಾರಾಯಣಸ್ವಾಮಿ ಅವರ ಕೆಲಸ­ವನ್ನು ಶರಾವತಿ ಕಣಿವೆ ಜನತೆ ಕೊಂಡಾಡಿ­ದ್ದಾರೆ. ಪ್ರೇರಣೆ ನೀಡಿದ ಎಸ್‌ಐ ರಮೇಶ್, ಎಎಸ್ಐ ಸೆಲ್ವರಾಜು, ಮುಖ್ಯ ಕಾನ್‌ಸ್ಟೆಬಲ್‌ ಮೂಕಪ್ಪ, ಶ್ರೀಪಾದ, ಗಿಲ್ಬರ್ಟ್ ಡಯಾಸ್ ಮತ್ತಿತ­ರರನ್ನು ಸಾರ್ವಜನಿಕರು ಅಭಿನಂದಿ­ಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT