ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಾಟಕೋತ್ಸವಕ್ಕೆ ಚಾಲನೆ

Last Updated 15 ಡಿಸೆಂಬರ್ 2014, 20:04 IST
ಅಕ್ಷರ ಗಾತ್ರ

ಕೆಂಗೇರಿ: ಪ್ರೇಕ್ಷಕರ ಪ್ರೋತ್ಸಾಹ ಸಿಗುತ್ತಿ­ರು­ವುದರಿಂದ ನಗರದಲ್ಲಿ ಹಲವಾರು ರಂಗತಂಡಗಳು ಕ್ರಿಯಾಶೀಲವಾಗಿದ್ದು, ಪ್ರೇಕ್ಷಕರು ತಮ್ಮ ಮಕ್ಕಳನ್ನು ರಂಗಶಿಬಿರ­ಗಳಿಗೆ ಕಳುಹಿಸಿದರೆ ಮಕ್ಕಳಲ್ಲಿ ಸಾಂಸ್ಕೃ­ತಿಕ ವ್ಯಕ್ತಿತ್ವ ಬೆಳೆಯಬಲ್ಲದು ಎಂದು ರಂಗಾಯಣದ ಮಾಜಿ ನಿರ್ದೇಶಕ ಬಿ.ವಿ ರಾಜಾರಾಂ ಅಭಿಪ್ರಾಯಪಟ್ಟರು.

ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಸೋಮವಾರ ಏಳನೇ ವರ್ಷದ ‘ನಾಟಕ ಬೆಂಗಳೂರು–14’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಂಗಭೂಮಿ ಕಲಾವಿದರು ಚಲನ­ಚಿತ್ರ ಕ್ಷೇತ್ರದಲ್ಲೂ ಹೆಸರು ಮಾಡಿದ್ದಕ್ಕೆ ದೊಡ್ಡ ಇತಿಹಾಸವೇ ಇದೆ. ಸ್ವತಃ ಗುಬ್ಬಿ ವೀರಣ್ಣನವರು ಇಂತಹ ಸಾಧನೆ ಮೆರೆ­ದಿದ್ದಾರೆ. ನಮ್ಮ ರಂಗಭೂಮಿ ಕಲಾವಿ­ದರು ಕಿರುತೆರೆಗೆ ಹೋಗುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.

‘ಇತ್ತೀಚೆಗೆ ರಂಗತಂಡಗಳ ಪ್ರಯತ್ನ­ಗಳು ಆಶಾದಾಯಕವಾಗಿವೆ. ರಂಗ­ಭೂಮಿಯಲ್ಲಿ ನಿಷ್ಠೆಯಿಂದ ದುಡಿದ­ವ­ರನ್ನು ಜನ ಗುರುತಿಸಿ ಗೌರವಿಸುತ್ತಾರೆ. ಇದಕ್ಕೆ ನಾನೇ ಸಾಕ್ಷಿ’ ಎಂದು ಅಧ್ಯಕ್ಷತೆ ವಹಿಸಿದ್ದ ನಾಟಕ ಅಕಾಡೆಮಿ ಅಧ್ಯಕ್ಷ ಶೇಖ್‌ ಮಾಸ್ತರ ಹೇಳಿದರು.
ಕಲಾ ನಿರ್ದೇಶಕ ಶಶಿಧರ್ ಅಡಪ, ರಂಗ­ಕರ್ಮಿ ಕೆ.ವಿ. ನಾಗರಾಜ­ಮೂರ್ತಿ, ತೋ. ನಂಜುಂಡಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT