ವಾಷಿಂಗ್ಟನ್ (ಐಎಎನ್ಎಸ್): ಭಾರತೀಯ ಮೂಲ ವೈದ್ಯ ಡಾ.ವಿವೇಕ್ ಹಳ್ಳೆಗೆರೆ ಮೂರ್ತಿ ಅವರನ್ನು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ಮುಂದಿನ ಪ್ರಧಾನ ವೈದ್ಯಾಧಿಕಾರಿ ಹುದ್ದೆಗೆ ನಾಮನಿರ್ದೇಶನ ಮಾಡಿದ್ದಾರೆ.

ಸದ್ಯ ಬ್ರಿಗ್ಹ್ಯಾಂನಲ್ಲಿ ಆಸ್ಪತ್ರೆಯ ಸಹ ಸಂಸ್ಥಾಪಕ ವೈದ್ಯರಾಗಿರುವ ಮೂರ್ತಿ ಅವರು ಅಮೆರಿಕ ಅಧ್ಯಕ್ಷರ ವೈದ್ಯರಲ್ಲಿ ಒಬ್ಬರಾಗಿದ್ದಾರೆ.

ಒಂದೊಮ್ಮೆ ಒಬಾಮಾ ಅವರ ನಿರ್ಧಾರವನ್ನು ಸೆನೆಟ್ ಬೆಂಬಲಿಸಿದರೆ ಸಾರ್ವಜನಿಕ ಆರೋಗ್ಯ ವಿಷಯಗಳ ಕುರಿತಾಗಿ ಗಮನಹರಿಸುವ ಪ್ರಧಾನ ವೈದ್ಯಾಧಿಕಾರಿ ಹುದ್ದೆಯನ್ನು ವಿವೇಕ್ ಅಲಂಕರಿಸಲಿದ್ದಾರೆ. 2009ರಲ್ಲಿ ಒಬಾಮಾ ಅವರಿಂದ ಪ್ರಧಾನ ವೈದ್ಯಾಧಿಕಾರಿಯಾಗಿ ನೇಮಕಗೊಂಡಿದ್ದ ರೆಜಿನಾ ಬೆಂಜಮಿನ್ ಅವರು ಕಳೆದ ಬೆಸಿಗೆಯಲ್ಲಿ ಸ್ಥಾನ ತೆರವುಗೊಳಿಸಿದ್ದರು.

ಮೂರ್ತಿ ಅವರು 2011ರಲ್ಲಿ ರೋಗ ಸಾರ್ವಜನಿಕ ಆರೋಗ್ಯ ಉತ್ತೇಜಿಸುವ ಅಧ್ಯಕ್ಷರ ಸಲಹಾ ಸಮಿತಿಗೆ ನೇಮಕಗೊಂಡಿದ್ದಾರೆ. ಕೈಗೆಟುಕುವ ಆರೋಗ್ಯ ಸೇವೆಯ ಕಾಯ್ದೆ ಮತ್ತು ಆರೋಗ್ಯ ಸುಧಾರಣೆ ಕಾನೂನಿನ ಭಾಗವಾಗಿ ಸಲಹಾ ಸಮಿತಿಯನ್ನು ರಚಿಸಲಾಗುತ್ತದೆ.

ಮೂರ್ತಿ ಅವರ ಗುಂಪಿನ ವೈದ್ಯರು ಅಮೆರಿಕದವರಾಗಿದ್ದು, ಈ ಗುಂಪನ್ನು ಒಬಾಮಾ ವೈದ್ಯರೆಂದೇ ಕರೆಯಲಾಗುತ್ತದೆ. ಇದು ಚುನಾವಣೆ ವೇಳೆ ಒಬಾಮಾ ಪರ ಪ್ರಚಾರ ನಡೆಸುತ್ತದೆ.

ಭಾರತ ಮತ್ತು ಅಮೆರಿಕ ಸೇರಿದಂತೆ ವಿಶ್ವದಾದ್ಯಂತ ಎಚ್ಐವಿ/ಏಡ್ಸ್ ಕುರಿತಾದ ಶಿಕ್ಷಣ ನೀಡುತ್ತಿರುವ `ವಿಜನ್ಸ್' ಎಂಬ ಸೇವಾ ಸಂಘಟನೆಯನ್ನು 1995ರಲ್ಲಿ ಹುಟ್ಟುಹಾಕುವಲ್ಲಿ ಶ್ರಮಿಸಿದ ಮೂರ್ತಿ ಅವರು 2000ರ ವರೆಗೆ ಅಧ್ಯಕ್ಷರಾಗಿ ಮತ್ತು 2000-2003ರ ವರೆಗೆ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಹಾರ್ವಡ್ ವಿಶ್ವವಿದ್ಯಾಲಯದಿಂದ ಬಿಎ ಪದವಿ, ಯಾಲೆಯ ಮ್ಯಾನೇಜ್ಮೆಂಟ್ ಸ್ಕೂಲ್ನಿಂದ ಎಂಬಿಎ ಪದವಿ ಹಾಗೂ ಯಾಯೆಯ ಸ್ಕೂಲ್ ಆಫ್ ಮೇಡಿಸಿನ್ನಿಂದ ಎಂಡಿ ಪದವಿ ಪಡೆದಿದ್ದಾರೆ.

ಮೂರ್ತಿ ಸೇರಿದಂತೆ ಮೂರು ಪ್ರಮುಖ ಹುದ್ದೆಗಳ ನೇಮಕಾತಿ ಕುರಿತಂತೆ ಘೋಷಿಸಿರುವ ಒಬಾಬಾ ಅವರು `ಅಮೆರಿಕ ನಾಗರೀಕರಿಗಾಗಿ ಇವರು ಗಮನಾರ್ಹ ಸೇವೆ ಸಲ್ಲಿಸಿರುವರೆಂಬ ವಿಶ್ವಾಸವನ್ನು ನಾನು ಹೊಂದಿದ್ದು, ಮುಂಬರುವ ದಿನಗಳಲ್ಲಿ ಅವರೊಂದಿಗೆ ಕೆಲಸ ನಿರ್ವಹಿಸಲು ನಾನು ಎದುರು ನೋಡುತ್ತೆನೆ' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.