ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ಮರಳಲು ಕಾಯುತ್ತಿರುವ 50 ಶುಶ್ರೂಷಕಿಯರು

ಯೆಮನ್ ಹಿಂಸಾಚಾರ ಪೀಡಿತ ಪ್ರದೇಶ
Last Updated 21 ಸೆಪ್ಟೆಂಬರ್ 2015, 10:34 IST
ಅಕ್ಷರ ಗಾತ್ರ

ತಿರುವನಂತಪುರಂ(ಐಎಎನ್ಎಸ್): ಯೆಮನ್ ಹಿಂಸಾಚಾರ ಪೀಡಿತ ಪ್ರದೇಶದಿಂದ ಭಾರತಕ್ಕೆ ಹಿಂದಿರುಗಲು ನಿರ್ಧರಿಸಿರುವ ಕೇರಳದ 50ಕ್ಕೂ ಹೆಚ್ಚು ಶುಶ್ರೂಷಕಿಯರು ಸೌದಿ ಅರೇಬಿಯ ಮತ್ತು ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಸೇವಾನುಭವ ಮತ್ತು ವೃತ್ತಿ ಪ್ರಮಾಣಪತ್ರ ಸಮಸ್ಯೆಯನ್ನು ನಿವಾರಿಸುವಂತೆ ಒತ್ತಾಯಿಸಿದ್ದಾರೆ.

ಸೌದಿ ಅರೇಬಿಯಾದ ಹಿಂಸಾಚಾರ ಪೀಡಿತ ಸ್ಮಾತಾ ಪ್ರಾಂತ್ಯದ ಗಡಿ ಪ್ರದೇಶದಿಂದ ಭಾನುವಾರ ರಾತ್ರಿ ಶುಶ್ರೂಷಕಿಯರನ್ನು ಸ್ಥಳಾಂತರಿಸಲಾಗಿದೆ.

‘ಇಲ್ಲಿ ನಿರಂತರ ಶೇಲ್ ದಾಳಿ ನಡೆಯುತ್ತಿದ್ದು, ಸೌದಿ ಅರೇಬಿಯಾದ ಆರೋಗ್ಯ ಸಚಿವಾಲಯದ 150 ಹಾಸಿಗೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಮೂರು ದಿನಗಳಿಂದ ಭಯದಲ್ಲಿ ಕಾಲ ನೂಕಿದ್ದೇವೆ. 50 ಶುಶ್ರೂಷಕಿಯರು ಭಾರತಕ್ಕೆ ಹಿಂದಿರುಗಲು ನಿರ್ಧರಿಸಿದ್ದೇವೆ. ಇದು ನಮ್ಮ ಕೆಲಸದ ಕೊನೆಯ ದಿನ’ ಎಂದು ಶುಶ್ರೂಷಕಿಯೊಬ್ಬರು ದೂರವಾಣಿಯಲ್ಲಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT