ಹೈದರಾಬಾದ್ (ಐಎಎನ್ಎಸ್): ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಭಾರೀ ನಿರೀಕ್ಷೆಯ ಮಂಗಳ ಯಾನ(ಮಿಷನ್ ಮಾರ್ಸ್)ಯೋಜನೆಗೆ ಇಸ್ರೋ ಸಜ್ಜುಗೊಂಡಿದ್ದು ಮಾನವರಹಿತ ಕೃತಕ ಉಪಗ್ರಹವನ್ನು ಇದೇ ಮಂಗಳವಾರ ಮಂಗಳನ ಆಂಗಳಕ್ಕೆ ಹಾರಿ ಬಿಡಲಾಗುವುದು ಎಂದು ಇಸ್ರೋ ಪ್ರಕಟಣೆಯಲ್ಲಿ ತಿಳಿಸಿದೆ.

ಇಡೀ ವಿಶ್ವವೇ ಕೂತುಹಲದಿಂದ ಈ ಘಳಿಗೆಗೆ ಕಾಯುತ್ತಿದೆ. ನವೆಂಬರ್ 5 ಮಂಗಳವಾರ ಸುಮಾರು 2.30ಕ್ಕೆ ಪಿಎಸ್ಎಲ್ವಿ ರಾಕೆಟ್ ಮಂಗಳನ ಅಂಗಳಕ್ಕೆ ಸ್ವದೇಶಿ ನಿರ್ಮಾಣದ ಉಪಗ್ರಹವನ್ನು ಕೊಂಡೊಯ್ಯಲಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾ ಉಡ್ಡಾಯನ ಕೇಂದ್ರದಿಂದ ಉಡಾವಣೆ ಮಾಡಲಾಗುವುದು ಎಂದು ಇಸ್ರೋ ಪ್ರಕಟಣೆಯಲ್ಲಿ ತಿಳಿಸಿದೆ.

ಸುಮಾರು 450 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯನ್ನು ಭಾರತೀಯ ವಿಜ್ಞಾನಿಗಳು ಮತ್ತು ಎಂಜಿನಿಯರ್ಗಳು ಸಿದ್ಧಪಡಿಸಿದ್ದಾರೆ. ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಮಂಗಳನ ಅಧ್ಯಯನಕ್ಕೆ ಮಾನವ ಸಹಿತ ನೌಕೆಯನ್ನು ಕಳುಹಿಸುವ ಯೋಜನೆ ಇದೆ ಎಂದು ಇಸ್ರೋ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.