ಬೆಂಗಳೂರು: ಮಹಿಳಾ ಚಳವಳಿ ಸೋತಿದೆ ಎಂದು ಪ್ರೊ.ಹಾಲತಿ ಸೋಮಶೇಖರ್ ಅವರು ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಸಂಕ್ರಮಣ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ಲೇಖಕಿಯರಿಂದ ತೀವ್ರ ವಿರೋಧ ವ್ಯಕ್ತವಾಯಿತು.

‘ಮಹಿಳಾ ಚಳವಳಿ–ಇಂದು ಮತ್ತು ನಾಳೆ’ ಗೋಷ್ಠಿ ಈ ಘಟನೆಗೆ ಸಾಕ್ಷಿಯಾಯಿತು. ಸೋಮಶೇಖರ್ ಅವರ ಭಾಷಣ ಮುಗಿಯುತ್ತಿದ್ದಂತೆ ಸಭಿಕರೊಬ್ಬರು ಎದ್ದುನಿಂತು, ‘ನೀವು ಪುರುಷ ಪ್ರಧಾನ ಸಮಾಜದ ವಕ್ತಾರರಂತೆ ಮಾತನಾಡಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೆ ದನಿಗೂಡಿಸಿದ ಲೇಖಕಿ ಎಚ್.ಎಸ್. ಅನುಪಮಾ, ‘ಚಳವಳಿಯ ಸಫಲತೆ, ವಿಫಲತೆಯನ್ನು ಯಾವುದರಿಂದ ಅಳೆಯುತ್ತಿದ್ದೀರಿ. ಮಹಿಳೆಯರು ನಗರದಲ್ಲಿ ಕುಳಿತು ತಾತ್ವಿಕತೆಯನ್ನು ಕಟ್ಟುತ್ತಿದ್ದಾರೆ ಎನ್ನುವುದು ಇಡೀ ಮಹಿಳಾ ಸಮಾಜಕ್ಕೆ ಮಾಡಿರುವ ಅವಮಾನ. ಈ ಗೋಷ್ಠಿಯೇ ಮಹಿಳಾ ಚಳವಳಿಯನ್ನು ಅಪಹಾಸ್ಯ ಮಾಡಲು ಏರ್ಪಡಿಸಿರುವಂತೆ ಇಟ್ಟಿದ್ದಾರೇನೋ ಎಂದು ದುಃಖವಾಗುತ್ತಿದೆ’ ಎಂದರು.

‘ಮಹಿಳೆಯರು ಸುಲಭವಾಗಿ ತಮ್ಮ ಹಕ್ಕುಗಳನ್ನು ಪಡೆದುಕೊಂಡಿಲ್ಲ. ಹೋರಾಟದ ಮೂಲಕ ಪಡೆದುಕೊಂಡಿದ್ದಾರೆ. ಹೀಗಾಗಿ ಮಹಿಳಾ ಚಳವಳಿಯನ್ನು ಅನುಮಾನಿಸುವುದು ಬೇಡ’ ಎಂದು ಹೇಳಿದರು.

‘ಮಹಿಳೆಯ ಸಮಸ್ಯೆಗಳು ಏಕರೂಪವಾಗಿಲ್ಲ. ಬೇರೆ ಬೇರೆ ಪ್ರಾಂತ್ಯಗಳಲ್ಲಿರುವ ಮಹಿಳೆಯರ ಸಮಸ್ಯೆಗಳು ವಿಭಿನ್ನವಾಗಿವೆ. ನೆರೆ, ಬರ, ವಲಸೆ, ಬಡತನ ನಿರುದ್ಯೋಗದಂತಹ ಸಮಸ್ಯೆಗಳು ಮಹಿಳೆಯರನ್ನು ಬಾಧಿಸುತ್ತಿವೆ. ಹೀಗಾಗಿ ಈ ಸಮಸ್ಯೆಗಳು ಸಹ ಮಹಿಳಾ ಚಳವಳಿಯ ಭಾಗವಾಗಿವೆ’ ಎಂದರು.

‘ಈ ಎಲ್ಲಾ ಸಮಸ್ಯೆಗಳನ್ನು ಒಂದು ನಾಯಕತ್ವ, ಸಂಘಟನೆಯ ಮುಖಾಂತರ ಎದುರಿಸಲು ಸಾಧ್ಯವಿಲ್ಲ. ಹೀಗಾಗಿ ಬೇರೆ ಬೇರೆ ಮಹಿಳಾ ಚಳವಳಿ, ಹೋರಾಟಗಳು ನಡೆಯುತ್ತಿವೆ. ಈ ರೀತಿ ಬಿಡಿ ಬಿಡಿಯಾಗಿ ಚಳವಳಿಯನ್ನು ನೋಡುತ್ತಿರುವುದರಿಂದ, ಮಹಿಳಾ ಚಳವಳಿ ಎಲ್ಲಿದೆ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ’ ಎಂದು ಹೇಳಿದರು.

ಲೇಖಕಿ ವಸುಂಧರಾ ಭೂಪತಿ, ‘ಹಾಲತಿ ಅವರಿಂದ ಇಂತಹ ಮಾತುಗಳನ್ನು ನಿರೀಕ್ಷಿಸಿರಲಿಲ್ಲ. ಇದನ್ನು ನಾನು ಖಂಡಿಸುತ್ತೇನೆ. ಈ ತರಹ ಮಹಿಳಾ ಗೋಷ್ಠಿಗಳ ಅವಶ್ಯಕತೆಯೇ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೇಮಾ ಪಟ್ಟಣಶೆಟ್ಟಿ, ‘ಮಹಿಳಾ ಚಳವಳಿಗೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಬೇಸರ ಇಲ್ಲ. ಆದರೆ, ಅವುಗಳು ನಡೆದೇ ಇಲ್ಲ ಎಂದು ಹೇಳುವುದು ಸರಿಯಲ್ಲ. ನಾವು ಪ್ರತಿ ವರ್ಷ ಮಹಿಳಾ ದಿನಾಚರಣೆ ಆಚರಿಸುತ್ತೇವೆ. ಅದಕ್ಕೆ ಮೇಣದ ಬತ್ತಿ ಬೆಳಗಿಸಿ ಪ್ರತಿಭಟನೆ ನಡೆಸುವುದರಿಂದ ಪ್ರಯೋಜನ ಇಲ್ಲ ಎಂದು ಚುಚ್ಚುವುದು ಬೇಡ’ ಎಂದರು.

ಲೇಖಕಿ ಡಾ.ಆರ್.ಸುನಂದಮ್ಮ ಮಾತನಾಡಿ, ‘ಇಂದು ಮಹಿಳಾ ಪರ ಕಾನೂನುಗಳು ಬಂದಿರುವುದಕ್ಕೆ ಮಹಿಳೆಯರ ಹೋರಾಟವೇ ಕಾರಣ’ ಎಂದು ಹೇಳಿದರು.

‘ಮಹಿಳೆಯರನ್ನು ರಕ್ಷಣೆ ಮಾಡಬೇಕಾದ ಹಲವು ಕಾನೂನುಗಳು ಇಂದು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಪಿತೃ ಪ್ರಧಾನ ವ್ಯವಸ್ಥೆಯಲ್ಲಿ ಇಂದಿಗೂ ಮಹಿಳೆ ನಲುಗುತ್ತಿದ್ದಾಳೆ’ ಎಂದು ಅಭಿಪ್ರಾಯಪಟ್ಟರು.

‘ಅವಸರದ ತೀರ್ಮಾನ ಬೇಡ’
ವಾಗ್ವಾದ ತಾರಕಕ್ಕೇರಿದಾಗ ‘ನನಗೆ ಮಾತನಾಡಲು ಎರಡು ನಿಮಿಷ ಅವಕಾಶ ಕೊಡುತ್ತೀರಾ’ ಎಂದು ಮಧ್ಯಪ್ರವೇಶಿಸಿದ ಚಂಪಾ, ‘ನಾವು ಕೇವಲ ಸಮಾನ ಮನಸ್ಕರ ಜತೆಗೆ ಮಾತನಾಡುತ್ತೇವೆಯೇ ಹೊರತು, ಎಲ್ಲಿಗೆ ಹೋಗಿ ಯಾರಿಗೆ ಸಂದೇಶ ಕೊಡ ಬೇಕೊ ಅದನ್ನು ಮಾಡುತ್ತಿಲ್ಲ ಎಂಬುದು ವಾಸ್ತವ’ ಎಂದರು.

‘ವಿಭಿನ್ನ ದೃಷ್ಟಿಕೋನದವರನ್ನು ಒಳಗೊಂಡು ಅವರನ್ನು ಎದುರಿಸಲು ಮಾನಸಿಕವಾಗಿ, ವೈಚಾರಿಕವಾಗಿ ತಯಾರಿ ನಡೆಸಬೇಕು. ಅದನ್ನು ಬಿಟ್ಟು ಪ್ರಜಾಸತ್ತಾತ್ಮಕ ನೆಲೆಗಟ್ಟಿನಲ್ಲಿ ನಡೆದ ಗೋಷ್ಠಿಗೆ ಮಹಿಳಾ ಚಳವಳಿಗೆ ಮಾಡಿದ ಅಪಮಾನ ಎಂಬ ಅವಸರದ ತೀರ್ಮಾನಕ್ಕೆ ಬರಬಾರದು’ ಎಂದು ಚರ್ಚೆಗೆ ತೆರೆ ಎಳೆದರು.

ಹಾಲತಿ ಸೋಮಶೇಖರ್ ಹೇಳಿದ್ದೇನು?
‘ಮಹಿಳಾವಾದ ಬೆಳೆಯಿತು, ಚಳವಳಿ ಸೋತಿತು’, ‘ಹೋರಾಟವನ್ನು ಕಟ್ಟುವುದು ಬಹಳ ಕಷ್ಟದ ಕೆಲಸ. ಅದನ್ನು ಕಟ್ಟಲು ಬೀದಿಗಿಳಿಯಬೇಕು. ವ್ಯವಸ್ಥೆಯನ್ನು ಎದುರು ಹಾಕಿಕೊಳ್ಳಬೇಕು. ಇದಕ್ಕೆ ಯಾವ ಮಹಿಳಾ ವಾದಿಗಳು ತಯಾರಿರಲಿಲ್ಲ. ಇದಕ್ಕೆ ಪುರುಷರೂ ಬೆಂಬಲವಾಗಿ ನಿಲ್ಲಲಿಲ್ಲ. ಹೀಗಾಗಿ ಮಹಿಳಾವಾದ ಬೆಳೆಯಿತು. ಮಹಿಳಾ ಚಳವಳಿ ಸೋತಿತು’ ಎಂದು ಪ್ರಾಧ್ಯಾಪಕ ಡಾ.ಹಾಲತಿ ಸೋಮಶೇಖರ್ ಹೇಳಿದರು.

‘ಮಹಿಳಾ ಚಳವಳಿ ಬಹಳ ಗಟ್ಟಿಯಾಗಿದೆ ಎಂದಿದ್ದರೆ, ಇಂದು ಮಹಿಳೆಯ ಮೇಲೆ ದೌರ್ಜನ್ಯ ನಡೆಯಲು ಅದು ಬಿಡುತ್ತಿರಲಿಲ್ಲ. ಎಲ್ಲರೂ ಇದರ ವಿರುದ್ಧ ಧ್ವನಿ ಎತ್ತದೆ ಸುಮ್ಮನೆ ನೋಡುತ್ತಾ ಮುಂದೆ ಸಾಗುತ್ತಿರುವುದು ದುರಂತ’ ಎಂದು ಹೇಳಿದರು.

‘ಒಂದು ಕೇಂದ್ರ ವಿಷಯ ಇಟ್ಟುಕೊಂಡು, ಇಡೀ ಸಮುದಾಯವನ್ನು ಒಳಗೊಂಡು ನಡೆಯುವುದು ಚಳವಳಿ. ಆ ರೀತಿ ರೈತ ಮತ್ತು ದಲಿತ ಚಳವಳಿಗಳು ನಡೆದಿವೆ. ಆದರೆ, ಈವರೆಗೂ ಗಟ್ಟಿಯಾದ ಮಹಿಳಾ ಚಳವಳಿ ರೂಪುಗೊಳ್ಳಲು ಸೋತಿದೆ’ ಎಂದು ಅಭಿಪ್ರಾಯಪಟ್ಟರು.

‘ಮಹಿಳಾ ಚಳವಳಿ ಆಕಾರ ಪಡೆದದ್ದು ಮೇಲ್ವರ್ಗದ ವಿದ್ಯಾವಂತ, ಸುಸ್ಥಿತಿಯಲ್ಲಿರುವ ಸ್ತ್ರೀ ಮತ್ತು ಪುರುಷರಿಂದ. ಇವರ ಕೇಂದ್ರ ಸ್ಥಾನ ನಗರವಾಗಿತ್ತು. ನಗರಗಳಲ್ಲಿ ಇವರು ಮಹಿಳಾವಾದದ ತಾತ್ವಿಕ ಚರ್ಚೆ ಹುಟ್ಟುಹಾಕಿದರು. ಇದನ್ನು ಮಾಡಿದವರು ಮಹಿಳಾವಾದಿಗಳೇ ಹೊರತು ಮಹಿಳಾ ಚಳವಳಿಗಾರರಲ್ಲ. ಇದರಿಂದಾಗಿ ಮಹಿಳಾ ಚಳವಳಿ ಶಿಥಿಲವಾಯಿತು’ ಎಂದರು.

‘ದೇವೇಗೌಡರು ಪ್ರಧಾನಿಯಾಗಿದ್ದಾಗ ಮಹಿಳಾ ಮೀಸಲಾತಿ ಮಸೂದೆ ಸಂಸತ್ತಿನಲ್ಲಿ ಮಂಡನೆಯಾಗಿ ಇಂದಿಗೆ 20 ವರ್ಷಗಳು ಕಳೆದಿವೆ. ಆದರೆ, ಇನ್ನೂ ಮಸೂದೆ ಜಾರಿಯಾಗಿಲ್ಲ. ಎಲ್ಲ ಮಹಿಳೆಯರು ಒಂದು ದಿನ ಒಕ್ಕೊರಲಿನಿಂದ ಒತ್ತಾಯಿಸಿದ್ದರೆ ಮಸೂದೆ ಜಾರಿಯಾಗಿರುತ್ತಿತ್ತು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.