ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃತರು ಫೇಸ್‌ಬುಕ್‌ನಲ್ಲಿ ಜೀವಂತ!

Last Updated 23 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ನ್ಯೂಯಾರ್ಕ್‌ (ಐಎಎನ್‌ಎಸ್‌): ಇಹ­ಲೋಕ ತ್ಯಜಿಸಿದವರು ಇನ್ನು ಮುಂದೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌­ನಲ್ಲಿ ಜೀವಂತವಾಗಿರ­ಲಿ­ದ್ದಾರೆ.

ಮೃತಪಟ್ಟವರ ಖಾತೆಗಳನ್ನು ಅವರು ಜೀವಂತವಾಗಿ­ರು­ವಾಗ ಇದ್ದ ರೀತಿಯಲ್ಲಿ ಉಳಿಸಿಕೊಳ್ಳಲು ಫೇಸ್‌ಬುಕ್‌ ನಿರ್ಧ­ರಿ­ಸಿದೆ. ಇದಕ್ಕೂ ಮುನ್ನ, ನಿಧನ­ಹೊಂದಿ­ದ­ವರ ಫೇಸ್‌­ಬುಕ್‌ ಖಾತೆಯ ಪುಟವನ್ನು ಅವರ ಸ್ನೇಹಿತರು ಮಾತ್ರ ನೋಡ­­ಬಹುದಿತ್ತು.

ಬಳಕೆದಾರರು ತಮ್ಮ ಖಾತೆಗಳಲ್ಲಿ ಜೀವನದ ವೈಯಕ್ತಿಕ ಮಾಹಿತಿಗಳನ್ನು ದಾಖಲಿಸುವ ವ್ಯವಸ್ಥೆಯ ಕುರಿತಾಗಿ ಇರುವ ಕಂಪೆನಿಯ ನೀತಿಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರ­ಲಾ­ಗು­ವುದು ಎಂದು ಫೇಸ್‌ಬುಕ್‌ ಹೇಳಿದೆ.
‘ಕುಟುಂಬದ ಸದಸ್ಯರನ್ನೋ ಅಥವಾ ಗೆಳೆಯರನ್ನು ಕಳೆದು­ಕೊಂಡವರು ನಮ್ಮನ್ನು ಸಂಪರ್ಕಿಸಿ, ಮೃತಪಟ್ಟವರ ಖಾತೆ­­ಗಳನ್ನು ‘ಸ್ಮರಣಾರ್ಥ’ ಸ್ಥಿತಿಯಲ್ಲಿ  ಮಾಡುವಂತೆ ಮನವಿ ಮಾಡು­ತ್ತಿದ್ದರು’ ಎಂದು ಫೇಸ್‌ಬುಕ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದುವರೆಗೆ ಯಾವುದೇ ವ್ಯಕ್ತಿಯ ಖಾತೆಯನ್ನು ‘ಸ್ಮರಣಾರ್ಥ’ ಸ್ಥಿತಿಯಲ್ಲಿ ಇಟ್ಟರೆ ಕೇವಲ ಅವರ ಗೆಳೆಯರಿಗೆ ಮಾತ್ರ ಆ ಖಾತೆ ಕಾಣುತ್ತಿತ್ತು.

ಇದರಿಂದಾಗಿ ಫೇಸ್‌ಬುಕ್‌ನ ಇತರ ಬಳಕೆದಾರರಿಗೆ (ಮೃತ­ಪಟ್ಟ ವ್ಯಕ್ತಿಯ ಗೆಳೆಯರ ಪಟ್ಟಿಯಲ್ಲಿರುವ ವ್ಯಕ್ತಿಗಳನ್ನು ಹೊರತುಪಡಿಸಿ) ನಿಧನ ಹೊಂದಿದ ವ್ಯಕ್ತಿಯ ಖಾತೆ, ಅದರ­ಲ್ಲಿನ ಮಾಹಿತಿ ನೋಡಲು ಸಾಧ್ಯವಿ­ರಲಿಲ್ಲ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT