ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ಮೂಲದ ವನ್ಯಾ ವಿಜೇತೆ

ಅಮೆರಿಕದ ಪ್ರತಿಷ್ಠಿತ ಸ್ಪೆಲ್ಲಿಂಗ್‌ ಬೀ ಸ್ಪರ್ಧೆ
Last Updated 29 ಮೇ 2015, 19:49 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ವಾಷಿಂಗ್ಟನ್‌ನಲ್ಲಿ ನಡೆದ ವಿಶ್ವದ ಪ್ರತಿಷ್ಠಿತ ‘ಸ್ಪೆಲ್ಲಿಂಗ್‌ ಬೀ’  ಅಂತಿಮ ಸ್ಪರ್ಧೆಯಲ್ಲಿ ಮೈಸೂರು ಮೂಲದ ವಿದ್ಯಾರ್ಥಿನಿ ಸೇರಿದಂತೆ ಭಾರತ ಮೂಲದ ಇಬ್ಬರು ಅಮೆರಿಕ ವಿದ್ಯಾರ್ಥಿಗಳು ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.
 
ಅಂತಿಮ ಸುತ್ತಿನಲ್ಲಿ ಸಮಾನ ಅಂಕ ಗಳಿಸಿದ 13 ವರ್ಷದ ವನ್ಯಾ ಶಿವಶಂಕರ್‌, ಹಾಗೂ 14 ವರ್ಷದ ಗೋಕುಲ್‌ ವೆಂಕಟಾಚಲಂ ಅವರನ್ನು ಸ್ಕ್ರಿಪ್ಪ್ಸ್‌ ರಾಷ್ಟ್ರೀಯ ಸ್ಪೆಲ್ಲಿಂಗ್‌ ಬೀ ಸ್ಪರ್ಧೆಯ ಜಯಶಾಲಿಗಳೆಂದು ಘೋಷಿಸಲಾಯಿತು.ಚಿನ್ನದ ಟ್ರೋಫಿಯ ಜತೆ  ಇಬ್ಬರಿಗೂ ತಲಾ 37 ಸಾವಿರ ಡಾಲರ್‌ (₨ 23.34 ಲಕ್ಷ) ನಗದು ಬಹುಮಾನ, ಪದಕ ನೀಡಿ ಸನ್ಮಾನಿಸಲಾಯಿತು. ಒಕ್ಲಾಮಾದಲ್ಲಿ ನೆಲೆಸಿರುವ ಭಾರತ ಮೂಲದ ಕೊಲ್‌ ಶಫೆರ್‌ ರೇ ಮೂರನೇ  ಸ್ಥಾನ ಪಡೆದಿದ್ದಾರೆ.

ಒಟ್ಟು 18 ಸ್ಪೆಲ್ಲಿಂಗ್‌ ಬೀ ಸ್ಪರ್ಧೆಗಳ ಪೈಕಿ 14ರಲ್ಲಿ ಭಾರತ ಮೂಲದ ವಿದ್ಯಾರ್ಥಿಗಳು ಮೇಲುಗೈ ಸಾಧಿಸುವ  ಮೂಲಕ ತಮ್ಮ ಪಾರಮ್ಯ ಮರೆದಿದ್ದಾರೆ.ವನ್ಯಾ ಶಿವಶಂಕರ್‌ ಮೂಲತಃ ಮೈಸೂರಿನವರಾಗಿದ್ದು, ಅವರ ಅಕ್ಕ ಕಾವ್ಯಾ ಅವರು 2009ರಲ್ಲಿ ನಡೆದ ಸ್ಪೆಲ್ಲಿಂಗ್‌ ಬೀ ಸ್ಪರ್ಧೆಯಲ್ಲಿ ಜಯಗಳಿಸಿ, ಬಹುಮಾನ ಪಡೆದಿದ್ದರು.

‘ನನ್ನ ಕನಸು ನಿಜವಾಗಿದೆ. ಈ ಕ್ಷಣವನ್ನು ತುಂಬಾ ದಿನದಿಂದ ಎದುರು ನೋಡುತ್ತಿದ್ದೆ’ ಎಂದು  ಕಾನ್ಸಾಸ್‌ನಲ್ಲಿ  ಎಂಟನೇ ತರಗತಿ ಓದುತ್ತಿರುವ ವನ್ಯಾ ಶಿವಶಂಕರ್‌ ಹೇಳಿದ್ದಾರೆ. ಅಕ್ಟೋಬರ್‌ನಲ್ಲಿ ವಿಧಿವಶರಾದ ತನ್ನ ಅಜ್ಜಿಗೆ ಈ ಪ್ರಶಸ್ತಿಯನ್ನು ಸಮರ್ಪಿಸುವುದಾಗಿ ಅವರು ಹೇಳಿದ್ದಾರೆ. ಮೈಸೂರಿನ ಬೋಗಾದಿ ಎರಡನೇ ಹಂತದಲ್ಲಿರುವ ಮಾತಾ ಅಮೃತಾನಂದಮಯಿ ಪೀಠದ ಬಳಿ ವನ್ಯಾ ಅಜ್ಜಿ ಲಕ್ಷ್ಮಿಲತಾ ಗೋವಿಂದಪ್ಪ ವಾಸವಾಗಿದ್ದರು. ಅವರ ತಾಯಿ ಸಂಧ್ಯಾ 1985ರಲ್ಲಿ ಮೈಸೂರಿನ ಮರಿಮಲ್ಲಪ್ಪ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದರು.

ಅಮೆರಿಕದ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಭಾರತ ಮೂಲದ ವಿದ್ಯಾರ್ಥಿಗಳು ವಿಜೇತರಾಗುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿ ಜನಾಂಗೀಯ ದ್ವೇಷದ ಸಂದೇಶ ಮತ್ತು ಅಭಿಪ್ರಾಯಗಳು ಹರಿದಾಡತೊಡಗಿವೆ. ಅನಿವಾಸಿ ಭಾರತೀಯರು ಮೇಲುಗೈ ಸಾಧಿಸುತ್ತಿರುವುದಕ್ಕೆ ಅಲ್ಲಿಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT