ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾ ರ್‌ನಲ್ಲಿ ಪ್ರಧಾನಿ ಮೋದಿ

Last Updated 11 ನವೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ/ನೆ ಪೈ ತಾವ್‌ (ಪಿಟಿಐ):  ಮೂರು ರಾಷ್ಟ್ರಗಳ ಪ್ರವಾಸ ಕೈಗೊಂಡಿ­ರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಮಧ್ಯಾಹ್ನ ಏರ್‌ ಇಂಡಿಯಾ ವಿಶೇಷ ವಿಮಾನದಲ್ಲಿ  ಮ್ಯಾನ್ಮಾರ್‌ ರಾಜಧಾನಿ ನೆ ಪೈ ತಾವ್‌ ತಲುಪಿದರು. ಮ್ಯಾನ್ಮಾರ್‌ ಆರೋಗ್ಯ ಸಚಿವ ಥಾಂಗ್‌ ಆಂಗ್‌ ಅವರು ಇಲ್ಲಿನ ಅಂತರ­ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

‘ಮ್ಯಾನ್ಮಾರ್‌ ತಲುಪಿದ್ದೇನೆ. ಆತ್ಮೀಯ ಸ್ವಾಗತ ಸಿಕ್ಕಿದೆ. ಇಂಥ ಸುಂದರ ದೇಶಕ್ಕೆ ಬಂದಿರುವುದಕ್ಕೆ ಖುಷಿಯಾಗುತ್ತಿದೆ’ ಎಂದು ಮೋದಿ ಟ್ವೀಟ್‌ ಮಾಡಿದ್ದಾರೆ. ಬುಧವಾರ ಇಲ್ಲಿ ಆರಂಭವಾಗ­ಲಿರುವ ೧೨ನೇ ಭಾರತ– ಆಸಿಯಾನ್‌ ಶೃಂಗ­ಸಭೆ­ಯಲ್ಲಿ ಮೋದಿ ಭಾಗವ­ಹಿಸುವರು.

‘ಆಗ್ನೇಯ ಏಷ್ಯಾ ದೇಶಗಳ ಸಂಘ­ಟನೆಯು  (ಆಸಿಯಾನ್‌)     ಭಾರತದ ‘‘ಪೂರ್ವ ದೇಶಗಳೊಂದಿಗೆ ಸಕ್ರಿಯ ಸಂಬಂಧ’’ (ಆಕ್ಟ್‌ ಈಸ್ಟ್‌ ಪಾಲಿಸಿ)­ನೀತಿಯ ಪ್ರಮುಖ ಭಾಗ­ವಾಗಿದೆ’ ಎಂದು ಮ್ಯಾನ್ಮಾರ್‌ಗೆ ತೆರಳುವ ಮುನ್ನ ದೆಹಲಿಯಲ್ಲಿ ಮೋದಿ ಹೇಳಿದ್ದರು.
‘ನಮ್ಮ ಸಂಬಂಧಕ್ಕೆ ಹೊಸ ಆಯಾಮ ನೀಡುವುದು ಹೇಗೆ ಎನ್ನುವ ಬಗ್ಗೆ ಆಸಿ­ಯಾನ್‌್ ಮುಖಂಡರ ಜತೆ ಸಮಾ­ಲೋಚ­ನೆಯನ್ನು ಎದುರು ನೋಡುತ್ತಿ­ದ್ದೇನೆ’ ಎಂದೂ ಅವರು ತಿಳಿಸಿದ್ದರು. 

ಬ್ರಿಸ್ಬೇನ್‌ನಲ್ಲಿ ನಡೆಯಲಿರುವ ಜಿ–೨೦ ಶೃಂಗಸಭೆಯಲ್ಲಿ ಮೋದಿ ಅವರು ಕಪ್ಪು ಹಣ ನಿಯಂತ್ರಣದಲ್ಲಿ ಅಂತರ­­ರಾಷ್ಟ್ರೀಯ ಸಹಕಾರದ ಮಹತ್ವ­ವನ್ನು ಪ್ರಮುಖವಾಗಿ ಪ್ರಸ್ತಾಪಿಸಲಿದ್ದಾರೆ. ಶೃಂಗ ಸಭೆಯ ಬಳಿಕ ಅವರು ಆಸ್ಟ್ರೇಲಿಯಾ ಪ್ರಧಾನಿ ಟೋನಿ ಅಬೊಟ್‌ ಅವರೊಂದಿಗೆ ದ್ವಿಪಕ್ಷೀಯ ಸಮಾ­ಲೋಚನೆ ನಡೆಸುವರು. ೨೮ ವರ್ಷಗಳ ನಂತರ ಆಸ್ಟ್ರೇಲಿಯಾಗೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿ ಮೋದಿ. ಈ ಮೊದಲು ೧೯೮೬ರಲ್ಲಿ ರಾಜೀವ್‌ ಗಾಂಧಿ ಇಲ್ಲಿಗೆ ಭೇಟಿ ನೀಡಿ­ದ್ದರು. ಮೆಲ್ಬರ್ನ್‌, ಸಿಡ್ನಿ ಹಾಗೂ ಕ್ಯಾನ್‌ಬೆರಾಗೆ ಕೂಡ ಮೋದಿ ಭೇಟಿ ನೀಡುವರು.

ಮೋದಿ ಅವರು, ೩೩ ವರ್ಷಗಳ ನಂತರ ಫಿಜಿಗೆ ಭೇಟಿ ನೀಡುತ್ತಿರುವ ಭಾರತದ ಮೊದಲ ಪ್ರಧಾನಿ ಕೂಡ ಹೌದು. ೧೯೮೧ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಇಲ್ಲಿಗೆ ಬಂದಿದ್ದರು. ನವೆಂಬರ್‌ ೧೯ರಂದು ಫಿಜಿಗೆ ಭೇಟಿ ನೀಡುವ ಮೋದಿ, ಅಲ್ಲಿನ ಪ್ರಧಾನಿ  ಫ್ರಾಂಕ್‌ ಬೈನಿಮರಮಾ ಅವರೊಂದಿಗೆ ಸಮಾಲೋಚನೆ ನಡೆಸುವರು.ಫಿಜಿಯ ಜನಸಂಖ್ಯೆ 849,00೦. ಈ ಪೈಕಿ ಶೇ ೩೭ರಷ್ಟು ಮಂದಿ ಭಾರತೀಯ ಮೂಲದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT