ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರವಿಶಂಕರ್ ಗುರೂಜಿ, ರಜನಿಕಾಂತ್‌ಗೆ ಪದ್ಮವಿಭೂಷಣ್

Last Updated 25 ಜನವರಿ 2016, 11:26 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಸಕ್ತ ಸಾಲಿನ ಪದ್ಮ ಪಶಸ್ತಿಗಳನ್ನು ಪ್ರಕಟಿಸಲಾಗಿದ್ದು, ರಾಜ್ಯದ ಶ್ರೀ ಶ್ರೀ ರವಿಶಂಕರ್ ಗುರೂಜಿ, ಖ್ಯಾತ ಚಿತ್ರನಟ ರಜನಿಕಾಂತ್‌, ಮಾಧ್ಯಮ ದೊರೆ ರಾಮೋಜಿ ರಾವ್‌ ಸೇರಿದಂತೆ ಹಲವರಿಗೆ ಪದ್ಮ ವಿಭೂಷಣ್‌ ಪುರಸ್ಕಾರ ಸಂದಿದೆ.

ಪ್ರಸಕ್ತ ಸಾಲಿನ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿ ಇಂತಿದೆ.

ಪದ್ಮ ವಿಭೂಷಣ್‌:
ಶ್ರೀ ಶ್ರೀ ರವಿಶಂಕರ್ ಗುರೂಜಿ, ಆಧ್ಯಾತ್ಮಿಕ ಗುರು
ರಜನಿಕಾಂತ್, ಖ್ಯಾತ ಚಿತ್ರನಟ
ರಾಮೋಜಿ ರಾವ್‌, ಈಟಿವಿ ಸಮೂಹ ಸಂಸ್ಥಾಪಕ
ಜಗಮೋಹನ್, ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ
ದಿವಂಗತ ಧೀರೂಬಾಯಿ ಅಂಬಾನಿ, ರಿಲಾಯನ್ಸ್‌ ಇಂಡಸ್ಟ್ರೀಸ್‌ ಸಂಸ್ಥಾಪಕ
ವಿ.ಕೆ.ಆತ್ರೆ, ಡಿಆರ್‌ಡಿಒ ಮಾಜಿ ಮುಖ್ಯಸ್ಥ
ಡಾ. ವಿ ಶಾಂತಾ, ಕ್ಯಾನ್ಸರ್‌ ತಜ್ಞೆ ಹಾಗೂ ಅದ್ಯಾರ್‌ ಕ್ಯಾನ್ಸರ್‌ ಸಂಸ್ಥೆಯ ಮುಖ್ಯಸ್ಥೆ
ಯಾಮಿನಿ ಕೃಷ್ಣಮೂರ್ತಿ, ಭರತನಾಟ್ಯ ಹಾಗೂ ಕುಚಿಪುಡಿ ಕಲಾವಿದೆ
ಗಿರಿಜಾ ದೇವಿ, ಪ್ರಸಿದ್ಧ ಕೊಳಲು ವಾದಕಿ
ಅವಿನಾಶ್ ದಿಕ್ಷಿತ್, ಭಾರತ ಮೂಲದ ಅಮೆರಿಕ ಅರ್ಥಶಾಸ್ತ್ರಜ್ಞ

ಪದ್ಮ ಭೂಷಣ್:
ವಿನೋದ್ ರಾಯ್, ಮಾಜಿ ಮಹಾಲೆಕ್ಕಪರಿಶೋಧಕ
ಅನುಪಮ್ ಖೇರ್‌, ಬಾಲಿವುಡ್‌ ನಟ
ಉದಿತ್ ನಾರಾಯಣ್‌, ಖ್ಯಾತ ಗಾಯಕ
ರಾಬರ್ಟ್‌ ಡಿ ಬ್ಲ್ಯಾಕ್‌ವಿಲ್, ಭಾರತದಲ್ಲಿದ್ದ ಅಮೆರಿಕದ ಮಾಜಿ ರಾಯಭಾರಿ
ಸೈನಾ ನೇಹ್ವಾಲ್, ಬ್ಯಾಡ್ಮಿಂಟನ್ ತಾರೆ
ಸಾನಿಯಾ ಮಿರ್ಜಾ, ಟೆನಿಸ್‌ ತಾರೆ
ಇಂದು ಜೈನ್‌, ಬೆನೆಟ್ಟ್, ಕೊಲ್ಮನ್‌ ಅಂಡ್‌ ಕಂಪೆನಿಯ ಮುಖ್ಯಸ್ಥೆ
ದಿವಂಗತ ಸ್ವಾಮಿ ದಯಾನಂದ ಸರಸ್ವತಿ, ಆಧ್ಯಾತ್ಮಿಕ ಗುರು
ದಿವಂಗತ ಸ್ವಾಮಿ ತೇಜೋಮಯಾನಂದ, ಆಧ್ಯಾತ್ಮಿಕ ಗುರು
ಪಿ.ಎಸ್‌. ಮಿಸ್ತ್ರೀ, ಉದ್ಯಮಿ
ಆರ್‌.ಸಿ.ಭಾರ್ಗವ್‌, ಮಾರುತಿ ಸುಜುಕಿ ಮುಖ್ಯಸ್ಥ
ಹಫೀಜ್‌ ಕಾಂಟ್ರ್ಯಾಕ್ಟರ್‌, ವಾಸ್ತುಶಿಲ್ಪಿ
ರಾಮ್‌ ವಿ.ಸುತಾರ್‌, ಶಿಲ್ಪಿ
ಹೆಯ್‌ಸ್ನಾಮ್‌ ಕನ್ಹೈಲಾಲ್‌, ಮಣಿಪುರಿ ರಂಗಭೂಮಿ ಕಲಾವಿ‌ದ
ಯರ್ಲಾಗುಡ್ಡ ಲಕ್ಷ್ಮಿಪ್ರಸಾದ್‌, ಹಿಂದಿ ಹಾಗೂ ತೆಲುಗು ಬರಹಗಾರ
ಎನ್‌.ಎಸ್‌.ರಾಮಾನುಜಾ ತಾತಾಚಾರ್ಯ, ಸಂಸ್ಕೃತ ವಿದ್ವಾಂಸ
ಬರ್ಜಿಂದರ್ ಸಿಂಗ್ ಹಮ್‌ದರ್ದ್‌, ಪಂಜಾಬಿ ಪತ್ರಕರ್ತ
ಡಿ. ನಾಗೇಶ್ವರ್ ರೆಡ್ಡಿ, ಕರಳುಬೇನೆ ತಜ್ಞ
ವಿ.ಕೆ.ರಾಮರಾವ್‌, ವಿಜ್ಞಾನಿ

ಪದ್ಮಶ್ರೀ:
ಉಜ್ವಲ್ ನಿಕ್ಕಂ, ಹಿರಿಯ ನ್ಯಾಯವಾದಿ
ಅಜಯ್ ದೇವಗನ್‌, ಬಾಲಿವುಡ್ ನಟ
ಪ್ರಿಯಾಂಕಾ ಛೋಪ್ರಾ, ಬಾಲಿವುಡ್ ನಟಿ
ದೀಪಿಕಾ ಕುಮಾರಿ, ಆರ್ಚರಿ‌
ದಿವಂಗತ ಸಯೀದ್‌ ಜಾಫ್ರಿ, ನಟ
ಅಜಯ್‌ಪಾಲ್‌ ಸಿಂಗ್‌ ಬಂಗಾ, ಮಾಸ್ಟರ್‌ ಕಾರ್ಡ್‌ ಸಿಇಒ
ಪ್ರತಿಭಾ ಪ್ರಹ್ಲಾದ್‌, ಭರತನಾಟ್ಯ ಕಲಾವಿದೆ
ಭಿಖುದಾನ್‌ ಗಧ್ವಿ, ಜಾನಪದ ಸಂಗೀತಕಾರ
ತುಳುಸಿದಾದ್‌ ಬೊರ್ಕರ್‌, ಗೋವಾದ ಸಂಗೀತಕಾರ
ಓಂಕಾರ್‌ ನಾಥ್ ಶ್ರೀವಾಸ್ತವ್, ವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT