ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೇಖಕ, ಪ್ರಕಾಶಕರಿಂದ ಕೃತಿ ಆಹ್ವಾನ

Last Updated 23 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರದ ಬಿ.ಎಚ್.ರಸ್ತೆಯ­ಲ್ಲಿ­ರುವ ಕರ್ನಾಟಕ ಸಂಘ, 2013ನೇ ಸಾಲಿನಲ್ಲಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಬಹುಮಾನ  ನೀಡಲು ಲೇಖಕರು ಹಾಗೂ ಪ್ರಕಾಶಕರಿಂದ ಕೃತಿಗಳನ್ನು ಆಹ್ವಾನಿಸಿದೆ. ಆಸಕ್ತ ಲೇಖಕರು ಹಾಗೂ ಪ್ರಕಾಶಕರು ಕೃತಿಗಳನ್ನು ಕಳಿಸಬಹುದು.

ಮರು ಮುದ್ರಣಗೊಂಡ ಕೃತಿಗಳಿಗೆ ಮತ್ತು ಹಸ್ತ ಪ್ರತಿಗಳಿಗೆ ಅವಕಾಶ ಇರುವುದಿಲ್ಲ. ಕರ್ನಾಟಕ ಸಂಘದ ಪುಸ್ತಕ ಬಹುಮಾನ ಒಂದು ಬಾರಿ ಪಡೆದವರು ಪುನಃ ಯಾವುದೇ ಪ್ರಕಾರದ ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ.
ಲೇಖಕರು, ಪ್ರಕಾಶಕರು ಮತ್ತು ಅಭಿಮಾನಿಗಳು ಬಹುಮಾನಕ್ಕೆ ಪುಸ್ತಕವನ್ನು ಕಳುಹಿಸಬಹುದು. ಕರ್ನಾಟಕ ಸಂಘದ ಸದಸ್ಯರು ಈ ಸ್ಪರ್ಧೆಗೆ ಭಾಗವಹಿಸುವಂತಿಲ್ಲ. ಪ್ರಶಸ್ತಿಗೆ ಕಳುಹಿಸಿದ ಪುಸ್ತಕಗಳನ್ನು ಹಿಂತಿರುಗಿಸಲಾಗುವುದಿಲ್ಲ.

ಕಾದಂಬರಿ ಪ್ರಕಾರಕ್ಕೆ ‘ಕುವೆಂಪು ಬಹುಮಾನ’, ಅನುವಾದಿತ ಕೃತಿಗೆ ‘ಎನ್.ವಿ.ಪರಮೇಶ್ವರ ಭಟ್ಟ’, ಮಹಿಳಾ ಸಾಹಿತ್ಯಕ್ಕೆ ‘ಎಂ.ಕೆ.ಇಂದಿರಾ’, ಮುಸ್ಲಿಂ ಬರಹಗಾರರ ಕೃತಿಗಳಿಗೆ ‘ಪಿ.ಲಂಕೇಶ್’, ಕವನ ಸಂಕಲನ ಪ್ರಕಾರಕ್ಕೆ ‘ಡಾ.ಜಿ.ಎಸ್.ಶಿವರುದ್ರಪ್ಪ’, ಅಂಕಣ ಬರಹಗಾರರಿಗೆ ‘ಡಾ.ಹಾ.ಮಾ.ನಾಯಕ’, ಸಣ್ಣ ಕಥಾ ಸಂಕಲನಕ್ಕೆ ‘ಡಾ.ಯು.ಆರ್.ಅನಂತಮೂರ್ತಿ’, ನಾಟಕ ಕೃತಿಗೆ ‘ಕೆ.ವಿ.ಸುಬ್ಬಣ್ಣ’, ಪ್ರವಾಸ ಸಾಹಿತ್ಯಕ್ಕೆ ‘ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ’ , ವಿಜ್ಞಾನ ಸಾಹಿತ್ಯಕ್ಕೆ ‘ಹಸೂಡಿ ವೆಂಕಟಶಾಸ್ತ್ರಿ’, ಮಕ್ಕಳ ಸಾಹಿತ್ಯಕ್ಕೆ ‘ನಾ.ಡಿಸೋಜಾ’ ಹಾಗೂ ವೈದ್ಯ ಸಾಹಿತ್ಯಕ್ಕೆ ‘ಡಾ.ಎಚ್.ಡಿ.ಚಂದ್ರಪ್ಪಗೌಡ’ ಬಹುಮಾನಗಳನ್ನು ನೀಡಲಾ­ಗು­ವುದು ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಮೇಲ್ಕಂಡ ಪ್ರಕಾರಗಳ ಸಾಹಿತ್ಯ ಕೃತಿಗಳ ‘ಮೂರು’ ಪ್ರತಿಗಳನ್ನು ಮಾರ್ಚ್ 31ರ ಒಳಗಾಗಿ ಗೌರವ ಕಾರ್ಯದರ್ಶಿ, ಕರ್ನಾಟಕ ಸಂಘ, ಬಿ.ಎಚ್.ರಸ್ತೆ, ಶಿವಮೊಗ್ಗ 577 201 ಕಳುಹಿಸಬಹುದು.

ಅತ್ಯುತ್ತಮ ಎಂದು ಆಯ್ಕೆಯಾದ ಕೃತಿಗಳಿಗೆ ₨5,000 ನಗದು ಮತ್ತು ಬಹುಮಾನ ಪತ್ರ ನೀಡಲಾಗುವುದು ಹಾಗೂ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಸಂಘದ ಕಾರ್ಯದರ್ಶಿ ಎಚ್.ಎಸ್.ನಾಗಭೂಷಣ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಹಿತಿಗೆ ದೂರವಾಣಿ 08182 277406 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT