ಹುಬ್ಬಳ್ಳಿ: ಹೈದರಾಬಾದ್‌ನ ರಾಷ್ಟ್ರೀಯ ಕುಕ್ಕಟ ಅಭಿವೃದ್ಧಿ ನಿರ್ದೇಶನಾಲಯ (ಎನ್‌ಪಿಡಿಡಿ) ಅಭಿವೃದ್ಧಿಪಡಿಸಿರುವ ಮೊಟ್ಟೆ ಕೋಳಿ ‘ಗ್ರಾಮಪ್ರಿಯ’ ಈಗ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಪಶು ವಿಜ್ಞಾನ ವಿಭಾಗದ ವಿಶೇಷ ಅತಿಥಿ ಎನಿಸಿದೆ.
ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳೇ ಅಭಿವೃದ್ಧಿಪಡಿಸಿದ್ದ ‘ಸ್ವರ್ಣಧಾರಾ’ ತಳಿಗೆ ಸ್ಪರ್ಧಿಯಂತೆ ತೋರುವ ‘ಗ್ರಾಮಪ್ರಿಯ’ ಕೋಳಿಯನ್ನು ಸ್ಥಳೀಯ ರೈತರಿಗೆ ಪರಿಚಯಿಸುವ ನಿಟ್ಟಿನಲ್ಲಿ ಪಶುವಿಜ್ಞಾನ ವಿಭಾಗ ಮೊದಲ ಬಾರಿಗೆ ಹೈದರಾಬಾದ್‌ನಿಂದ ತರಿಸಿದೆ.

ಗಾತ್ರ, ಬಣ್ಣದಲ್ಲಿ ನಾಟಿ ಕೋಳಿಯನ್ನೇ ಹೋಲುವ ‘ಗ್ರಾಮಪ್ರಿಯ’ ವಾಸ್ತವವಾಗಿ ನಾಟಿ ಕೋಳಿಯೊಂದಿಗೆ ಸಂಕರಣಗೊಂಡ ಹೈಬ್ರೀಡ್ ತಳಿ. ಸ್ವರ್ಣಧಾರಾ ಕೋಳಿಯಷ್ಟು ದೊಡ್ಡ ಗಾತ್ರವಿರದೆ ಮಧ್ಯಮ ಗಾತ್ರದ ತೂಕ, ಎತ್ತರವಾದ ಕಾಲುಗಳು ಹೊಂದಿರುವ ಗ್ರಾಮಪ್ರಿಯ,

ರಕ್ಷಣೆಗೆ ಆದ್ಯತೆ ನೀಡಿ
ನಾಟಿ ಕೋಳಿಗಳು ತಾಯಿಯ ಆಸರೆಯಲ್ಲಿ ಬೆಳೆಯುವುದರಿಂದ ನಾಯಿ, ಬೆಕ್ಕು, ನರಿ ಮೊದಲಾದ ನೈಸರ್ಗಿಕ ಶತ್ರುಗಳಿಂದ ರಕ್ಷಣೆ ಮಾಡಿಕೊಳ್ಳುವುದನ್ನು ಮರಿ ಇದ್ದಾಗಿನಿಂದಲೇ ಕಲಿತಿರುತ್ತವೆ. ಆದರೆ ಪೌಲ್ಟ್ರಿಗಳಲ್ಲಿ ಅಭಿವೃದ್ಧಿಪಡಿಸಿದ ಹೈಬ್ರೀಡ್ ತಳಿಗೆ ಆ ಪಾಠ ದೊರೆತಿರುವುದಿಲ್ಲ. ಆದ್ದರಿಂದ ನಾಯಿ, ಬೆಕ್ಕುಗಳ ದಾಳಿಗೆ ಸುಲಭ ತುತ್ತಾಗುವ ಸಾಧ್ಯತೆ ಇರುತ್ತದೆ. ಪೌಲ್ಟ್ರಿಗಳಲ್ಲಿ ಪೋಷಣೆ ಮಾಡುವಾಗ ಸಾಕಾಣೆದಾರರು ಆಹಾರ ತಂದು ಮರಿಗಳಿಗೆ ಹಾಕಿರುತ್ತಾರೆ. ತನ್ನ ಬಳಿ ಬರುವವರೆಲ್ಲಾ ಆಹಾರ ತರುತ್ತಾರೆ ಎಂದು ಭಾವಿಸುವ ಹೈಬ್ರೀಡ್ ಕೋಳಿಗಳು ನಾಯಿ, ಬೆಕ್ಕು ತಮ್ಮ ಬಳಿ ಬಂದರೂ ಓಡಿ ಹೋಗದೇ ನೋಡುತ್ತಾ ನಿಂತು ಅವುಗಳಿಗೆ ಆಹಾರವಾಗುತ್ತವೆ. ಆದ್ದರಿಂದ ಸಾಕಾಣೆದಾರರು ಇವುಗಳ ರಕ್ಷಣೆಗೆ ತುಸು ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ’ ಎನ್ನುತ್ತಾರೆ ಕೃಷಿ ವಿಶ್ವವಿದ್ಯಾಲಯದ ಪಶು ವಿಜ್ಞಾನ ವಿಭಾಗದ ವಿಜ್ಞಾನಿ ಡಾ.ಜಾವೇದ್ ಮುಲ್ಲಾ.
ಚಿಕ್ಕ ರೈತರು ಉಪಕಸುಬಾಗಿ ಸಾಕಣೆ ಮಾಡಲು ಹಾಗೂ ಸಣ್ಣ ಪ್ರಮಾಣದ ಪೌಲ್ಟ್ರಿ ನಿರ್ವಹಿಸುವವರಿಗೆ ‘ಗ್ರಾಮಪ್ರಿಯ’ ಲಾಭದಾಯಕ ತಳಿಯಾಗಿದೆ ಎಂದು ಮುಲ್ಲಾ ಹೇಳುತ್ತಾರೆ. ಆಸಕ್ತರು ಮಾಹಿತಿಗಾಗಿ ಡಾ.ಜಾವೇದ್ ಮುಲ್ಲಾ ಅವರನ್ನು ಮೊಬೈಲ್ ಸಂಖ್ಯೆ: 9448861650 ಸಂಪರ್ಕಿಸಬಹುದು.

ನಾಟಿ ಕೋಳಿಯ ರೀತಿ ಕಂದು ಬಣ್ಣದ ಮೊಟ್ಟೆಗಳನ್ನೇ ಇಡುವುದು ವಿಶೇಷವಾಗಿದೆ. ಆದರೆ ಮೊಟ್ಟೆಯ ಗಾತ್ರ ತುಸು ದೊಡ್ಡದಾಗಿರುತ್ತದೆ.

ಮೊಟ್ಟೆ ಕೋಳಿ: ನಾಟಿ ಕೋಳಿ 26ನೇ ವಾರದಿಂದ ಮೊಟ್ಟೆ ಇಡಲು ಆರಂಭಿಸಿ, ವರ್ಷಕ್ಕೆ 40ರಿಂದ 60 ಮೊಟ್ಟೆ ಇಟ್ಟರೆ, ಗ್ರಾಮಪ್ರಿಯ 24 ತಿಂಗಳಿಗೇ ಆರಂಭಿಸಿ ವಾರ್ಷಿಕವಾಗಿ 180ರಿಂದ 200 ಮೊಟ್ಟೆಗಳನ್ನು ಇಡಲಿದೆ.

ಮನೆಯಲ್ಲಿ ಬೆಳೆದ ಕಾಳು–ಕಡಿಯ ಜೊತೆಗೆ ಸುತ್ತಲಿನ ತಿಪ್ಪೆ, ಅಂಗಳದಲ್ಲಿ ಸಿಗುವ ಹುಳು–ಹುಪ್ಪಡಿಗಳನ್ನು ತಿಂದು ಬೆಳೆಯುವುದರಿಂದ ಅಷ್ಟಾಗಿ ಖರ್ಚು ಬರುವುದಿಲ್ಲ. ಬೇರೆ ಕೋಳಿಗಳ ರೀತಿ ಗ್ರಾಮಪ್ರಿಯ, ಮೊಟ್ಟೆ ಇಟ್ಟಾಗ ಕಾವಿಗೆ ಕೂರುವುದಿಲ್ಲ. ಸರಾಸರಿ ಎರಡು ದಿನಕ್ಕೆ ಒಂದು ಮೊಟ್ಟೆ ಇಡಲಿದೆ. ಈ ತಳಿಯ ಹುಂಜವನ್ನು ಮಾಂಸಕ್ಕೂ ಬಳಸಬಹುದಾಗಿದೆ.

ಹೈದರಾಬಾದ್‌ನ ಎನ್‌ಪಿಡಿಡಿಯಿಂದ ಒಂದು ದಿನದ ಗ್ರಾಮಪ್ರಿಯ ಮರಿಯನ್ನು ತರಬೇಕಾದರೆ ₨16 ರೂಪಾಯಿ ಕೊಡಬೇಕಿದೆ. ಇನ್ನು ಫಲಭರಿತ ಮೊಟ್ಟೆಗೆ ₨12 ಇದೆ. ಕೃಷಿ ವಿವಿಯ ಪಶು ವಿಜ್ಞಾನ ವಿಭಾಗದಲ್ಲಿ ಮೂರು ವಾರದ ಮರಿಗಳನ್ನು ₨55ಕ್ಕೆ ಒಂದರಂತೆ ಮಾರಾಟ ಮಾಡಲಾಗುತ್ತಿದೆ. ಒಮ್ಮೊಮ್ಮೆ ಸಾಗಣೆ ವೆಚ್ಚ, ಕೋಳಿ ಆಹಾರದ ಬೆಲೆಯಲ್ಲಿನ ಏರಿಳಿತದ ಕಾರಣ ಈ ಬೆಲೆಯಲ್ಲೂ ವ್ಯತ್ಯಾಸವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.