ಶಿವಮೊಗ್ಗ: ನಮ್ ಟೀಮ್ ಸಂಸ್ಥೆ, ಅಕ್ಟೋಬರ್ 29ರಿಂದ ಮೂರು ದಿನಗಳ ಕಾಲ ನೀನಾಸಂ ನಾಟಕೋತ್ಸವವನ್ನು ನಗರದ ಕುವೆಂಪು ರಂಗಮಂದಿರದಲ್ಲಿ ಪ್ರತಿ ದಿನ ಸಂಜೆ 6.45ಕ್ಕೆ ಆಯೋಜಿಸಿದೆ.

29ರಂದು ಹೆಗ್ಗೋಡಿನ ಕೆ.ವಿ.ಸುಬ್ಬಣ್ಣ ರಂಗಸಮೂಹ `ಸಂಗ್ಯಾಬಾಳ್ಯಾ' (ರಚನೆ: ಪತ್ತಾರ ಮಾಸ್ತರ್/ಡಾ.ಚಂದ್ರಶೇಖರ ಕಂಬಾರ) ನಾಟಕವನ್ನು ಕೆ.ಜಿ.ಕೃಷ್ಣಮೂರ್ತಿ ನಿರ್ದೇಶಿಸಿದ್ದು, ಉಚಿತ ಪ್ರವೇಶ ಕಲ್ಪಿಸಲಾಗಿದೆ.

30ರಂದು ನೀನಾಸಂ ತಿರುಗಾಟ ತಂಡ ‘ಗಾಂಧಿ ವಿರುದ್ಧ ಗಾಂಧಿ' ನಾಟಕವನ್ನು ಪ್ರದರ್ಶಿಸಲಿದೆ. ಡಿ.ಎಸ್.ಚೌಗಲೆ ರಚಿಸಿದ
ನಾಟಕವನ್ನು ಎಂ.ಗಣೇಶ್ ನಿರ್ದೇಶಿಸಿದ್ದಾರೆ. ಈ ನಾಟಕದ ಪ್ರವೇಶ ದರ ರೂ 30.

31ರಂದು ನೀನಾಸಂ ತಿರುಗಾಟ ತಂಡದಿಂದಲೇ `ಸೀತಾ ಸ್ವಯಂವರ' ನಾಟಕ ಪ್ರದರ್ಶಿಸಲಾಗುವುದು. ಎಂ.ಎಲ್.ಶ್ರೀಕಂಠೇಶಗೌಡ
ರಚಿಸಿದ ಮಂಜುನಾಥ ಎಲ್. ಬಡಿಗೇರ ನಿರ್ದೇಶನದಲ್ಲಿ ನಾಟಕ ಪ್ರದರ್ಶನ ಮಾಡಲಾಗುವುದು. ಪ್ರವೇಶ ದರ ರೂ 30 ನಿಗದಿಪಡಿಸಲಾಗಿದೆ.

ಅ.29ರಂದು ಸಂಜೆ 6.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ನಾಟಕೋತ್ಸವ ಉದ್ಘಾಟಿಸುವರು.

ಅತಿಥಿಗಳಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಕಲಾವಿದರು ಒಕ್ಕೂಟದ ಗೌರವಾಧ್ಯಕ್ಷ ಡಾ.ಕೆ.ಎ.ಅಶೋಕ್ ಪೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಮತ್ತಿತರರು ಪಾಲ್ಗೊಳ್ಳುವರು ಎಂದು ನಮ್ ಟೀಮ್ ಅಧ್ಯಕ್ಷ ಹೊನ್ನಾಳಿ ಚಂದ್ರಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.