ಬೆಂಗಳೂರು: ‘ಕೈಮಗ್ಗ ಕ್ಷೇತ್ರದಲ್ಲಿ ಯಾಂತ್ರೀಕರಣ ನಿಲ್ಲಿಸಬೇಕು ಎಂದು ಆಗ್ರಹಿಸಿ ಹಿರಿಯ ರಂಗಕರ್ಮಿ ಪ್ರಸನ್ನ ನಡೆಸಲು ಉದ್ದೇಶಿಸಿರುವ ಉಪವಾಸ ಸತ್ಯಾಗ್ರಹ ಕೈಬಿಡಬೇಕು’ ಎಂದು ಹಿರಿಯ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ ಮನವಿ ಮಾಡಿದ್ದಾರೆ.

‘ಕೈಮಗ್ಗದ ಕುಶಲತೆಯನ್ನೂ, ಜೊತೆಗೇ ಜೀವನೋಪಾಯವಾದ ತಂತ್ರಗಾರಿಕೆಯನ್ನೂ ನಾವು ಕಳೆದುಕೊಳ್ಳಕೂಡದು. ಈ ಬಗ್ಗೆ ನೀವು ಹೋರಾಡುತ್ತಾ ಇದ್ದೀರಿ. ಆದರೆ, ಉಪವಾಸ ಕೂರಬಾರದು. ಜನರನ್ನು ಇನ್ನೂ ಎಚ್ಚರಿಸಬೇಕಾಗಿದೆ. ಅದನ್ನು ನಾವು ನೀವು ಜತೆಗೂಡಿ ಮಾಡಬೇಕು. ನಾವೆಲ್ಲ ನಿಮ್ಮೊಂದಿಗೆ ಇದ್ದೇವೆ’ ಎಂದು ಪ್ರಸನ್ನ ಅವರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.