ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದನದಲ್ಲಿ ಕುಳಿತುಕೊಳ್ಳೋದು ಕಲಿಯಿರಿ

ನೂತನ ಶಾಸಕರಿಗೆ ಮುಖ್ಯಮಂತ್ರಿ ಕಿವಿಮಾತು
Last Updated 25 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನ ಮಂಡಳ ಅಧಿವೇಶನದಲ್ಲಿ ಶಾಸಕರನ್ನು ಕರೆದುಕೊಂಡು ಬಂದು ಕೂರಿಸುವ ಪರಿಸ್ಥಿತಿ ಉಂಟಾಗಿದೆ. ಹಲವು ಪ್ರಮುಖ ಮಸೂದೆ  ಗಳಿಗೆ ಚರ್ಚೆಯೇ ಇಲ್ಲದೆ ಅನುಮೋದನೆ ನೀಡಲಾ ಗುತ್ತಿದೆ. ಬಜೆಟ್‌ಗೂ ಇದೇ ಪರಿಸ್ಥಿತಿ ಉಂಟಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಷಾದ ವ್ಯಕ್ತಪಡಿಸಿದರು.

ವಿಧಾನಪರಿಷತ್‌ ಮತ್ತು ವಿಧಾನಸಭೆಗೆ ಪ್ರಥಮ ಬಾರಿ ಆಯ್ಕೆಯಾಗಿರುವ ಶಾಸಕರಿಗೆ ವಿಕಾಸಸೌಧ ದಲ್ಲಿ ಶುಕ್ರವಾರ ಆಯೋಜಿಸಿದ್ದ ತರಬೇತಿ ಶಿಬಿರ ಉದ್ಘಾಟಿಸಿದ ಅವರು, ಶಾಸಕರು ‘ಮೊದಲು ವಿಧಾನಸಭೆ ಅಧಿವೇಶನದಲ್ಲಿ ಕುಳಿತುಕೊಳ್ಳುವು ದನ್ನು ಕಲಿಯಿರಿ’ ಎಂದು ಕಿವಿಮಾತು ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ಮಸೂದೆಗಳ ಬಗ್ಗೆ ಚರ್ಚಿಸುವುದು ಕಡಿಮೆಯಾಗಿದೆ. 3–4 ಶಾಸಕರು ಮಾತ್ರ ಮಾತನಾಡುತ್ತಾರೆ. ಸರ್ಕಾರವೂ ಆತುರ ಆತುರವಾಗಿ ಮಸೂದೆಗಳನ್ನು ಮಂಡಿಸುತ್ತದೆ. ಈ ಬಗ್ಗೆ ಅಧ್ಯಯನ ಮಾಡಲು ಶಾಸಕರಿಗೆ ಸಮಯಾವ ಕಾಶ ನೀಡುವುದಿಲ್ಲ.

ಇದರಿಂದ ಚರ್ಚೆ ನಡೆಯುವು ದು ಅತಿ ಕಡಿಮೆ. ಮಸೂದೆಗಳನ್ನು ಮಂಡಿಸಿದಾಗ ಶಾಸಕರ ಹಾಜರಾತಿಯೂ ವಿರಳವಾಗಿರುತ್ತದೆ. ಅನುಮೋದನೆ ಸಂದರ್ಭದಲ್ಲಿ ಕೆಲವು ಬಾರಿ ಮತ ದಾನ ನಡೆಯುವಾಗ ಶಾಸಕರನ್ನು ಕರೆತಂದು ಕೂರಿ ಸುವ ಪರಿಸ್ಥಿತಿ ಉಂಟಾಗುತ್ತದೆ. ಮುಖ್ಯ ಸಚೇತಕ ರಿಗೆ ಇದೇ ದೊಡ್ಡ ಕೆಲಸವಾಗುತ್ತದೆ ಎಂದರು.

ಅಧಿವೇಶನದಲ್ಲಿ ಅನೇಕ ಬಾರಿ ಸಚಿವರೇ ಗೈರುಹಾಜರಾದಂತಹ ಪರಿಸ್ಥಿತಿಯೂ ಉಂಟಾಗಿದೆ. ವಿರೋಧ ಪಕ್ಷದವರಿಗೆ ಟೀಕೆ ಮಾಡಲು ಇದೇ ಒಂದು ವಿಷಯ ಸಿಕ್ಕಂತಾಗುತ್ತದೆ. ಶಾಸಕರು ಸದನ ದಲ್ಲಿ ಸಭಾಧ್ಯಕ್ಷರ ಸೂಚನೆಯನ್ನು ಪಾಲಿಸಬೇಕು. ವಿನಾಕಾರಣ ಗದ್ದಲ ಮಾಡುವುದು ಸಲ್ಲದು. ಕೆಲವು ಬಾರಿ ಮುಖ್ಯಮಂತ್ರಿ ಮತ್ತು ಸಚಿವರ ಮೇಲೆ ವಾಗ್ದಾಳಿ ಮಾಡಿದಾಗ ಆಡಳಿತ ಪಕ್ಷದ ಶಾಸಕರಿಗೆ ಕುಮ್ಮಕ್ಕು ನೀಡಿ ಗಲಾಟೆ ಮಾಡಿಸಿದ ಪ್ರಸಂಗಗಳು ಸದನದಲ್ಲಿ ನಡೆದಿವೆ ಎಂದು ವಿವರಿಸಿದರು.

ಮೊದಲು 80–100 ದಿನಗಳ ಕಾಲ ನಡೆಯುತ್ತಿದ್ದ ಅಧಿವೇಶನ ಇತ್ತೀಚೆಗೆ ಕೇವಲ 25–30 ದಿನಗಳ ಕಾಲ ನಡೆಯುತ್ತಿದೆ. ಮುಂದಿನ ವರ್ಷದಿಂದ ಕನಿಷ್ಠ 60 ದಿನಗಳ ಕಾಲ ಅಧಿವೇಶನ ನಡೆಸಲಾಗುವುದು. ಸಂಸತ್ತಿನ ಮಾದರಿಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲಾಗುವುದು ಎಂದು ತಿಳಿಸಿದರು.

ವಿಧಾನಸೌಧಕ್ಕೆ ಸಚಿವರು ವಾರದಲ್ಲಿ ಕನಿಷ್ಠ 2–3 ದಿನ ಬರಬೇಕು. ಕಡತಗಳ ವಿಲೇವಾರಿ ತ್ವರಿತಗತಿಯಲ್ಲಿ ಮಾಡಬೇಕು. ಅಧಿಕಾರಿಗಳ ಸಭೆ ಮಾಡಬೇಕು ಎಂದು ಸಚಿವರಿಗೂ ಸೂಚಿಸಿದರು. ವಿಧಾನಸಭೆ ಸ್ಪೀಕರ್‌ ಕಾಗೋಡು ತಿಮ್ಮಪ್ಪ ಮಾತನಾಡಿ, ಅಧಿವೇಶನಕ್ಕೆ ಹಾಜರಾಗುವ ಸಂಸ್ಕೃತಿಯನ್ನು ಶಾಸಕರು ಬೆಳೆಸಿಕೊಂಡಾಗ ಬದ್ಧತೆ ಮೂಡುತ್ತದೆ ಎಂದು ಸಲಹೆ ನೀಡಿದರು. ಪರಿಷತ್‌ ಸಭಾಪತಿ ಡಿ.ಎಚ್‌. ಶಂಕರಮೂರ್ತಿ,  ಸಚಿವ ಟಿ.ಬಿ. ಜಯಚಂದ್ರ, ವಿಧಾನಸಭೆ ಕಾರ್ಯ ದರ್ಶಿ ಪಿ. ಓಂಪ್ರಕಾಶ್‌, ಪರಿಷತ್‌ ಕಾರ್ಯದರ್ಶಿ ವಿ. ಶ್ರೀಶ ಮತ್ತಿತರರು ಹಾಜರಿದ್ದರು.

ನೀವು ಗ್ರಂಥಾಲಯಕ್ಕೆ ಹೋಗಿ...
ಶಾಸಕರು ಗ್ರಂಥಾಲಯಕ್ಕೆ ಹೋಗಿ ಅಧ್ಯ ಯನ ಮಾಡಬೇಕು. ಆದರೆ ನಾನು  ಹೋಗಿ ದ್ದು ಬಹಳ ಕಡಿಮೆ. ವಿರೋಧ ಪಕ್ಷದ ನಾಯಕ ನಾಗಿದ್ದಾಗ ಅನಿವಾರ್ಯವಾಗಿ ಹೋಗಬೇಕಾ ಗಿತ್ತು. ನಾವ್ಯಾರೂ ಸರ್ವಜ್ಞರಲ್ಲ. ಕಲಿಯು ವುದು ಬಹಳಷ್ಟಿದೆ.
-ಸಿದ್ದರಾಮಯ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT