ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಲ್ಮಾನ್‌ ಖಾನ್‌ ದೋಷಿ

ಅಪಘಾತ ಎಸಗಿ ಪರಾರಿಯಾದ ಪ್ರಕರಣ
Last Updated 6 ಮೇ 2015, 6:07 IST
ಅಕ್ಷರ ಗಾತ್ರ

ಮುಂಬೈ (ಏಜೆನ್ಸೀಸ್‌): ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಭಾಗಿಯಾದ ‘ಅಪಘಾತ ಎಸಗಿ  ಪರಾರಿಯಾದ ಪ್ರಕರಣ’ಕ್ಕೆ ಸಂಬಂಧಿಸಿದಂತೆ ಇಲ್ಲಿನ ಸ್ಥಳೀಯ ನ್ಯಾಯಾಲಯ ಸಲ್ಮಾನ್‌ ಖಾನ್‌ ದೋಷಿ  ಎಂದು ಬುಧವಾರ ತೀರ್ಪು ನೀಡಿದೆ.

ನಟ ಸಲ್ಮಾನ್‌ ಖಾನ್‌ ಅತಿ ವೇಗ, ಅಜಾಗರೂಕತೆಯಿಂದ ವಾಹನ ಚಲಾಯಿಸಿರುವುದು ಸಾಬೀತಾಗಿದೆ ಎಂದು ನ್ಯಾಯಾದೀಶ ಡಿ. ಡಬ್ಲ್ಯೂ.ದೇಶಪಾಂಡೆ ತೀರ್ಪಿನಲ್ಲಿ ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್‌ ವಿರುದ್ಧ ಮಾಡಲಾಗಿರುವ ಎಲ್ಲಾ ಆರೋಪಗಳು ಸಾಬೀತಾಗಿದ್ದು ಸಲ್ಮಾನ್‌ ಖಾನ್‌ ಅಪರಾಧಿ ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಸಲ್ಮಾನ್‌ ಖಾನ್‌ ಉದ್ದೇಶರಹಿತ ಮಾನವ ಹತ್ಯೆ ಮಾಡಿರುವುದರಿಂದ ಅವರಿಗೆ ಕನಿಷ್ಠ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಗಳಿವೆ. 2002ರಲ್ಲಿ ಸಂಭವಿಸಿದ ಅಪಘಾತದಲ್ಲಿ ಒಬ್ಬರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT