ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಹಸ್ತಪ್ರತಿಗಳಿಗೆ ಪ್ರಶಸ್ತಿ

Last Updated 15 ಡಿಸೆಂಬರ್ 2014, 19:58 IST
ಅಕ್ಷರ ಗಾತ್ರ

ಕಲಬುರ್ಗಿ: ಇಲ್ಲಿಯ  ಸಿದ್ದಲಿಂಗೇಶ್ವರ ಬುಕ್‌ ಡಿಪೋ ಮತ್ತು ಪ್ರಕಾಶನ ಸಂಸ್ಥೆಯಿಂದ ಕೊಡಮಾಡುವ, ಹಸ್ತಪ್ರತಿ­ಯಲ್ಲಿ­ರುವ ಸಾಹಿತ್ಯ ಕೃತಿಗಳಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರಕಟಿಸಲಾಗಿದೆ.

ಪ್ರಸಕ್ತ ವರ್ಷ ಆರಂಭಿಸಿರುವ ಈ ಪ್ರಶಸ್ತಿಗೆ ಬೆಳಗಾವಿಯ ಶಶಿಧರ ಜೇರೆ ಅವರ ‘ಅನುರಾಗ’ (ಕಾದಂಬರಿ), ಬೆಂಗಳೂರಿನ ಡಾ.ವಂದನಾ ಅವರ ‘ಸಪ್ತಕ’ (ಪ್ರಬಂಧಗಳು), ಬಾಗಲಕೋಟೆ ಜಿಲ್ಲೆ ತೇರದಾಳದ ಎಸ್‌.ಆರ್‌. ರಾವಳ ಅವರ ‘ಗುಡುಸಾಬನ ಗೂಡಂಗಡಿ’ (ಕಥಾ ಸಂಕಲನ) ಹಸ್ತಪ್ರತಿಗಳು ಆಯ್ಕೆಯಾಗಿವೆ ಎಂದು ಪ್ರಕಾಶಕ ಬಸವರಾಜ ಕೊನೇಕ ತಿಳಿಸಿದ್ದಾರೆ.

ಪ್ರಶಸ್ತಿಯು ತಲಾ ₨5 ಸಾವಿರ ನಗದು ಒಳಗೊಂಡಿದೆ. 2015ರ ಜನವರಿ ತಿಂಗಳಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಮೂವರ ಕೃತಿಗಳನ್ನು ಪ್ರಕಟಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT