ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎನ್.ಆರ್.ರಾವ್‌ಗೆ ಮತ್ತೊಂದು ಗರಿ

Last Updated 26 ಫೆಬ್ರುವರಿ 2015, 19:46 IST
ಅಕ್ಷರ ಗಾತ್ರ

ಬೆಂಗಳೂರು: ವಿಜ್ಞಾನಿ ಪ್ರೊ.ಸಿ.­ಎನ್.­ಆರ್.­ರಾವ್ ಅವರಿಗೆ ಕ್ಯಾನ್‌ಬೆರಾ­ದಲ್ಲಿರುವ ಆಸ್ಟ್ರೇಲಿ­ಯನ್‌ ನ್ಯಾಷ­ನಲ್‌ ವಿಶ್ವವಿದ್ಯಾಲಯದ ‘ಡಿಗ್ರಿ ಆಫ್ ಡಾಕ್ಟರ್ ಆಫ್ ಸೈನ್ಸ್ ಆನರಿಸ್ ಕಾಸಾ’ ಗೌರವ ಲಭಿಸಿದೆ.

ಈಗಾಗಲೇ ರಾಷ್ಟ್ರೀಯ, ಅಂತ­ರರಾ­ಷ್ಟ್ರೀಯ ಮಟ್ಟದ ಹಲವು ಪುರ­ಸ್ಕಾರಗಳಿಗೆ ಪಾತ್ರರಾಗಿರುವ ಅವರ ಕಿರೀ­ಟಕ್ಕೆ ಮತ್ತೊಂದು ಗರಿ ಸೇರಿ­­ದಂತಾಗಿದೆ. ಸಿ.ಎನ್‌.ಆರ್‌ ಅವರು ರಾಷ್ಟ್ರೀಯ ಸಂಶೋಧನಾ ಪ್ರೊಫೆ­ಸರ್ ಹಾಗೂ ಜವಾಹರ­ಲಾಲ್ ನೆಹರೂ ಉನ್ನತ ವೈಜ್ಞಾನಿಕ ಸಂಶೋ­ಧನಾ ಕೇಂದ್ರದ (ಜೆಎನ್‌ಸಿ­ಎ­ಎಸ್‌­ಆರ್­) ಗೌರವ ಅಧ್ಯಕ್ಷರಾ­ಗಿದ್ದಾ­ರೆ.

ಗೌರವ ಡಾಕ್ಟರೇಟ್‌: ಜೆಎನ್‌ಸಿಎ­ಎಸ್‌­ಆರ್‌ನ ಮಲ್ಟಿ ಮೀಡಿಯಾ ಗ್ರೂಪ್‌ನ ಗೌರವ ಸಂಯೋಜಕಿ ಇಂದು­­ಮತಿ ರಾವ್‌ ಅವರಿಗೆ ಕರ್ನಾ­ಟಕ ರಾಜ್ಯ ಮಹಿಳಾ ವಿಶ್ವವಿದ್ಯಾ­ಲ­ಯವು ಗೌರವ ಡಾಕ್ಟರೇಟ್‌ ನೀಡಿದೆ.

ಮಾರ್ಚ್‌ 3ರಂದು ವಿಜಯ­ಪುರ­ದಲ್ಲಿ ನಡೆಯಲಿರುವ ಕಾರ್ಯಕ್ರಮ­ದಲ್ಲಿ ಗೌರವ ಡಾಕ್ಟರೇಟ್‌ ಪ್ರದಾನ ಮಾಡ­ಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT