ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿಯಲ್ಲೇ ಸಮ್ಮೇಳನಕ್ಕೆ ಆಗ್ರಹಿಸಿ 4ರಂದು ಬಂದ್

Last Updated 30 ಜುಲೈ 2014, 19:30 IST
ಅಕ್ಷರ ಗಾತ್ರ

ಹಾವೇರಿ: 81ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ಹಾವೇರಿ ಪಟ್ಟಣದಲ್ಲೇ  ನಡೆಸಲು ಆಗ್ರಹಿಸಿ ಆಗಸ್ಟ್‌ 4ರಂದು ‘ಹಾವೇರಿ ಬಂದ್‌’ಗೆ ಕರೆ ನೀಡಲಾಗಿದೆ. ಶಾಸಕ ರುದ್ರಪ್ಪ ಲಮಾಣಿ ಅಧ್ಯಕ್ಷತೆ­ಯಲ್ಲಿ ಬುಧವಾರ ನಗರದ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ನಡೆದ ವಿವಿಧ ಸಂಘ– ಸಂಸ್ಥೆಗಳು, ಸಂಘಟನೆ­ಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

‘ಎಲ್ಲ ಸಂಘ–ಸಂಸ್ಥೆಗಳು, ಸಾಹಿತಿಗಳ ಒಮ್ಮತದ ನಿರ್ಣಯದಂತೆ ಹಾವೇರಿ­ಯಲ್ಲಿ ಸಮ್ಮೇಳನ ನಡೆಸಲು ಒತ್ತಾ­ಯಿಸಿ ಶಾಂತಿಯುತ ಬಂದ್‌ ಮಾಡಲಾ­ಗು­ವುದು. ಅಂದು ಜಿಲ್ಲೆಯ ಆರು ಶಾಸ­ಕರ ಬೆಂಬಲದೊಂದಿಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿಗೆ ನಿಯೋಗ ಕರೆದುಕೊಂಡು ಹೋಗಲಾಗುವುದು’ ಎಂದು ಅವರು ಹೇಳಿದರು.

ಸಭೆಯಲ್ಲಿ ಮಾತನಾಡಿದ ವಿವಿಧ ಸಂಘ­ಟನೆಗಳ ಪದಾಧಿಕಾರಿಗಳು, ‘ಜಿಲ್ಲೆಯ ಜನಪ್ರತಿನಿಧಿಗಳು, ಸಾಹಿತಿ­ಗಳ ಬಹುಮತದ ಅಭಿಪ್ರಾಯವನ್ನು ಧಿಕ್ಕ­ರಿಸಿ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಜಿ.ಬಿ. ಮಾಸ­ಣಗಿ ರಾಣೆಬೆನ್ನೂರಿನಲ್ಲಿ ಸಮ್ಮೇ­ಳನ ನಡೆಸುವುದಾಗಿ ಹಟ ಹಿಡಿದಿರುವುದು ಖಂಡನೀಯ. ‘ಸಮ್ಮೇಳನ ನಡೆದರೆ ಹಾವೇರಿಯಲ್ಲಿ ನಡೆಯಲಿ, ಇಲ್ಲದಿದ್ದರೆ ಜಿಲ್ಲೆ ಬಿಟ್ಟು ಹೋಗಲಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT