ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ನಟ ಶಶಿ ಕಪೂರ್‌ಗೆ ಫಾಲ್ಕೆ ಪ್ರಶಸ್ತಿ

Last Updated 23 ಮಾರ್ಚ್ 2015, 13:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್ಎಸ್): ಹಿರಿಯ ಬಾಲಿವುಡ್ ಶಶಿ ಕಪೂರ್ ಅವರು 2014ನೇ ಸಾಲಿನ ಪ್ರತಿಷ್ಠಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭಾರತೀಯ ಸಿನೆಮಾದ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ನೀಡಿದ ಅನನ್ಯ ಕೊಡುಗೆಗಾಗಿ ಅವರಿಗೆ ಈ ಪ್ರಶಸ್ತಿ ಸಂದಿದೆ. ಕಪೂರ್ ಕುಟುಂಬಕ್ಕೆ ಸಂದ ಮೂರನೇ ಪ್ರಶಸ್ತಿ ಇದಾಗಿದೆ.

ಭಾರತೀಯ ಸಿನೆಮಾದ ಬೆಳವಣಿಗೆ ಹಾಗೂ ಅಭಿವೃದ್ಧಿಗೆ ನೀಡಿದ ಅನನ್ಯ ಕೊಡುಗೆಗಾಗಿ ಅವರಿಗೆ ಈ ಪ್ರಶಸ್ತಿ ಸಂದಿದೆ. ಪ್ರಶಸ್ತಿಯು ಒಂದು ಸ್ವರ್ಣ ಕಮಲ, 10 ಲಕ್ಷ ರೂಪಾಯಿ ನಗದು ಹಾಗೂ ಒಂದು ಶಾಲು ಒಳಗೊಂಡಿರುತ್ತದೆ. ಇದೇ ತಿಂಗಳು 77ನೇ ವರ್ಷಕ್ಕೆ ಕಾಲಿಟ್ಟ ಶಶಿ ಕಪೂರ್, ಈ ಪ್ರಶಸ್ತಿಗೆ ಭಾಜನರಾದ 46ನೇ ವ್ಯಕ್ತಿ.

ನಾಲ್ಕನೇ ವಯಸ್ಸಿಗೆ ನಾಟಕಗಳ ಮೂಲಕ ಬಣ್ಣದೊಂದಿಗೆ ನಂಟು ಬೆಸೆದುಕೊಂಡ ಶಶಿ ಕಪೂರ್, 1948ರಿಂದ 1954ರ ಅವಧಿಯಲ್ಲಿ ಬಾಲ ನಟನಾಗಿ ಚಲನ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ನಾಯಕರಾಗಿ ಅಭಿನಯದ ಮೊದಲ ಚಿತ್ರ ಧರ್ಮಪುತ್ರ. 1961ರಲ್ಲಿ.
ಒಟ್ಟಾರೆ ಸುಮಾರು 160ಕ್ಕೂ ಅಧಿಕ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕೆಲ ಇಂಗ್ಲಿಷ್ ಚಿತ್ರಗಳೂ ಇದರಲ್ಲಿ ಸೇರಿವೆ.

ನಟನೆಯ ಜತೆಗೆ ಚಿತ್ರದ ಸಹ ನಿರ್ದೇಶಕ, ನಿರ್ದೇಶನ ಬೂಟಿನೊಳಗೂ ಕಾಲಿಟ್ಟ ಅನುಭವಿ ಶಶಿ ಕಪೂರ್. ಹಲವು ಚಿತ್ರಗಳ ನಿರ್ಮಾಣವನ್ನೂ ಮಾಡಿದ್ದಾರೆ.

2011ರಲ್ಲಿ ಕೇಂದ್ರ ಸರ್ಕಾರ ಶಶಿ ಕಪೂರ್ ಅವರಿಗೆ ಪದ್ಮ ಭೂಷಣ್ ಪ್ರಶಸ್ತಿ ನೀಡಿ ಸಮ್ಮಾನಿಸಿತ್ತು.

ಶಶಿ ಅವರ ತಂದೆ ಪೃಥ್ವಿರಾಜ್ ಕಪೂರ್ ಅವರಿಗೆ 1971ರಲ್ಲಿ ಮರಣೋತ್ತರವಾಗಿ ಫಾಲ್ಕೆ ಪ್ರಶಸ್ತಿ ನೀಡಲಾಗಿತ್ತು. ಬಳಿಕ 1987ರಲ್ಲಿ ಶಶಿ ಕಪೂರ್ ಅವರ ಹಿರಿಯ ಸಹೋದರ ರಾಜ್ ಕಪೂರ್ ಅವರಿಗೂ ಈ ಗೌರವ ಲಭಿಸಿತ್ತು ಎಂಬುದು ಉಲ್ಲೇಖಾರ್ಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT