ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನಂತರ ವಿಚಾರ ಸಮಾಜಕ್ಕೆ ತಲುಪಿಲ್ಲ’

ಕುಂದಾಪುರದಲ್ಲಿ ‘ಅನಂತಪ್ರಜ್ಞೆ’ - ಸಂವಾದ
Last Updated 26 ಸೆಪ್ಟೆಂಬರ್ 2014, 4:56 IST
ಅಕ್ಷರ ಗಾತ್ರ

ಕುಂದಾಪುರ: ಮಾತುಗಳಿಂದ ಹೇಳಲಾ ಗದ್ದನ್ನು ಶಬ್ದಗಳಿಂದ ಹೇಳಲು ಸಾಧ್ಯ ಎನ್ನುವ ಸಾಮಾನ್ಯ ಸಂಗತಿಗಳು ಲೇಖಕ­ನಾದವನಿಗೆ ತಿಳಿದರಬೇಕು ಎನ್ನುವ ಸತ್ಯವನ್ನು ಸಾಹಿತಿ ಡಾ.ಯು. ಆರ್ ಅನಂತಮೂರ್ತಿ ತಮ್ಮ ಜೀವನ ದಲ್ಲಿ ಅಳವಡಿಸಿಕೊಂಡಿದ್ದರು ಎಂದು ವಿಮರ್ಶಕ ಜಿ.ರಾಜಶೇಖರ ಅಭಿ ಪ್ರಾಯಪಟ್ಟರು.

ಇಲ್ಲಿನ ಸಮುದಾಯ ಸಂಘಟನೆಯ ನೇತೃತ್ವದಲ್ಲಿ, ಸರ್ಕಾರಿ ಪದವಿಪೂರ್ವ ಕಾಲೇಜಿನ ಬಕುಳ ಸಾಹಿತ್ಯ ವೇದಿಕೆಯ ಸಹಕಾರದೊಂದಿಗೆ ನಗರದ ಲಕ್ಷ್ಮೀ ನರಸಿಂಹ ರೋಟರಿ ಕಲಾಮಂದಿರದಲ್ಲಿ ಬುಧವಾರ ನಡೆದ ಡಾ.ಯು.ಆರ್. ಅನಂತಮೂರ್ತಿ ಸಾಹಿತ್ಯ ಮತ್ತು ಚಿಂತನೆಗಳು- ಒಂದು ಸಂವಾದ ‘ಅನಂತ ಪ್ರಜ್ಞೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾತಿನಲ್ಲಿ ಕೃಷಿ ಮಾಡಿ, ಶಬ್ದಗಳ ಉತ್ಪತಿ ಮಾಡಿ ನಿರ್ಭಯ ಸಾಹಿತ್ಯ ಗಳಿಗೆ ತಮ್ಮನ್ನು ತೊಡಗಿಸಿಕೊಂಡಿದ್ದ ಅವರಿಗೆ ಮಾತು ಸೂಲುತ್ತಿದ್ದೆಯೋ ಏನೋ ಎನ್ನುವ ಹತಾಶೆ ಕಾಡಿದ್ದವು. ಸಮಾಜದಲ್ಲಿ ನಡೆಯುತ್ತಿರುವ ಏರಿ ಳಿತಗಳ ಬಗ್ಗೆ ತಮ್ಮ ಲೇಖನಿಯ ಮೂಲಕ ಸಂವೇದನೆ ನಡೆಸುತ್ತಿದ್ದ ಅನಂತಮೂರ್ತಿಯವರಿಗೆ ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಮಾತು ಕೇಳದ ವ್ಯವಸ್ಥೆಗಳೆ ಪ್ರಾಬಲ್ಯವಾಗು ತ್ತಿರುವ ಬಗ್ಗೆ ಕಳವಳವಿತ್ತು. ಅವರ ಬರವಣಿಗೆಯಲ್ಲಿ ಇದ್ದ ಅನೇಕ ಸತ್ವ ಯುತವಾದ ವಿಚಾರಗಳು ನಮ್ಮ ಸಮಾಜವನ್ನು ಮುಟ್ಟಿಲ್ಲ ಎನ್ನುವ ನೋವುಗಳನ್ನು ಅವರು ಕೊನೆಯ ದಿನಗಳಲ್ಲಿ ಅನುಭವಿಸಬೇಕಾಯ್ತು ಎಂದು ಹೇಳಿದರು.

ಅನಂತಮೂರ್ತಿಯವರ ಕೊನೆಯ ಕೃತಿ ‘ಮಾತು ಸೋತ ಭಾರತ’ ದಲ್ಲಿ ಈ ಎಲ್ಲ ವಿಚಾರಗಳನ್ನು ಹೇಳಿಕೊಳ್ಳುವ ಪ್ರಯತ್ನಗಳನ್ನು ಅವರು ಮಾಡಿದ್ದರು. ಅನಂತಮೂರ್ತಿ ಅವರು ತಮ್ಮ ಕೊನೆಯ ದಿನಗಳಲ್ಲಿ ಅನುಭವಿಸಿದ ಸಂಕಟ ಹಾಗೂ ಮಾನಸಿಕ ನೋವು ಗಳನ್ನು ಈ ಮುಂಚೆಯೇ ಬರಹದಲ್ಲಿ ತೆರೆದಿಡುವ ಪ್ರಯತ್ನ ಗಳನ್ನು ಮಾಡಿ ದ್ದರು ಎಂದು ಹೇಳಿದರು.

ಮಂಗಳೂರು ವಿ.ವಿಯ ಪ್ರಾಧ್ಯಾಪಕ ಡಾ.ರಾಜಾರಾಮ ತೊಳ್ಪಾಡಿ ಅವರು ಡಾ.ಯು.ಆರ್‌ ಅನಂತಮೂರ್ತಿ ಯ ವರ ರಾಜಕೀಯ ಚಿಂತನೆಗಳು ವಿಷ ಯದ ಬಗ್ಗೆ ಹಾಗೂ ಡಾ.ಮಹಾಬಲೇ ಶ್ವರ ರಾವ್ ಅವರು ಸಮಾನ ಶಿಕ್ಷಣ ವ್ಯವಸ್ಥೆಯ ಬಗ್ಗೆ ಮಾತನಾಡಿದರು.
ಬಳಿಕ ಅನಂತಮೂರ್ತಿಯವರ ಕಾದಂಬರಿ ಆಧಾರಿತ ಸಂಸ್ಕಾರ ಚಲನ ಚಿತ್ರದ ಪ್ರದರ್ಶನ ನಡೆಯಿತು. ಉಪ ನ್ಯಾಸಕ ಹಯವದನ ಮೂಡಸಗ್ರಿ ಪ್ರಾಸ್ತಾ­ವಿಕ ಮಾತನಾಡಿದರು. ಸಂಘ ಟನೆಯ ಕಾರ್ಯ ದರ್ಶಿ ಸದಾನಂದ ಬೈಂದೂರು ಸ್ವಾಗ­ತಿಸಿ­ದರು, ಅಧ್ಯಕ್ಷ ಉದಯ ಗಾಂವ್ಕರ್‌ ನಿರೂ ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT